ಇಂದಿನಿಂದ ಐದು ದಿನ ಈ ಕನಸು ಕಂಡ್ರೆ ನಿರ್ಲಕ್ಷ್ಯ ಬೇಡ, ಜೀವಕ್ಕೇ ಅಪಾಯತರ್ಬಹುದು ಎಚ್ಚರ

Published : Jun 06, 2026, 10:15 AM IST

ಸನಾತನ ಧರ್ಮದಲ್ಲಿ ಮೃತ್ಯು ಪಂಚಕ ವಿಶೇಷ ಮಹತ್ವ ಹೊಂದಿದೆ. ಇದನ್ನು ಹಾನಿಕಾರಕ ಮತ್ತು ನೋವಿನಿಂದ ಕೂಡಿದ ದಿನಗಳೆಂದು ನಂಬಲಾಗಿದೆ. ಇಂದಿನಿಂದ ಪಂಚಕ ಪ್ರಾರಂಭವಾಗಲಿದೆ. ಇಂದಿನಿಂದ ಐದು ದಿನ ಕೆಲ ಕನಸಿನ ಬಗ್ಗೆ ನೀವು ಜಾಗೃತರಾಗಿರಬೇಕು. 

PREV
15
ಮೃತ್ಯು ಪಂಚಕ ಯಾವಾಗಿನಿಂದ ಪ್ರಾರಂಭ?

ಪಂಚಾಂಗದ ಪ್ರಕಾರ, ಈ ಬಾರಿ ಮೃತ್ಯು ಪಂಚಕವು ಇಂದು ಅಂದ್ರೆ ಜೂನ್ 6, 2026 ರಂದು ಸಂಜೆ 7.03 ಕ್ಕೆ ಶುರುವಾಗಲಿದೆ. ಐದು ದಿನಗಳ ಮೃತ್ಯು ಪಂಚಕ ಇರಲಿದ್ದು, ಜೂನ್ 11, 2026 ರಂದು ಬೆಳಿಗ್ಗೆ 8.16 ಕ್ಕೆ ಕೊನೆಗೊಳ್ಳಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮೃತ್ಯು ಪಂಚಕ ಸಮಯದಲ್ಲಿ ಕನಸು ವಿಶೇಷತೆ ಹೊಂದಿರುತ್ತದೆ. ಕನಸಿನಲ್ಲಿ ಕೆಲವು ವಿಷಯ ಕಾಣಿಸಿದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

25
ಕನಸಿನಲ್ಲಿ ಈ ವಿಷಯ ಕಂಡ್ರೆ ಅಶುಭ

ಕನಸು ವಿಜ್ಞಾನದ ಪ್ರಕಾರ, ಅಳುವ ವ್ಯಕ್ತಿ, ಮುಳ್ಳಿನ ಸಸ್ಯಗಳು, ಮಾಂಸ ತಿನ್ನುವುದು ಅಥವಾ ಮಾಂಸ ಮಾರಾಟ ಮಾಡುವುದು ಕಂಡರೆ ಅದನ್ನು ಅಶುಭವೆಂದು ನಂಬಲಾಗುತ್ತದೆ. ಇದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಘಟನೆಯ ಸೂಚನೆ ನೀಡುತ್ತದೆ.

35
ಈ ಸ್ವಪ್ನ ಬಿದ್ರೆ ಎಚ್ಚರ

ಜೇನುನೊಣ ಅಥವಾ ಯಾವುದೇ ಪ್ರಾಣಿ ಅಥವಾ ಪಕ್ಷಿ ನಿಮ್ಮನ್ನು ಕಚ್ಚಿದಂತೆ ಕಂಡ್ರೆ ಅದು ಒಳ್ಳೆಯದಲ್ಲ. ಕೊಳಕು ನೀರು ಅಥವಾ ಕೆಸರಿನಲ್ಲಿ ಹಾರುವುದು, ಬೆಂಕಿ ಕಾಣಿಸಿಕೊಳ್ಳುವುದು ಕೂಡ ಸೂಕ್ತವಲ್ಲ.

45
ಬೆತ್ತಲೆ ಕನಸು

ಸ್ವಪ್ನದಲ್ಲಿ ನೀವು ಬೆತ್ತಲಾಗಿರುವಂತೆ ಕಂಡ್ರೂ ನೀವು ಜಾಗರೂಕರಾಗಿರಬೇಕು. ಜೂನ್ 11 ರವರೆಗೆ ನಿಮಗೆ ಇಂಥ ಕನಸುಗಳು ಬಿದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಗಂಭೀರವಾದ ಘಟನೆ ಸಂಭವಿಸಲಿದೆ ಎಂಬ ಸೂಚನೆಯಾಗಿದೆ. ಗಂಭೀರ ತೊಂದರೆಯಲ್ಲಿ ಸಿಲುಕಿರಬಹುದು. ಅನಾರೋಗ್ಯಕ್ಕೆ ಒಳಗಾಗಬಹುದು.

55
ಏನು ಮಾಡಬಾರದು?

ಮೃತ್ಯು ಪಂಚಕದ ಐದು ದಿನ ಯಾವುದೇ ಶುಭ ಸಮಾರಂಭವನ್ನು ಮಾಡಬೇಡಿ. ಯಾವುದೇ ಶುಭ ಸಮಾರಂಭದಲ್ಲಿ ಭಾಗವಹಿಸಬೇಡಿ.ವಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಮರ ಕಡಿಯುವು ಕೆಲಸ ಮಾಡಬೇಡಿ. ಮರಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಖರೀದಿ ಮಾಡಬೇಡಿ. ದಕ್ಷಿಣದ ಕಡೆಗೆ ಪ್ರಯಾಣಿಸುವುದನ್ನು ತಪ್ಪಿಸಿ. ಹಣಕಾಸಿನ ವಹಿವಾಟುಗಳನ್ನು ಕಡಿಮೆ ಮಾಡಿ.ಹೊಸ ವಸ್ತುಗಳು ಅದರಲ್ಲೂ ದುಬಾರಿ ವಸ್ತುಗಳನ್ನು ಖರೀದಿ ಮಾಡಬೇಡಿ.

Read more Photos on
click me!

Recommended Stories