ರಾತ್ರಿ ಎಂಜಲು ಪಾತ್ರೆ ತೊಳೆಯದೇ ಇಡಬೇಡಿ, ಆಗೋ ಸಮಸ್ಯೆ ಒಂದೆರಡಲ್ಲ!

First Published May 1, 2024, 2:58 PM IST

ಧಾರ್ಮಿಕ ನಂಬಿಕೆಯ ಪ್ರಕಾರ, ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ. ಆದ್ದರಿಂದ, ಸನಾತನ ಧರ್ಮದಲ್ಲಿ, ಮನೆಯ ಸ್ವಚ್ಛತೆಗೆ ವಿಶೇಷ ಗಮನ ನೀಡಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ರಾತ್ರಿಯಲ್ಲಿ ಎಂಜಲು ಪಾತ್ರೆಗಳನ್ನು ಬಿಡುವುದು ಸಹ ತಾಯಿ ಲಕ್ಷ್ಮಿಗೆ ಕೋಪ ತರುತ್ತದೆ.
 

ಮನೆ ಕೆಲಸಗಳನ್ನು ನಿರ್ವಹಿಸುವ ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಈ ನಿಯಮಗಳಲ್ಲಿ ಒಂದು ರಾತ್ರಿಯಲ್ಲಿ ಅಡುಗೆ ಮನೆಯಲ್ಲಿ ಎಂಜಲು ಪಾತ್ರಗಳನ್ನು ಬಿಡುವುದನ್ನು ನಿಷೇಧಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ರಾತ್ರಿಯಲ್ಲಿ ಎಂಜಲು ಪಾತ್ರೆಗಳನ್ನು ಬಿಡುವುದರಿಂದ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು (fincancial problem) ಎದುರಿಸ ಬೇಕಾಗುತ್ತದೆ. ರಾತ್ರಿಯಲ್ಲಿ ಎಂಜಲು ಪಾತ್ರೆಗಳನ್ನು ಬಿಡುವುದರಿಂದ ವ್ಯಕ್ತಿಯು ಯಾವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಯೋಣ. 
 

ಧಾರ್ಮಿಕ ನಂಬಿಕೆಯ ಪ್ರಕಾರ, ಯಾವ ಮನೆ ಸ್ವಚ್ಚವಾಗಿರುತ್ತೋ, ಆ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ. ಆದ್ದರಿಂದ, ಸನಾತನ ಧರ್ಮದಲ್ಲಿ, ಮನೆಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಮನೆಯಲ್ಲಿ ಶುಚಿತ್ವದ ಕೊರತೆಯಿಂದ ವ್ಯಕ್ತಿಯು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಎಂಜಲು ಪಾತ್ರೆಗಳನ್ನು ರಾತ್ರಿಯಲ್ಲಿ ಬಿಡಬಾರದು.

ರಾತ್ರಿಯಲ್ಲಿ ಅಡುಗೆ ಮನೆಯನ್ನು ಕೊಳಕಾಗಿ ಬಿಡುವುದು ವ್ಯಕ್ತಿಯ ಗ್ರಹಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದು ಮಾನವ ಜೀವನದ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರುತ್ತದೆ. ಹಾಗಾಗಿ ರಾತ್ರಿ ಪೂರ್ತಿಯಾಗಿ ಅಡುಗೆ ಕೋಣೆ ಕ್ಲೀನ್ ಮಾಡಿ ಮಲಗಿ. 
 

ಇದಲ್ಲದೆ, ರಾತ್ರಿಯಲ್ಲಿ ಕೊಳಕು ಪಾತ್ರೆಗಳನ್ನು ಬಿಡುವುದು ಕುಟುಂಬ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ.  ಲಕ್ಷ್ಮಿ ದೇವಿಯು (Goddess Lakshmi) ಕೋಪಗೊಳ್ಳುತ್ತಾಳೆ. ಅಲ್ಲದೆ, ಮನೆಯ ಏಳಿಗೆಯಾಗೋದು ಅಥವಾ ಪ್ರಗತಿಯಾಗೋದಕ್ಕೆ ತಡೆಯಾಗುತ್ತದೆ ಎನ್ನಲಾಗುತ್ತದೆ. 
 

ರಾತ್ರಿಯಲ್ಲಿ ಸ್ಟೌ ಅಥವಾ ಒಲೆಯನ್ನು ಕೊಳಕಾಗಿ ಬಿಡುವುದು ಸಹ ಅಶುಭ. ರಾತ್ರಿಯಲ್ಲಿ  ಒಲೆಯನ್ನು ಕೊಳಕಾಗಿ ಬಿಟ್ಟರೆ ತಾಯಿ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ. ಆದ್ದರಿಂದ, ರಾತ್ರಿಯಲ್ಲಿ ಸ್ಟೌ ಚೆನ್ನಾಗಿ ಕ್ಲೀನ್ ಮಾಡೋದನ್ನು ಮರೆಯಬೇಡಿ. 
 

ಕೆಲವು ಕಾರಣಗಳಿಂದಾಗಿ ರಾತ್ರಿಯಲ್ಲಿ ಪಾತ್ರೆಗಳನ್ನು (cleaning vessels) ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದರೆ, ಈ ಸಂದರ್ಭದಲ್ಲಿ ನೀವು ಪಾತ್ರೆಗಳನ್ನು ನೀರಿನಿಂದ ತೊಳೆದು ಬಿಡಿ. ಪಾತ್ರೆಗಳಲ್ಲಿ ಎಂಜಲು ಒಣಗಲು ಬಿಡಬೇಡಿ. ಇದರಿಂದ ಮನೆಗೆ ಕೆಟ್ಟದಾಗುತ್ತದೆ. 

click me!