ಭಗವಾನ್ ವಿಷ್ಣು, ತಾಯಿ ಲಕ್ಷ್ಮೀ ದೇವಿಗೆ ಶಾಪ ನೀಡಿದ್ಯಾಕೆ?

Published : Aug 14, 2023, 04:42 PM IST

ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಲೀಲೆಗಳನ್ನು ವಿವರಿಸುವ ಅನೇಕ ಪೌರಾಣಿಕ ಕಥೆಗಳಿವೆ. ಇದಲ್ಲದೆ, ತಾಯಿ ಲಕ್ಷ್ಮಿ ಮೇಲಿನ ವಿಷ್ಣುವಿನ ಪ್ರೀತಿಯನ್ನು ಚಿತ್ರಿಸುವ ಅನೇಕ ಕಥೆಗಳಿವೆ.  ಆದರೆ ಯಾವತ್ತಾದರೂ ವಿಷ್ಣು, ಲಕ್ಷ್ಮೀಗೆ ಶಾಪ ನೀಡಿರುವ ಬಗ್ಗೆ ತಿಳಿದಿದೆಯೇ?  

PREV
16
ಭಗವಾನ್ ವಿಷ್ಣು, ತಾಯಿ ಲಕ್ಷ್ಮೀ ದೇವಿಗೆ ಶಾಪ ನೀಡಿದ್ಯಾಕೆ?

ಸನಾತನ ಸಂಪ್ರದಾಯದಲ್ಲಿ ವಿಷ್ಣು ಮತ್ತು ಲಕ್ಷ್ಮಿಗೆ (Lord Vishnu and Lakshmi) ಸಂಬಂಧಿಸಿದ ಅನೇಕ ಕಥೆಗಳಿವೆ. ಅವುಗಳ ಬಗ್ಗೆ ನೀವು ಹೆಚ್ಚಿನ ಮಾಹಿತಿಗಳನ್ನು ಈಗಾಗಲೇ ಕೇಳಿರುತ್ತೀರಿ. ವಿಷ್ಣು ಮತ್ತು ಲಕ್ಷ್ಮಿಯ ಪ್ರೇಮ ಕಥೆ, ಅನ್ಯೋನ್ಯತೆ ಬಗ್ಗೆ ಕೇಳಿರುತ್ತೀರಿ. ಆದರೆ ಲಕ್ಷ್ಮೀ ದೇವಿಗೆ ಶಾಪ ನೀಡಿದ ವಿಷ್ಣುವಿನ ಕತೆಯ ಬಗ್ಗೆ ಕೇಳಿರದಿದ್ದರೆ ಇಲ್ಲಿದೆ ಓದಿ… 
 

26

ಒಮ್ಮೆ ವಿಷ್ಣುವು ತಾಯಿ ಲಕ್ಷ್ಮಿಗೆ ಭಯಾನಕ ಶಾಪವನ್ನು (curse by Vishnu) ನೀಡಿದನು ಎಂದು ಹೇಳಲಾಗುತ್ತೆ. ಈ ಶಾಪದಿಂದ, ತಾಯಿ ಲಕ್ಷ್ಮಿ ನರಳಬೇಕಾಯಿತು. ತಾಯಿ ಲಕ್ಷ್ಮಿಗೆ ಏಕೆ ಮತ್ತು ಯಾವ ಶಾಪವನ್ನು ವಿಷ್ಣು ನೀಡಿದರು ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

36

ವೈಕುಂಠದಲ್ಲಿ ಬಿಳಿ ಕುದುರೆ 
ಒಮ್ಮೆ ವೈಕುಂಠದಲ್ಲಿ ಬಿಳಿ ಕುದುರೆಯೊಂದು ಬಂದಿತು. ಆ ಕುದುರೆಯ ಸೌಂದರ್ಯವನ್ನು ನೋಡಿ, ತಾಯಿ ಲಕ್ಷ್ಮಿಯ ಗಮನವು ವಿಷ್ಣುವಿನಿಂದ ಬೇರೆಡೆಗೆ ತಿರುಗಿತು.ತಾಯಿ ಲಕ್ಷ್ಮಿ ಆ ಕುದುರೆಯನ್ನು ಮೆಚ್ಚುವುದರಲ್ಲಿ ಸಂಪೂರ್ಣವಾಗಿ ಕಳೆದು ಹೋದಳು.ಮತ್ತೊಂದೆಡೆ, ವಿಷ್ಣು ತಾಯಿ ಲಕ್ಷ್ಮಿಯೊಂದಿಗೆ (Goddess Lakshmi) ಮಾತನಾಡುತ್ತಲೇ ಇದ್ದನು. ಇದ್ಯಾವುದೂ ಲಕ್ಷ್ಮೀಗೆ ಗೊತ್ತಾಗಲೇ ಇಲ್ಲ.  

46

ವಿಷ್ಣುವಿಗೆ ಕೋಪ ಬಂತು 
ಮಾತನಾಡುವುದನ್ನು ನಿಲ್ಲಿಸಿ, ವಿಷ್ಣುವು ಲಕ್ಷ್ಮಿ ಮಾತೆಗೆ ಏನೋ ಪ್ರಶ್ನೆ ಕೇಳಿದನು. ತಾಯಿ ಲಕ್ಷ್ಮಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ಶ್ರೀ ಹರಿ ಕಣ್ಣು ತೆರೆದ. ಲಕ್ಷ್ಮಿ ಮಾತೆಯ ಗಮನ ತನ್ನ ಬದಲಾಗಿ ಕುದುರೆಯ ಮೇಲೆ ಇರುವುದನ್ನು ಅವನು ನೋಡಿದನು. ಇದರಿಂದ ಕೋಪಗೊಂಡ ಶ್ರೀ ಹರಿ ಲಕ್ಷ್ಮಿಯನ್ನು ಭೂಮಿಯ ಮೇಲೆ ಕುದುರೆಯಾಗಲು ಶಪಿಸಿದನು.

56

ಶಿವನು ನೀಡಿದ ವರ
ಶಾಪದಿಂದ ದುಃಖಿತಳಾದ ತಾಯಿ ಲಕ್ಷ್ಮಿ ಅಶ್ವ ಯೋನಿಯಲ್ಲಿ ತಪಸ್ಸು ಮಾಡಲು ಪ್ರಾರಂಭಿಸಿದಳು. ಲಕ್ಷ್ಮಿ ತಪಸ್ಸು ಮಾಡುವ ಮೂಲಕ ಶಿವನನ್ನು ಮೆಚ್ಚಿಸಿ ವರ ಕೇಳಿದಳು.ಲಕ್ಷ್ಮಿಯನ್ನು  ವಿಷ್ಣು ಭೇಟಿಯಾಗಬೇಕು ಎಂಬುದು ಶಿವನು ನೀಡಿದ ವರವಾಗಿತ್ತು. ಇದರ ನಂತರ, ಶಿವನು ವಿಷ್ಣುವನ್ನು ಅಶ್ವ ಯೋನಿ ಬಳಿ ಕಳುಹಿಸಿದನು ಎನ್ನಲಾಗಿದೆ. 

66

ಶಾಪದಿಂದ ಮುಕ್ತಳಾದ ತಾಯಿ ಲಕ್ಷ್ಮಿ 
ಶ್ರೀ ಹರಿ ಮತ್ತು ತಾಯಿ ಲಕ್ಷ್ಮಿ ಕುದುರೆ ಯೋನಿಯಲ್ಲಿ ಕುದುರೆ ರೂಪದಲ್ಲಿ ಒಟ್ಟಿಗೆ ಸಮಯ ಕಳೆದರು. ಇಬ್ಬರ ಮಿಲನದ ಪರಿಣಾಮವಾಗಿ, ಅವರಿಗೆ ಏಕವೀರ ಎಂಬ ಪ್ರಕಾಶಮಾನವಾದ, ಶಕ್ತಿಶಾಲಿಯಾದ ಮಗನ ಜನನವಾಯಿತು. ಏಕವೀರನ ಜನನದ ನಂತರ, ತಾಯಿ ಲಕ್ಷ್ಮಿ ಶಾಪದಿಂದ ಮುಕ್ತಳಾಗಿ ವೈಕುಂಠಕ್ಕೆ ಹಿಂದಿರುಗಿದಳು.  
 

Read more Photos on
click me!

Recommended Stories