ಸಹೋದರಿಯರು ರಾಶಿ ಪ್ರಕಾರ ರಕ್ಷಾಬಂಧನ ಕಟ್ಟಿದರೆ ಸಹೋದರನಿಗೆ ಲಕ್!

First Published Aug 17, 2021, 12:39 PM IST

ಸಹೋದರ-ಸಹೋದರಿಯರ ಸಂಬಂಧವನ್ನು ಸಾರಿ ಹೇಳುವ ಹಬ್ಬವೇ ರಕ್ಷಾಬಂಧನ. ರಕ್ಷಾಬಂಧನದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರಿಗಾಗಿ ಸುಂದರ ರಾಖಿಗಳನ್ನು ಆರಿಸುವುದರಲ್ಲಿ ನಿರತರಾಗಿದ್ದಾರೆ, ಸಹೋದರರು ತಮ್ಮ ಪ್ರೀತಿಯ ಸಹೋದರಿಗಾಗಿ ಅತ್ಯುತ್ತಮ ಉಡುಗೊರೆಯನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನದ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಬಾರಿ ರಾಖಿ ತೆಗೆದುಕೊಳ್ಳುವಾಗ ಈ ಒಂದು ವಿಷಯದ ಬಗ್ಗೆ ಗಮನ ಹರಿಸಿದರೆ, ಈ ರಕ್ಷಾಬಂಧನವು ತಮ್ಮ ಸಹೋದರನಿಗೆ ಅತ್ಯಂತ ಮಂಗಳಕರವೆಂದು ಸಾಬೀತುಪಡಿಸಬಹುದು. ಇದಕ್ಕಾಗಿ, ಸಹೋದರಿಯು ತನ್ನ ಸಹೋದರನ ರಾಶಿಗೆ ಅನುಗುಣವಾಗಿ ರಾಖಿ ಕಟ್ಟಬೇಕು. ಆಗಸ್ಟ್ 22 ರ ರಕ್ಷಾಬಂಧನದ ದಿನದಂದು  ಸಹೋದರನಿಗೆ ಯಾವ ರಾಖಿಯನ್ನು ಕಟ್ಟುವುದು ಉತ್ತಮ ಎಂದು ತಿಳಿಯಿರಿ.

ರಾಶಿಚಕ್ರದ ಪ್ರಕಾರ ರಾಖಿಯನ್ನು ಆರಿಸಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೆ ಅನುಗುಣವಾಗಿ ಮಂಗಳಕರ ಬಣ್ಣ, ದಿನ, ರತ್ನ ಇತ್ಯಾದಿಗಳನ್ನು ಹೇಳಲಾಗಿದೆ. ಆಯಾ ರಾಶಿಚಕ್ರದ ವ್ಯಕ್ತಿಯು ಆ ವಸ್ತುಗಳನ್ನು ಬಳಸುವುದರಿಂದ, ಅವನು ಅಪಾರ ಶಕ್ತಿಯನ್ನು ಪಡೆಯುತ್ತಾನೆ. ಕುಂಡಲಿಯಲ್ಲಿರುವ ಗ್ರಹಗಳು ಪ್ರಬಲವಾಗಿರುವಾಗ ಇದು ಅವನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಹೋದರನಿಗೆ ತನ್ನ ರಾಶಿಚಕ್ರದ ಪ್ರಕಾರ ವಿಶೇಷ ಬಣ್ಣದ ರಾಖಿಯನ್ನು ಕಟ್ಟುವುದು ಅವನಿಗೆ ಅತ್ಯಂತ ಶುಭಕರವೆಂದು ಸಾಬೀತಾಗುತ್ತದೆ. ಆ ಬಣ್ಣದ ರಾಖಿ ಲಭ್ಯವಿಲ್ಲದಿದ್ದರೆ, ಕನಿಷ್ಠ ಆ ಬಣ್ಣದ ರಾಖಿಯ ಎಳೆಯನ್ನು ಕಟ್ಟುವುದರಿಂದಲೂ ಸಹೋದರ ಅದೃಷ್ಟ ಬದಲಾಗುತ್ತದೆ ಎಂದು ನಂಬಲಾಗಿದೆ.

ಮೇಷ ರಾಶಿ: 
ಸಹೋದರನ ರಾಶಿಯು ಮೇಷರಾಶಿಯಾಗಿದ್ದರೆ, ರಕ್ಷಾಬಂಧನದ ದಿನದಂದು ಅವನಿಗೆ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಬಹಳ ಒಳ್ಳೆಯದು. ಇದು ಸಹೋದರನನ್ನು ಪವರ್ ಫುಲ್ ಆಗಿ ಮಾಡುವುದು ಮಾತ್ರವಲ್ಲ, ಅವರ ಜೀವನವು ಸದಾ ಸುಖ-ಶಾಂತಿ, ನೆಮ್ಮದಿಯಿಂದ ಇರುವಂತೆ ಮಾಡುತ್ತದೆ.
 

ವೃಷಭ ರಾಶಿ: 
ಈ ರಾಶಿಯ ಜನರಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದು ತುಂಬಾ ಶುಭಕರವಾಗಿರುತ್ತದೆ. ಇದರೊಂದಿಗೆ, ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅವರಿಗೆ ನೀಡುವುದು ತುಂಬಾ ಒಳ್ಳೆಯದು. ಅಣ್ಣ-ತಮ್ಮನಿಗೆ ಶುಭವಾಗಲೆಂದು ಕಟ್ಟುವ ರಾಖಿಗೆ ಅರ್ಥ ಹೆಚ್ಚಿಸಿ. 

ಮಿಥುನ ರಾಶಿ: 
ಸಹೋದರ ಮಿಥುನ ರಾಶಿಯವರಾಗಿದ್ದರೆ, ಅವರಿಗೆ ಹಸಿರು ಬಣ್ಣದ ರಾಖಿಯನ್ನು ಆರಿಸಿ. ಇದು ಅವರನ್ನು ತೊಂದರೆಗಳಿಂದ ರಕ್ಷಿಸುತ್ತದೆ. ಹಸಿರು ಸಮೃದ್ಧಿಯ ಸಂಕೇತ. ಇಂಥ ಱಾಖಿ ಕಟ್ಟರೆ ಸಹೋದರನಿಗೂ ಶಾಂತಿ, 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರಿಗೆ ಬಿಳಿ ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಶುಭಕರವಾಗಿರುತ್ತದೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.


ಸಿಂಹ ರಾಶಿ: 
ಸಹೋದರ ಸಿಂಹ ರಾಶಿಯವರಾಗಿದ್ದರೆ ಅವರಿಗೆ  ಕೆಂಪು ಅಥವಾ ಹಳದಿ ಬಣ್ಣಗಳ ರಾಖಿ ಕಟ್ಟುವುದರಿಂದ ಅವರ ಅದೃಷ್ಟ ಬದಲಾಗುವುದು ಎಂಬ ನಂಬಿಕೆ ಇದೆ.


ಕನ್ಯಾ ರಾಶಿ: 
ಈ ರಾಶಿಯ ಸಹೋದರನಿಗೆ ಕಿತ್ತಳೆ ಬಣ್ಣದ ರಾಖಿ ಅತ್ಯುತ್ತಮವಾಗಿರುತ್ತದೆ. ಇದು ಅವರ ಜೀವನದಲ್ಲಿ ಧೈರ್ಯ, ಉತ್ಸಾಹವನ್ನು ತುಂಬುತ್ತದೆ.


ತುಲಾ ರಾಶಿ: 
ರಕ್ಷಾಬಂಧನದಲ್ಲಿ  ತುಲಾ ರಾಶಿಯವರಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದು ಮತ್ತು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ತುಂಬಾ ಒಳ್ಳೆಯದು.

.

ವೃಶ್ಚಿಕ ರಾಶಿ: 
ಈ ರಾಶಿಯವರಿಗೆ ಅವರ ಸಹೋದರಿಯರು ಕೆಂಪು ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟಿದರೆ ಅದು ಶುಭಕರವಾಗಿರುತ್ತದೆ.

ಧನು ರಾಶಿ: 
ಧನು ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ರಾಖಿ ಕಟ್ಟಿಸಿ ಮತ್ತು ಅವರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ತಿನ್ನಿಸಿ. ಇದು ಸಹೋದರನ ಸಂಪತ್ತನ್ನು ಹೆಚ್ಚಿಸುತ್ತದೆ.


 ಸಹೋದರ ಮಕರ ರಾಶಿಯವರಾಗಿದ್ದರೆ ಅವರಿಗೆ ನೀಲಿ ಬಣ್ಣದ ರಾಖಿಯನ್ನು ಕಟ್ಟುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
 


ಕುಂಭ ರಾಶಿ: 
ಈ ರಾಶಿಯ ಜನರಿಗೆ, ಅವರ ಸಹೋದರಿಯರು ನೀಲಿ ಬಣ್ಣದ ರಾಖಿಯನ್ನು ಆರಿಸಿದರೆ, ನಿಮ್ಮ ಸಹೋದರನಿಗೆ ಎಂತಹದ್ದೇ ಕಷ್ಟ ಎದುರಾದರೂ ಜಯಶಾಲಿಯಾಗುತ್ತಾರೆ.

ಮೀನ ರಾಶಿ: 
ಮೀನ ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ಸುಂದರ ರಾಖಿಯನ್ನು ಕಟ್ಟುವುದು ಶುಭಕರವಾಗಿರುತ್ತದೆ. ರಕ್ಷಾಬಂಧನದ ದಿನದಂದು ಸಹೋದರಿಯರು ಈ ಜನರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ಶುಭ.

click me!