ನಾಗ ಪಂಚಮಿ ಮುಹೂರ್ತ
ಎಲ್ಲ ಸಮಯದಲ್ಲೂ ಪೂಜಿಸುವುದಿಲ್ಲ ನಾಗದೇವತೆ ಪೂಜಿಸಲು ಹಿಂದೂ ಪಂಚಾಂಗ ಪ್ರಕಾರ ಈ ವರ್ಷದ ಶ್ರಾವಣಮಾಸ ಶುಕ್ಲಪಕ್ಷಪ ಆ.9, 20214 ಮಧ್ಯರಾತ್ರಿ 12.36ಕ್ಕೆ ಪ್ರಾರಂಭವಾಗುತ್ತದೆ. ಇದು ಆಗಸ್ಟ್ 10 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳುತ್ತದೆ. ನಾಗ ಪಂಚಮಿ ಪೂಜೆಯು ಬೆಳಗ್ಗೆ 05:47 ರಿಂದ 08:27 ರವರೆಗೆ ನಡೆಯಲಿದೆ. ಅಭಿಜಿತ್ ಮುಹೂರ್ತ ಮಧ್ಯಾಹ್ನ 12 ರಿಂದ 12:53 ರವರೆಗೆ ಇರುತ್ತದೆ. ಅಮೃತ್ ಕಾಲ ಸಂಜೆ 07:57 ರಿಂದ 09:45 ರವರೆಗೆ ಇರುತ್ತದೆ.
ನಾಗ ಪಂಚಮಿ ಪೂಜೆಯ ಪ್ರಯೋಜನ
ಭಗವಾನ್ ಶಿವನ ಕೊರಳಲ್ಲಿ ನಾಗದೇವತೆಯೂ ಸುತ್ತಿಕೊಂಡಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ನಾಗ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ, ಭಕ್ತರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಅನೇಕ ರೀತಿಯ ಮಂಗಳಕರ ಫಲಿತಾಂಶಗಳನ್ನು ಸಹ ಪಡೆಯುತ್ತಾರೆ. ಶಿವನ ಆರಾಧನೆಯಿಂದ ಗ್ರಹದೋಷ, ಹಾವು ಕಡಿತ, ಅಕಾಲಿಕ ಮರಣ, ವಿಶೇಷವಾಗಿ ಸರ್ಪದೋಷ ನಿವಾರಣೆಯಾಗುತ್ತದೆ. ಹೀಗಾಗಿ ಈ ದಿನ ನಾಗದೇವತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ನಾಗಪಂಚಮಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಹಾವುಗಳನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ನಾಗ ದೇವರನ್ನು ಪೂಜಿಸುವುದರಿಂದ ಸಂಪತ್ತು ಬರುತ್ತದೆ ಎಂದು ಹಿಂದೂಗಳು ನಂಬುತ್ತಾರೆ.
ನಾಗ ಪಂಚಮಿ ಪೂಜೆ ವಿಧಿ ಹೇಗೆ?
ನಾಗಪಂಚಮಿಯ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಇಡೀ ದಿನ ಶಿವನನ್ನೂ ಸ್ಮರಿಸಿ. ನೀವು ನಾಗ ಪಂಚಮಿಯಂದು ಉಪವಾಸ ಮಾಡುತ್ತಿದ್ದರೆ ಸಂಕಲ್ಪ ಮಾಡಿ ಇದರ ನಂತರ, ಮನೆಯಲ್ಲಿ ಹಾವಿನ ಮೂರ್ತಿ ಅಥವಾ ಊರಿನ ಶಿವ ದೇವಾಲಯದಲ್ಲಿನ ನಾಗದೇವನಿಗೆ ಹಾಲಿನ ಅಭಿಷೇಕ, ಆರತಿ ಬೆಳಗಿ ಮಾಡಿ ಹೂ ಹಣ್ಣು ಸಿಹಿತಿಂಡಿ ನೈವೇದ್ಯ ಮಾಡಿ. ಒಂದು ವೇಳೆ ಜಾತಕದಲ್ಲಿ ಸರ್ಪದೋಷವಿದ್ದರೆ ಶಿವಲಿಂಗದ ಮೇಲೆ ಒಂದು ಜೋಡಿ ಬೆಳ್ಳಿ ಹಾವುಗಳನ್ನು ಅರ್ಪಿಸಿ ಇದರಿಂದ ಸರ್ಪದೋಷದ ಅಹಿತಕರ ಘಟನೆಗಳಿಂದ ಮುಕ್ತಿ ಸಿಗುತ್ತದೆ.