ಗೋಡೆ ಮೇಲಿನ ಹಲ್ಲಿನಾ ಓಡಿಸ್ತೀರಾ? …. ಕುಬೇರನ ವಾಹನದ ಬಗ್ಗೆ ತಿಳ್ಕೊಂಡಿಲ್ಲಾ ಅಂದ್ರೆ ಮುಂದೆ ಪಶ್ಚಾತ್ತಾಪ ಪಡ್ಕೋಳ್ತೀರಿ

Published : Sep 11, 2025, 11:00 AM IST

ನಿಮ್ಮ ಮನೆಯ ಗೋಡೆಯ ಮೇಲೆ ಹಲ್ಲಿ ತೆವಳುತ್ತಿರುವುದನ್ನು ನೋಡಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಸಾಮಾನ್ಯವಾಗಿ ಜನರು ಹಲ್ಲಿಯನ್ನು ನೋಡಿದ ತಕ್ಷಣ ಅದನ್ನು ಓಡಿಸುತ್ತಾರೆ, ಆದರೆ ಕುಬೇರನ ವಾಹನ ಹಲ್ಲಿ ಮನೆಯಲ್ಲಿದ್ರೆ ಎಷ್ಟೊಂದು ಪ್ರಯೋಜನ ಗೊತ್ತಾ? 

PREV
17

ಮನೆಯಲ್ಲಿ ಜಿರಳೆ, ನೊಣ, ಸೊಳ್ಳೆ, ಕಣಜ ಮತ್ತು ಹಲ್ಲಿಗಳು  (Lizard)ಇರುವುದು ತುಂಬಾ ಸಾಮಾನ್ಯ. ಬೇಸಿಗೆ ಬಂದ ತಕ್ಷಣ, ಅನೇಕ ಜನರು ತಮ್ಮ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದನ್ನು ನೋಡುತ್ತಾರೆ. ಹಲ್ಲಿಗಳ ಬಗ್ಗೆ ಮಾತನಾಡಿದರೆ, ಈ ಜೀವಿಯನ್ನು ನೋಡಿ ಭಯಪಡುವ ಅನೇಕ ಜನರಿದ್ದಾರೆ. ಅನೇಕ ಮನೆಗಳಲ್ಲಿ, ಜನರು ಪೊರಕೆ ಹಿಡಿದು ಹಲ್ಲಿಗಳನ್ನು ಓಡಿಸುವುದನ್ನು ನೀವು ನೋಡಿರಬೇಕು.

27

ಜ್ಯೋತಿಷ್ಯದ ಸಾಮಾನ್ಯ ದೃಷ್ಟಿಕೋನವನ್ನು ಮೀರಿ ನೋಡಿದರೆ, ಹಲ್ಲಿಯನ್ನು ನೋಡುವುದು ಕೆಲವೊಮ್ಮೆ ಶುಭ (good luck) ಮತ್ತು ಕೆಲವು ರೀತಿಯಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಅಜ್ಜಿಯರು ದೀಪಾವಳಿಯಂದು ಹಲ್ಲಿಯನ್ನು ನೋಡುವುದನ್ನು ಶುಭವೆಂದು ಪರಿಗಣಿಸುತ್ತಿದ್ದರು. ಜ್ಯೋತಿಷ್ಯದಲ್ಲಿ ಅದರ ಅರ್ಥವೇನೆಂದುತಿಳಿಯೋಣ.

37

ಜ್ಯೋತಿಷ್ಯ ಶಾಸ್ತ್ರದಲ್ಲಿ, (Astrology) ಮನೆಯ ಗೋಡೆಯ ಮೇಲೆ ಹಲ್ಲಿಯನ್ನು ನೋಡುವುದು ಹೊಸದರ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಹೊಸದೇನೋ ಬರಲಿದೆ ಎಂದು. ಹಲ್ಲಿ ವರ್ಷಗಳ ಕಾಲ ಬದುಕುವ ಜೀವಿಯಾಗಿರುವುದರಿಂದ, ಅದು ದೀರ್ಘಾಯುಷ್ಯದೊಂದಿಗೆ ಕೂಡ ಸಂಬಂಧ ಹೊಂದಿದೆ.

47

ಕೆಲವು ರಾಜ್ಯಗಳಲ್ಲಿ, ಹೊಸ ಮನೆಯ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಯ ಪ್ರತಿಮೆಯನ್ನು ಸಹ ಇರಿಸಲಾಗುತ್ತದೆ. ಏಕೆಂದರೆ ಹಲ್ಲಿ ಮನೆಯ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಇದೆ.

57

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಅಥವಾ ಡ್ರಾಯಿಂಗ್ ರೂಮಿನಲ್ಲಿ ಹಲ್ಲಿಯನ್ನು ನೋಡಿದರೆ, ಅದು ತುಂಬಾ ಶುಭ. ಇದರರ್ಥ ನೀವು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಪತ್ತನ್ನು (prosperity) ಪಡೆಯಲಿದ್ದೀರಿ.

67

ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಲ್ಲಿ ಇದ್ದರೆ, ವರ್ಷವಿಡೀ ಲಕ್ಷ್ಮಿ ದೇವಿಯ  (Goddess Lakshmi) ಆಶೀರ್ವಾದವನ್ನು ಪಡೆಯುತ್ತೀರಿ. ಇದು ಮಾತ್ರವಲ್ಲದೆ, ಅದು ನಿಮಗೆ ಅಪಾರ ಸಂತೋಷ ಮತ್ತು ಸಂಪತ್ತನ್ನು ತರುತ್ತದೆ.

77

ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿಗಳನ್ನು ನೋಡುವುದು ತುಂಬಾ ಶುಭ ಎಂಬ ನಂಬಿಕೆಯೂ ಇದೆ. ನೀವು ಇದನ್ನು ನೋಡಿದರೆ, ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ನೀವು ಹೊಸ ಮನೆಗೆ ಪ್ರವೇಶಿಸಿದ ತಕ್ಷಣ ಹಲ್ಲಿಯನ್ನು ನೋಡಿದರೆ, ಅದು ಕೂಡ ಶುಭ ಸೂಚನೆ. ಹಲ್ಲಿಯನ್ನು ನೋಡುವುದು ಪೂರ್ವಜರ ಆಶೀರ್ವಾದವನ್ನು ಪಡೆದಂತೆ. ನಮಗೆ ಪೂರ್ವಜರ ಆಶೀರ್ವಾದ ಮತ್ತು ಅನುಗ್ರಹ ಸಿಗುತ್ತದೆ.

Read more Photos on
click me!

Recommended Stories