ಸತ್ತಾಗ ನೇರವಾಗಿ ಸ್ವರ್ಗಕ್ಕೆ ಹೋಗಬೇಕಂದ್ರೆ… ಬದುಕಿದ್ದಾಗ ಈ ಕೆಲಸ ಮಾಡಿ

First Published Aug 11, 2023, 1:18 PM IST

ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಕಾರ್ಯಗಳ ಪ್ರಕಾರ, ಅವನು ಸ್ವರ್ಗ ಮತ್ತು ನರಕಕ್ಕೆ ಹೋಗುತ್ತಾನೆ ಅನ್ನೋದನ್ನು ನೀವು ಕೇಳಿರಬಹುದು ಅಲ್ವಾ?. ಇದರ ಬಗ್ಗೆ ಗರುಡ ಪುರಾಣದಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. 
 

ಧಾರ್ಮಿಕ ಗ್ರಂಥಗಳು ಮತ್ತು ಪುರಾಣಗಳಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ಹಿಂದೂ ಧರ್ಮದಲ್ಲಿ (Hindu religion) ಹೇಳಲಾಗಿದೆ. ಅದರಲ್ಲೂ, ಗರುಡ ಪುರಾಣವನ್ನು 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಒಂದು ಪುರಾಣವಾಗಿದ್ದು, ಇದರಲ್ಲಿ ಸಾವು ಮತ್ತು ಮರಣಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಅಲ್ಲದೆ, ಗರುಡ ಪುರಾಣವು  ಮರಣದ ನಂತರ ಸ್ವರ್ಗ ಮತ್ತು ನರಕದ ಪ್ರಯಾಣದ ಬಗ್ಗೆಯೂ ಹೇಳುತ್ತದೆ.  

ಗರುಡ ಪುರಾಣದಲ್ಲಿ (Garuda Purana) ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅದನ್ನು ಅನುಸರಿಸುವ ಮೂಲಕ ವ್ಯಕ್ತಿಯ ಜೀವನವು ಸಂತೋಷ ಮತ್ತು ಸರಳವಾಗುತ್ತದೆ. ಒಬ್ಬ ವ್ಯಕ್ತಿಯು ಮರಣದ ನಂತರ ತನ್ನ ಕಾರ್ಯಗಳ ಪ್ರಕಾರ ಸ್ವರ್ಗ ಮತ್ತು ನರಕದಲ್ಲಿ ಸ್ಥಾನವನ್ನು ಪಡೆಯುತ್ತಾನೆ. ಹಾಗಿದ್ರೆ ಯಾವ ವ್ಯಕ್ತಿ ಮರಣದ ಬಳಿಕ ಸ್ವರ್ಗ ಸೇರುತ್ತಾನೆ ನೋಡೋಣ. 
 

ನೀವು ನರಕದ ಶಿಕ್ಷೆ ಅನುಭವಿಸಲು ಬಯಸದಿದ್ದರೆ ಇಲ್ಲಿ ಉಲ್ಲೇಖಿಸಲಾದ ವಿಷಯಗಳ ಕಡೆಗೆ ವಿಶೇಷ ಗಮನ ಕೊಡಿ. ಇಲ್ಲಿ ಯಾವ ವ್ಯಕ್ತಿಗೆ ಸ್ವರ್ಗ (heaven) ಪ್ರಾಪ್ತಿಯಾಗುತ್ತೆ ಅನ್ನೋದರ ಬಗ್ಗೆ ಸವಿರವಾಗಿ ಮಾಹಿತಿ ನೀಡಲಾಗಿದೆ. 
 

ಪಿತೃಗಳಿಗೆ ತರ್ಪಣ ನೀಡುವವರು, ಪಿಂಡದಾನ ಮಾಡುವವರು ಮತ್ತು ಏಕಾದಶಿ ದಿನದಂದು ಉಪವಾಸ ಮಾಡುವ ಜನರು ಸ್ವರ್ಗವನ್ನು ಪಡೆಯುತ್ತಾರೆ. ಅಂದರೆ ತನ್ನ ಪೂರ್ವಜರನ್ನು ಪೂಜಿಸುವ ವ್ಯಕ್ತಿ, ಪಿಂಡದಾನ ಮಾಡುವವರು ಇದರೊಂದಿಗೆ, ಏಕಾದಶಿ ದಿನದಂದು ಉಪವಾಸ (fasting) ಮಾಡುವಂತಹ ವ್ಯಕ್ತಿ ಎಂದಿಗೂ ನರಕಕ್ಕೆ ಹೋಗುವುದಿಲ್ಲ ಎಂದು ಹೇಳಲಾಗುತ್ತದೆ. 

ಅಸಹಾಯಕರು, ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ, ಯಾವಾಗಲೂ ಇನ್ನೊಬ್ಬರ ಹಿತವನ್ನೆ ಬಯಸುವ ವ್ಯಕ್ತಿ ಯಾವತ್ತೂ ನರಕಕ್ಕೆ ಹೋಗೋದಿಲ್ಲ. ಇವರು ತಮ್ಮ ಉತ್ತಮ ಗುಣಗಳಿಂದ ಸದಾ ಸ್ವರ್ಗದಲ್ಲಿ ಸೀಟ್ ಪಡೆದಿರುತ್ತಾರೆ.  
 

ಯಾರು ಒಳ್ಳೆಯ ಕೆಲಸ ಮತ್ತು ಕಠಿಣ ಪರಿಶ್ರಮ ಮಾಡುತ್ತಾರೋ ಅವರಿಗೆ ಸ್ವರ್ಗ ಸಿಗುತ್ತದೆ. ಎಂದಿಗೂ ಸುಳ್ಳು ಹೇಳದ ವ್ಯಕ್ತಿ, ಯಾವಾಗಲೂ ತಮ್ಮ ಕಠಿಣ ಪರಿಶ್ರಮದ (hardworking person) ಬಲದ ಮೇಲೆ ಕೆಲಸ ಮಾಡುತ್ತಾ, ಯಾರೋಂದಿಗೂ ಜಗಳವಾದೇ ದುಡಿಯುವ ವ್ಯಕ್ತಿ ಎಂದಿಗೂ ನರಕದ ಮುಖವನ್ನು ನೋಡಬೇಕಾಗಿಲ್ಲ.

ಸಸ್ಯಾಹಾರಿ ಆಹಾರ ಮತ್ತು ಅತಿಥಿಗಳ ಸತ್ಕಾರ ಮಾಡುವ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾರೆ. ಅಂದರೆ ಪ್ರಾಣಿಗಳಿಗೆ ಹಿಂಸೆ ನೀಡದೇ ಸದಾ ಸಸ್ಯಾಹಾರವನ್ನು ಸೇವಿಸುವ ಮತ್ತು ಮಾದಕ ವಸ್ತುಗಳಿಂದ ದೂರವಿರುವ ವ್ಯಕ್ತಿ, ಜೊತೆಗೆ ಅತಿಥಿಗಳಿಗೆ ಸತ್ಕರಿಸುವ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ.  
 

ಹಣದ ಬಗ್ಗೆ ಎಂದಿಗೂ ಹೆಮ್ಮೆಪಡದ ವ್ಯಕ್ತಿ , ಜೊತೆಗೆ ತನ್ನಲ್ಲಿರೋದನ್ನು ದಾನ ಮಾಡಿ, ಇತರರಿಗೆ ನೆರವಾಗುವಂತಹ ವ್ಯಕ್ತಿ ಎಂದಿಗೂ ನರಕಕ್ಕೆ ಹೋಗಬೇಕಾಗಿಲ್ಲ. ಇಂತಹ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ. 
 

ವಯಸ್ಸಾದವರು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸೇವೆ ಸಲ್ಲಿಸುವವರು ಸ್ವರ್ಗವನ್ನು ಪಡೆಯುತ್ತಾರೆ. ಹೌದು, ವೃದ್ಧರು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಹಾಯ ಮಾಡುವ ವ್ಯಕ್ತಿ  ಎಂದಿಗೂ ನರಕಕ್ಕೆ ಹೋಗಬೇಕಾಗಿಲ್ಲ. ಭಗವಾನ್ ವಿಷ್ಣು ಎಲ್ಲರನ್ನೂ ಚೆನ್ನಾಗಿ ಇಟ್ಟಿರುತ್ತಾನೆ. 

click me!