ಶಿವ ಪುರಾಣ: ಸಾಯೋ ಮುನ್ನ ಗೋಚರಿಸುವ ಆರು ಚಿಹ್ನೆಗಳು!

First Published Aug 18, 2021, 4:43 PM IST

ಸಾವು ಕೊನೆಯ ಸತ್ಯ, ಆದರೂ ಪ್ರತಿಯೊಬ್ಬರೂ ಅದಕ್ಕೆ ಹೆದರುತ್ತಾರೆ ಮತ್ತು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಸಾವು ಹೇಗೆ ಸಂಭವಿಸುತ್ತದೆ ಮತ್ತು ಸಾವಿನ ನಂತರದ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಊಹಾಪೋಹಗಳೂ ಇವೆ. ಸಾವು ಬರುವ ಮೊದಲು ಸಂಧಿಸುವ ಚಿಹ್ನೆಗಳು ಮತ್ತು ಅನುಭವಗಳ ಬಗ್ಗೆ ಇಲ್ಲಿವೆ. ಒಬ್ಬ ವ್ಯಕ್ತಿಯು ಯಾವುದೇ ಸಮಯದಲ್ಲಿ ಸಾಯಬಹುದು ಎಂದು ಅದು ಸೂಚಿಸುತ್ತದೆ. ಈ ಸಾವಿನ ಚಿಹ್ನೆಗಳನ್ನು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಛಾಯೆ ಗೋಚರಿಸುವುದಿಲ್ಲ
ಶಿವ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವು ಹತ್ತಿರವಾದಾಗ, ಅವನ ನೆರಳು ಕಾಣಿಸಿಕೊಳ್ಳುವುದನ್ನು ನಿಲ್ಲಿಸುತ್ತದೆ ಎಂದು ಹೇಳಲಾಗುತ್ತದೆ. ಅವನು ತನ್ನ ನೆರಳನ್ನು ನೀರಿನಲ್ಲಿ, ತುಪ್ಪದಲ್ಲಿ, ಗಾಜಿನಲ್ಲಿ ಕಾಣುವುದಿಲ್ಲ. 

ಸಾವಿಗೆ ಮೊದಲು ದೇಹ ಬದಲಾಗುತ್ತದೆ 
ವ್ಯಕ್ತಿಯ ಬಾಯಿ, ನಾಲಿಗೆ, ಮೂಗು, ಕಿವಿಗಳು ಕೆಲಸ ಮಾಡುವುದನ್ನು ನಿಲ್ಲಿಸುವುದು ಅಥವಾ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ, ಇವು ಆರಂಭಿಕ ಸಾವಿನ ಚಿಹ್ನೆಗಳಾಗಿವೆ. ಇದರ ಜೊತೆಗೆ ಇಡೀ ದೇಹ ಬಿಳಿ ಆಗುವುದು ಅಥವಾ ಹಳದಿ ಆಗುವುದು ಕೂಡ ಸಾವಿನ ಸಂಕೇತ. 

ಸೂರ್ಯ ಚಂದ್ರ ಕಪ್ಪು ಆಗಿ ಕಾಣುತ್ತಾನೆ
ಒಬ್ಬ ವ್ಯಕ್ತಿಯು ಸೂರ್ಯ ಮತ್ತು ಚಂದ್ರನನ್ನು ಕಪ್ಪು ಬಣ್ಣದಲ್ಲಿ ನೋಡಿದಾಗ ಅಥವಾ ಅವರ ಸುತ್ತಲೂ ಪ್ರಕಾಶಮಾನವಾದ, ಕೆಂಪು, ಕಪ್ಪು ವೃತ್ತವನ್ನು ನೋಡಿದಾಗ, ಅವನು ಸ್ವಲ್ಪ ಸಮಯದ ನಂತರ ಸಾಯಬಹುದು ಎಂಬುದನ್ನು ಸೂಚಿಸುತ್ತದೆ ಎನ್ನಲಾಗುತ್ತದೆ.

ಬೆಂಕಿಯ ಬೆಳಕು ಕಾಣದಿರುವುದು
ಒಬ್ಬ ವ್ಯಕ್ತಿಯು ಉಳಿದೆಲ್ಲವನ್ನೂ ಕಂಡರೂ ಬೆಂಕಿಯಿಂದ ಬೆಳಕು ಹೊರಬರುವುದು ಕಾಣದಿದ್ದರೆ, ಅವನ ಸಾವಿನ ಸಮಯ ಹತ್ತಿರವಿರಬಹುದು. ಈ ರೀತಿಯಾದಾಗ ಧೈರ್ಯದಿಂದ ಸಾವನ್ನು ಎದುರಿಸಲು ಸಿದ್ಧವಾಗುವುದೊಳಿತು.

ಪಾರಿವಾಳ ತಲೆ ಮೇಲೆ ಕುಳಿತುಕೊಳ್ಳುವುದು
ಒಬ್ಬ ವ್ಯಕ್ತಿಯ ತಲೆಯ ಮೇಲೆ ರಣಹದ್ದು, ಕಾಗೆ ಅಥವಾ ಪಾರಿವಾಳವನ್ನು ಕುಳಿತುಕೊಳ್ಳುವುದು ಅವನ ವಯಸ್ಸನ್ನು ಕಡಿಮೆ ಮಾಡುವ ಸಂಕೇತ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಇದ್ದಕ್ಕಿದ್ದಂತೆ ನೀಲಿ ನೊಣಗಳಿಂದ ಸುತ್ತುವರೆದಿದ್ದರೆ, ಅದು ಸಾವಿನ ಸಂಕೇತವೂ ಆಗಿದೆ. 

ಸೌರವ್ಯೂಹ
ಒಬ್ಬ ವ್ಯಕ್ತಿಯ ಸಾವು ಹತ್ತಿರವಾದಾಗ, ಅವನು ಸೌರವ್ಯೂಹದಲ್ಲಿ ಧ್ರುವ ನಕ್ಷತ್ರ ಅಥವಾ ಯಾವುದೇ ನಕ್ಷತ್ರವನ್ನು ನೋಡಲು ಸಾಧ್ಯವಿಲ್ಲ ಅವನು ರಾತ್ರಿಯಲ್ಲಿ ಕಾಮನಬಿಲ್ಲುಗಳನ್ನು ಮತ್ತು ಹಗಲಿನಲ್ಲಿ ಉಲ್ಕೆಗಳನ್ನು ನೋಡಲು ಪ್ರಾರಂಭಿಸುತ್ತಾನೆ.

click me!