ಮಲಗುವ ಕೋಣೆಯಲ್ಲಿ ಈ ವಸ್ತುಗಳು ಇರಬಾರದು; ಇದು ಸುಖ ದಾಂಪತ್ಯಕ್ಕೆ ಕೊಳ್ಳಿ..!

First Published | Aug 11, 2023, 11:41 AM IST

ಪತಿ-ಪತ್ನಿ ನಡುವೆ ಪ್ರೀತಿಯನ್ನು ಕಾಪಾಡಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಹೇಳಲಾಗಿದೆ. ಅದರಲ್ಲೂ ದಂಪತಿ ಬೆಡ್ ರೂಮ್ ವಿಶೇಷ ಮಹತ್ವ ಪಡೆಯುತ್ತದೆ. 

ಹಾಸಿಗೆಯನ್ನು ಮೂಲೆಯಲ್ಲಿ ಇಡಬೇಡಿ

ಮಲಗುವ ಕೋಣೆಯಲ್ಲಿ ಹಾಸಿಗೆಯನ್ನು ಮೂಲೆಯಲ್ಲಿ ಇಡಬಾರದು. ಗೋಡೆಗೆ ಮಧ್ಯಂತರಕ್ಕೆ ಸಮನಾಗಿ ಹಾಗೂ ಓಡಾಡಲು ಸಾಕಷ್ಟು ಸ್ಥಳ ಇರುವಂತೆ ಇಡಬೇಕು.

ಟಿವಿ ಹಾಗೂ ಲ್ಯಾಪ್ ಟಾಪ್ ಇರಬಾರದು

ಸಾಮಾನ್ಯವಾಗಿ ಟಿವಿ, ಲ್ಯಾಪ್ ಟಾಪ್ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ದಂಪತಿಯ ಮಧ್ಯೆ ಅಂತರ ಉಂಟು ಮಾಡುತ್ತವೆ‌. ಆದ್ದರಿಂದ ಇವುಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು.
 

Latest Videos


ಬೆಡ್ ಶೀಟ್ ಹಾಗೂ ದಿಂಬಿನ ಕವರ್ ಬದಲಾಯಿಸಿ

ವಾಸ್ತುಶಾಸ್ತ್ರವು ಬೆಡ್ ಶೀಟ್ ಹಾಗೂ ದಿಂಬಿನ ಕವರ್ ಅನ್ನು ಎರಡ್ಮೂರು ದಿನಕ್ಕೊಮ್ಮೆ ಬದಲಾಯಿಸಿಲು ಸಲಹೆ ನೀಡುತ್ತದೆ. ಇದು ಜೀವನದಲ್ಲಿ ಸಂತೋಷ, ಸಮೃದ್ಧಿ ತರಲಿದೆ.

ದೇವರ ಫೋಟೋ ಇಡಬಾರದು

ಮಲಗುವ ಕೋಣೆ ಪ್ರತಿಯೊಬ್ಬ ಮನುಷ್ಯನಿಗೆ ವಿಶೇಷ ಸ್ಥಳವಾಗಿದೆ. ಹೀಗಾಗಿ ಕೋಣೆಯಲ್ಲಿ ದೇವರ ಫೋಟೋ ಹಾಗೂ ಯಾವುದೇ ಧಾರ್ಮಿಕ ಗ್ರಂಥಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಕ್ರೂರ ಪ್ರಾಣಿಗಳ ಚಿತ್ರ ಹಾಗೂ ವಿಗ್ರಹ ಇಡಬಾರದು

ಮಲಗುವ ಕೋಣೆಯಲ್ಲಿ ಶಾಂತಿ ಮತ್ತು ಸಂತೋಷ ಇರಬೇಕು. ಆದ್ದರಿಂದ ಕೆಲ ಪರಭಕ್ಷಕ ಪ್ರಾಣಿಗಳ ಚಿತ್ರ ಹಾಗೂ ವಿಗ್ರಹ ಇಡಬಾರದು. ಇದರಿಂದ ದಂಪತಿ ಕಲಹ ಆಗಬಹುದು.
 

ಹೂವು ಅಥವಾ ಗಿಡ ಇಡಬಾರದು

ಮಲಗುವ ಕೋಣೆಯಲ್ಲಿ ಹೂವಿನ ಸಸಿ ಇರಬಾರದು. ಇದು ದಂಪತಿ ನಡುವಿನ ಅಂತರ ಸೂಚಿಸುತ್ತದೆ. ಬಾಲ್ಕನಿಯಲ್ಲಿ ಸಸ್ಯಗಳು ಇರುವುದು ಮಂಗಳಕರ.

ಅಕ್ವೇರಿಯಂ ಇಡಬಾರದು

 ದಂಪತಿ ಬೆಡ್ ರೂಮ್ ವಿಶೇಷ ಮಹತ್ವ ವಿದೆ. ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಅಕ್ವೇರಿಯಂ ಇಡಬಾರದು. ಇದು ದಂಪತಿ ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಬೀರಬಹುದು. 

click me!