ಯಾವ ಬೆರಳಿಗೆ ಉಂಗುರ ಧರಿಸೋದು ಉತ್ತಮ?

Suvarna News   | Asianet News
Published : Aug 19, 2021, 06:18 PM IST

ಪ್ರತಿಯೊಂದು ಬೆರಳಿಗೂ ತನ್ನದೇ ಆದ ಪ್ರಾಮುಖ್ಯತೆ ಮತ್ತು ಮಹತ್ವವಿದೆ. ಕೇವಲ ಫ್ಯಾಷನ್‌ಗಾಗಿ ಬೆರಳುಗಳಲ್ಲಿ ಉಂಗುರಗಳನ್ನು ಧರಿಸುತ್ತೇವೆ ಆದರೆ ಉಂಗುರಗಳನ್ನು ಧರಿಸಿದ ನಂತರ ಪ್ರತಿಯೊಂದೂ ಬೆರಳು ಏನನ್ನು ಸೂಚಿಸುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ. ಉಂಗುರಗಳನ್ನು ಧರಿಸಿದ ನಂತರ ನಿರ್ದಿಷ್ಟ ಬೆರಳು ಏನನ್ನು ಸೂಚಿಸುತ್ತದೆ ಎಂಬುದರ ಅರ್ಥವನ್ನು ನೋಡೋಣ-

PREV
110
ಯಾವ ಬೆರಳಿಗೆ ಉಂಗುರ ಧರಿಸೋದು ಉತ್ತಮ?

ಹೆಬ್ಬೆರಳು
ಹೆಬ್ಬೆರಳು ಒಬ್ಬ ವ್ಯಕ್ತಿಯಲ್ಲಿ ಇಚ್ಛಾಶಕ್ತಿಯನ್ನು ಸಂಕೇತಿಸುತ್ತದೆ, ಮತ್ತು ಎಲ್ಲಾ ಬೆರಳುಗಳಲ್ಲಿ ಅತ್ಯಂತ ಸ್ವತಂತ್ರವಾದ ಬೆರಳು ಇದಾಗಿದೆ. ಈ ಬೆರಳು ವ್ಯಕ್ತಿಯ ಆಂತರಿಕ ಆತ್ಮದೊಂದಿಗೆ ಸಂಪರ್ಕ ಹೊಂದಿದೆ. ಹೇಗೆ ಅನ್ನೋದು ಗೊತ್ತಿದೆಯೇ? 

210

ಹೆಬ್ಬೆರಳಿಗೆ ಉಂಗುರ ಧರಿಸುವಂತೆ ತಿಳಿಸಿದ್ದರೆ, ಜೀವನದಲ್ಲಿ ಸಂಭವಿಸುವ ಎಲ್ಲಾ ಬದಲಾವಣೆಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಉಂಗುರವು ಇಚ್ಛಾಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಬ್ಬೆರಳಿಗೆ ಆದ್ಯತೆಯ ಕಲ್ಲುಗಳು ಮಾಣಿಕ್ಯ ಮತ್ತು ಗಾರ್ನೆಟ್.

310

ತೋರು ಬೆರಳು 
ತೋರುಬೆರಳು ಅಧಿಕಾರ, ನಾಯಕತ್ವ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ಈ ಬೆರಳು ಒಂದು ನಿರ್ದಿಷ್ಟ ರೀತಿಯ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಇದು ವಿಶೇಷವಾಗಿ ಪ್ರಾಚೀನ ದಿನಗಳಲ್ಲಿ ಪ್ರಬಲ ರಾಜರು ತಮ್ಮ ತೋರು ಬೆರಳಿಗೆ ಉಂಗುರಗಳನ್ನು ಧರಿಸಿದ್ದರು. 

410

ತೋರು ಬೆರಳಿಗೆ ಉಂಗುರ ಧರಿಸುವುದರಿಂದ ರಾಜ ಮಹಾರಾಜರಂತೆ ಜೀವನದಲ್ಲಿ ಉತ್ತೇಜನ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ತೋರು ಬೆರಳಿಗೆ ನೀವು ಧರಿಸಬೇಕಾದಂತಹ ಆದ್ಯತೆಯ ಕಲ್ಲುಗಳು ಎಂದರೆ ನೀಲಿ ಟೋಪಾಜ್ ಮತ್ತು ಅಮೆಥಿಸ್ಟ್.

510

ಮಧ್ಯ ಬೆರಳು 
ಮಧ್ಯದ ಬೆರಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ, ಮತ್ತು ಇದು ಜೀವನದ ಉದ್ದೇಶಕ್ಕೆ ಸಂಬಂಧಿಸಿದೆ. ಮಧ್ಯದಲ್ಲಿ ನೆಲೆಗೊಂಡಿರುವ ಇದು ಸಮತೋಲಿತ ಜೀವನವನ್ನು ಸಂಕೇತಿಸುತ್ತದೆ. ಈ ಬೆರಳಿಗೆ ಉಂಗುರವನ್ನು ಧರಿಸುವುದರಿಂದ  ಜೀವನದಲ್ಲಿ ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

610

ಮಧ್ಯ ಬೆರಳಿಗೆ ಉಂಗುರ ಧರಿಸುವುದು ಒಬ್ಬ ವ್ಯಕ್ತಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಇದು ನಿಮಗೆ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ನೆರವಾಗುತ್ತದೆ. ಮಧ್ಯದ ಬೆರಳಿಗೆ ಆದ್ಯತೆಯ ಕಲ್ಲುಗಳು ಕ್ವಾರ್ಟ್ಜ್ ಮತ್ತು ಹವಳ.

710

ರಿಂಗ್ ಫಿಂಗರ್ 
ಉಂಗುರಬೆರಳು ನಾಲ್ಕನೇ ಬೆರಳು. ಎಡಗೈನ ಈ ಬೆರಳಿಗೆ ಹೃದಯದೊಂದಿಗೆ ನೇರ ಸಂಬಂಧವಿದೆ. ಆದ್ದರಿಂದ ಈ ಬೆರಳಿಗೆ ಮದುವೆಯ ಉಂಗುರವನ್ನು ಧರಿಸಲಾಗುತ್ತದೆ. ಎಂಗೇಜ್ ಮೆಂಟ್ ನಡೆದಾಗ ಇಬ್ಬರೂ ಉಂಗುರ ಬೆರಳಿಗೆ ಉಂಗುರ ಧರಿಸುತ್ತಾರೆ. ಇದು ಇಬ್ಬರ ಹೃದಯವನ್ನು ಬೆರೆಸುತ್ತದೆ, ಇದು ಒಬ್ಬ ವ್ಯಕ್ತಿಯಲ್ಲಿ ಭಾವನೆಗಳು ಮತ್ತು ಸೃಜನಶೀಲತೆಯನ್ನು ಸಹ ಪ್ರತಿನಿಧಿಸುತ್ತದೆ. 

810


ಬಲಗೈಗೆ ಉಂಗುರವನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಹೆಚ್ಚು ಆಶಾವಾದಿಯಾಗಲು ಸಹಾಯ ಮಾಡುತ್ತದೆ. ಜೀವನ ಉತ್ತಮವಾಗಿರಲು ನೆರವಾಗುತ್ತದೆ.  ಉಂಗುರಬೆರಳಿಗೆ ಆದ್ಯತೆಯ ಕಲ್ಲುಗಳು ಜೇಡ್ ಮತ್ತು ಮೂನ್ ಸ್ಟೋನ್.

910

ಲಿಟಲ್ ಫಿಂಗರ್
ಕಿರುಬೆರಳು ಸಂಬಂಧಗಳ ಬಗ್ಗೆ ಎಲ್ಲವನ್ನೂ ಪ್ರತಿನಿಧಿಸುತ್ತದೆ. ಈ ಬೆರಳು ಹೆಬ್ಬೆರಳಿಗೆ ಹೋಲಿಸಿದರೆ ಹೊರಗಿನ ಪ್ರಪಂಚದೊಂದಿಗಿನ ಸಹವಾಸಗಳ ಬಗ್ಗೆ, ಇತರರ ಬಗ್ಗೆ ಮನೋಭಾವವನ್ನು ಪ್ರತಿನಿಧಿಸುತ್ತದೆ. ಈ ಬೆರಳಿಗೆ ಉಂಗುರವನ್ನು ಧರಿಸುವುದು ಅವರ ಸಂಬಂಧಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

1010

ವಿಶೇಷವಾಗಿ ಮದುವೆ ಷಯದಲ್ಲಿ, ಮತ್ತು ವ್ಯವಹಾರ ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಸಂಬಂಧಗಳ ಬಗ್ಗೆ ವ್ಯಕ್ತಿಯ ಮನೋಭಾವವನ್ನು ಉತ್ತಮವಾಗಿ ಬದಲಾಯಿಸಲು ಸಹಾಯ ಮಾಡುತ್ತದೆ. ಸೃಜನಶೀಲತೆಯು ಭಾವನಾತ್ಮಕ ಮತ್ತು ಭೌತಿಕ ವಿಷಯಗಳೊಂದಿಗೆ ಸಂಬಂಧ ಹೊಂದಿದ್ದು. ಕಿರುಬೆರಳಿಗೆ ಆದ್ಯತೆಯ ಕಲ್ಲುಗಳು ಅಂಬರ್ ಮತ್ತು ಸಿಟ್ರಿನ್.

click me!

Recommended Stories