ಕಂಡ್ ಕಂಡಲ್ಲಿ ಕಾಣಿಸಿಕೊಳ್ಳುವ ಹಲ್ಲಿ ಕಂಟ್ರೋಲ್ ಮಾಡಲು ಇಲ್ಲಿವೆ ಬೆಸ್ಟ್ ಟಿಪ್ಸ್. ಇವನ್ನು ಕಂಟ್ರೋಲ್ ಮಾಡಲೇನು ಮಾಡಬಹುದು?
ಕಾಫಿ ಪುಡಿ, ಹೊಗೆಸೊಪ್ಪು
ಕಾಫಿ ಪುಡಿಯನ್ನು ಸ್ವಲ್ಪ ಹೊಗೆಸೊಪ್ಪಿನೊಂದಿಗೆ ಬೆರೆಸಿ ಸಣ್ಣ ಉಂಡೆ ಮಾಡಿ. ಇವನ್ನು ಮನೆ ಮೂಲೆಗಳಲ್ಲಿರಿಸಿ. ಇದರ ವಾಸನೆಗೆ ಹಲ್ಲಿಗಳು ಮನೆಯಿಂದ ಓಡಿ ಹೋಗುತ್ತವೆ.
ಮೊಟ್ಟೆ ಚಿಪ್ಪು
ಕೋಳಿ ಮೊಟ್ಟೆ ಚಿಪ್ಪುಗಳನ್ನು ಅಡುಗೆ ಮನೆ, ಬಾಗಿಲು, ಕಿಟಕಿ ಬಳಿ ಇಡಿ. ಇವುಗಳ ವಾಸನೆಗೆ ಹಲ್ಲಿಗಳು ಮನೆಯಿಂದ ಓಡಿ ಹೋಗುತ್ತವೆ.
ಬೆಳ್ಳುಳ್ಳಿ, ಈರುಳ್ಳಿ
ಬೆಳ್ಳುಳ್ಳಿ, ಈರುಳ್ಳಿ ವಾಸನೆ ಹಲ್ಲಿಗಳಿಗೆ ಅಲರ್ಜಿ. ಇವನ್ನು ಮನೆ ಮೂಲೆಗಳಲ್ಲಿರಿಸಿ. ಇದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ಹಲ್ಲಿಯೂ ಓಡಿ ಹೋಗುತ್ತವೆ.
ನವಿಲು ಗರಿ
ಹೌದು ನವಿಲು ಗರಿಗಳಿಂದಲೂ ಮನೆಯಲ್ಲಿ ಹಲ್ಲಿಗಳು ಇಲ್ಲದಂತೆ ಮಾಡಬಹುದು. ಏಕೆಂದರೆ ಇದನ್ನು ನೋಡಿದರೆ ಹಲ್ಲಿ ಹೆದರುತ್ತವೆ. ಆದ್ದರಿಂದ ಬಾಗಿಲು, ಕಿಟಕಿ ಅಥವಾ ಅಡುಗೆ ಮನೆ ಸುತ್ತಲೂ ಇವನ್ನು ಇರಿಸಿ.
ಕರ್ಪೂರ
ಕರ್ಪೂರದ ವಾಸನೆ ಹಲ್ಲಿಗೆ ಆಗೋಲ್ಲ. ಕರ್ಪೂರವನ್ನು ಹಚ್ಚಿದರೆ ತಕ್ಷಣ ಹಲ್ಲಿ ಮನೆಯಿಂದ ಹೊರ ಹೋಗುತ್ತವೆ. ಇದರ ವಾಸನೆ ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು (Negative Energy) ಕೂಡಾ ಹೋಗಲಾಡಿಸುತ್ತದೆ.
ಮೆಣಸಿನಕಾಯಿ ಸ್ಪ್ರೇ
ಕರಿಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡಿದರೂ ಹಲ್ಲಿಗಳು ಇಲ್ಲದಂತೆ ಮಾಡಬಹುದು. ಇದಕ್ಕಾಗಿ ಹಲ್ಲಿಗಳು ಓಡಾಡುವ ಸ್ಥಳದಲ್ಲಿ ಇದನ್ನು ಸ್ಪ್ರೇ ಮಾಡಿ.
ಐಸ್ ನೀರು
ನಿಮ್ಮ ಮನೆಗೆ ಹಲ್ಲಿ ಬಂದರೆ ಅದರ ಮೇಲೆ ಐಸ್ ನೀರನ್ನು ಸಿಂಪಡಿಸಿ. ಆದರೆ ಮತ್ತೆ ಬರೋದು ಗ್ಯಾರಂಟಿ.
ಸ್ವಚ್ಛತೆ
ಹಲ್ಲಿಗಳು ಕೊಳಕು ಮತ್ತು ಕೀಟಗಳಿಗೆ ಬೇಗ ಆಕರ್ಷಿತವಾಗುತ್ತವೆ. ಆದ್ದರಿಂದ ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ತಿನ್ನುವ ಪದಾರ್ಥಗಳು, ಪಾನೀಯಗಳನ್ನು ತೆರೆದಿಡಬಾರದು.