ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಗವಂತನ ಆಶೀರ್ವಾದ ಹೀಗೆ ಪಡೆಯಿರಿ

First Published | Aug 17, 2022, 6:45 PM IST

ಭಗವಾನ್ ಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರವೆಂದು ನಂಬಲಾಗಿದೆ. ಕೃಷ್ಣ ಜನ್ಮಾಷ್ಟಮಿಯನ್ನು ದೇಶಾದ್ಯಂತ ಸಡಗರ ಸ್ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 18 ಮತ್ತು 19 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ನೀವು ಆಚರಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿದ್ದೀರಾ? ಹಾಗಿದ್ರೆ ಬನ್ನಿ ಏನು ಮಾಡಬೇಕು? ಏನು ಮಾಡಬಾರದು ಅನ್ನೋದನ್ನು ನೋಡೋಣ.

ಭಾದ್ರಪದ ಮಾಸದಲ್ಲಿ, ಕೃಷ್ಣ ಪಕ್ಷದ ಎಂಟನೇ ದಿನದಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತೆ. ಈ ವರ್ಷ, ಈ ಹಬ್ಬವನ್ನು ಆಗಸ್ಟ್ 18 ಮತ್ತು 19 ರಂದು ಆಚರಿಸಲಾಗುವುದು. ಇಡೀ ದೇಶವು ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು, ಜನರು ಉಪವಾಸ ಮಾಡುವ ಮೂಲಕ ಕೃಷ್ಣನ ಸ್ಮರಣೆ ಮಾಡುತ್ತಾರೆ, ಮತ್ತು ಮಧ್ಯರಾತ್ರಿಯಲ್ಲಿ ಕೀರ್ತನೆ ಮತ್ತು ಭಜನೆ, ಪೂಜೆ, ಪುರಸ್ಕಾರಗಳನ್ನು ಮಾಡಿದ ನಂತರ ಉಪವಾಸ ಮುರಿಯುತ್ತಾರೆ. ಜನ್ಮಾಷ್ಟಮಿ ವ್ರತ ಎಂದು ಕರೆಯಲ್ಪಡುವ ಉಪವಾಸವನ್ನು ನಿರ್ವಹಿಸಲು, ಆ ದಿನದಂದು ಏನು ಮಾಡಬೇಕು? ಏನು ಮಾಡಬಾರದು ತಿಳಿಯೋಣ.

ಕೃಷ್ಣ ಜನ್ಮಾಷ್ಟಮಿಯಂದು ಏನು ಮಾಡಬೇಕು?

ಕೃಷ್ಣ ಜನ್ಮಾಷ್ಟಮಿಯಂದು 'ಸಾತ್ವಿಕ' ಆಹಾರವನ್ನು ಮಾತ್ರ ಸೇವಿಸಬೇಕು. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಈ ದಿನ ಅಡುಗೆಯಲ್ಲಿ ಬಳಸಬಾರದು ಏಕೆಂದರೆ ಅವುಗಳನ್ನು ತಾಮಸಿಕ್ ಎಂದು ವರ್ಗೀಕರಿಸಲಾಗಿದೆ. ಆದುದರಿಂದ ಅಡುಗೆಗೆ ಒಗ್ಗರಣೆ ಹಾಕದೇ ಮಾಡಿ ಸೇವಿಸಿ.

Tap to resize

ಮುಂಜಾನೆ ಬೇಗನೆ ಏಳುವುದರಿಂದ ಅನೇಕ ಪ್ರಯೋಜನಗಳಿವೆ; ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದಲ್ಲದೆ, ದಿನವನ್ನು ಪಾಸಿಟಿವ್ ಆಗಿ ಪ್ರಾರಂಭಿಸಲು ಮತ್ತು ಸಮಯಕ್ಕಿಂತ ಮುಂಚಿತವಾಗಿ ನಮ್ಮ ಚಟುವಟಿಕೆಗಳನ್ನು ಯೋಜಿಸಲು ನಮಗೆ ಅನುವು ಮಾಡಿಕೊಡುತ್ತದೆ. ಪೂಜೆ ಮತ್ತು ಆಚರಣೆಗಳನ್ನು ಸಮಯಕ್ಕೆ ಸರಿಯಾಗಿ (ಮುಹೂರ್ತ) ಮಾಡಲು ಅನುಕೂಲವಾಗುವಂತೆ ಬೇಗನೆ ಎದ್ದೇಳುವುದು ಉತ್ತಮ. 

ಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರವೆಂದು ನಂಬಲಾಗಿದೆ. ಕೃಷ್ಣನ ಬಾಲ್ಯದ ಕಥೆಗಳು ಅವನು ಎಲ್ಲರ ಸ್ನೇಹಿತನಾಗಿದ್ದನು ಅನ್ನೋದನ್ನು ತೋರಿಸುತ್ತೆ. ಗ್ರಂಧಗಳನ್ನು, ಪುರಾಣ ಕತೆಗಳ ಆಧಾರದ ಮೇಲೆ ಅವರು ಎಂದಿಗೂ ಯಾರ ಜೊತೆಯೂ ತಾರತಮ್ಯ ಮಾಡಲಿಲ್ಲ. ಆದುದರಿಂದ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಜನರು ಬಡ ಜನರಿಗೆ ಆಹಾರ, ಬಟ್ಟೆ ದಾನ ಮಾಡೋದು ಉತ್ತಮ.

ಕೃಷ್ಣ ಜನ್ಮಾಷ್ಟಮಿಯಂದು ನಾವು ಏನು ಮಾಡಬಾರದು?

ಶ್ರೀ ಕೃಷ್ಣನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ,  ಹರಿಗೆ ತುಳಸಿ ಎಂದರೆ ಪ್ರೀತಿ, ಗೌರವ. ಆದುದರಿಂದ ಕೃಷ್ಣ ಜನ್ಮಾಷ್ಟಮಿಯಂದು ತುಳಸಿ ಎಲೆಗಳನ್ನು ಕೀಳಬಾರದು. ಕೃಷ್ಣನಿಗೆ ಅರ್ಪಿಸಲು ಒಂದು ದಿನ ಮುಂಚಿತವಾಗಿ ಅವುಗಳನ್ನು ಸಂಗ್ರಹಿಸುವುದು ಉತ್ತಮ.

ಏಕಾದಶಿಯನ್ನು ಹೋಲುವ ಉಪವಾಸವಿಲ್ಲದಿದ್ದರೂ ಜನ್ಮಾಷ್ಟಮಿಯಂದು ಅನ್ನವನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಅದರ ಬದಲಾಗಿ ನೀವು ಹಣ್ಣು ಹಂಪಲು, ಸಾಬುದಾನ ಖಿಚಡಿ, ಉಪ್ಪಿಟ್ಟು ಮೊದಲಾದ ಆಹಾರಗಳನ್ನು, ಪಾನೀಯಗಳನ್ನು ಸೇವಿಸುವ ಮೂಲಕ ಉಪವಾಸ ಮಾಡಬಹುದು.

ಕೃಷ್ಣನಿಗೆ ಹಸುಗಳೆಂದರೆ ತುಂಬಾನೆ ಪ್ರೀತಿ. ಅವನು ತನ್ನ ಬಾಲ್ಯದಲ್ಲಿ ದನಗಾಹಿಯೊಂದಿಗೆ ಹಸುವನ್ನು ಮೇಯಿಸಲು ಹೋಗುತ್ತಿದ್ದನು. ಜನ್ಮಾಷ್ಟಮಿ ಅಥವಾ ಇನ್ನಾವುದೇ ದಿನದಂದು ಹಸು ಮತ್ತು ಕರುವನ್ನು ಕೊಲ್ಲಬೇಡಿ. ಗೋವುಗಳ ಸೇವೆ ಮಾಡುವ ಮೂಲಕ ಭಗವಾನ್ ಕೃಷ್ಣನು ಸಂತೋಷಪಡಿಸಿ.

ಶ್ರೀಕೃಷ್ಣನಿಗೆ ಎಲ್ಲಾ ಭಕ್ತರು, ಶ್ರೀಮಂತರು ಮತ್ತು ಬಡವರು ಸಮಾನರು. ಯಾರೋಂದಿಗೂ ಕೃಷ್ಣ ಭೇದ ಭಾವ ಮಾಡೋದಿಲ್ಲ. ಇದಕ್ಕೆ ಉದಾಹರಣೆಯೆಂದರೆ ಉಡುಪಿಯಲ್ಲಿ, ಭಕ್ತ ಕನಕನಿಗಾಗಿ ತನ್ನ ಸ್ಥಾನವನ್ನೇ ಬದಲಿಸಿ ತಿರುಗಿ ನಿಂತ ಕೃಷ್ಣ. ಆದುದರಿಂದ ಎಂದಿಗೂ ಯಾರನ್ನೂ ಅಗೌರವಿಸಬೇಡಿ ಅಥವಾ ಅವಮಾನಿಸಬೇಡಿ.

Latest Videos

click me!