ಭಗವಾನ್ ಗಣೇಶನ ಪುತ್ರರು ಮತ್ತು ಮೊಮ್ಮಕ್ಕಳು ಯಾರು ಗೊತ್ತಾ?

Published : Apr 29, 2023, 03:19 PM IST

ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಮೊದಲು ಪೂಜಿಸಲಾಗುತ್ತೆ. ಗಣೇಶ ಪೂಜೆಯ ನಂತರವೇ ಮಂಗಳ ಕೆಲಸಗಳು ಪ್ರಾರಂಭವಾಗುತ್ತವೆ. ಭಗವಾನ್ ಭೋಲೆನಾಥ ಮತ್ತು ಮಾತಾ ಪಾರ್ವತಿಯ ಮಗನಾದ ಗಜಾನಂದನ ಬಗ್ಗೆ ಹೆಚ್ಚಿನ ವಿಷಯಗಳು ಇಲ್ಲಿವೆ.  

PREV
17
ಭಗವಾನ್ ಗಣೇಶನ ಪುತ್ರರು ಮತ್ತು ಮೊಮ್ಮಕ್ಕಳು ಯಾರು ಗೊತ್ತಾ?

ಗಣಪತಿ (Ganapathi) ಹೇಗೆ ಜನಿಸಿದನು ಎಂದು ತಿಳಿದಿದೆ. ಗಜಾನಂದರ ವಾಹನದ ಬಗ್ಗೆ, ಗಣೇಶನ ಮೋದಕಗಳು ಏಕೆ ಇಷ್ಟವಾಗುತ್ತವೆ, ಗಣೇಶನು ಒಂದೇ ಆಸನದಲ್ಲಿ ರಾಮಾಯಣವನ್ನು ಬರೆಯುವ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಗಣೇಶನ ಹೆಂಡತಿ, ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆ ನಿಮಗೆ ತಿಳಿದಿದ್ಯಾ, ಕೆಲವೇ ಜನರಿಗೆ ಇದರ ಬಗ್ಗೆ ತಿಳಿದಿದೆ, ಆದರೆ ಹೆಚ್ಚಿನವರಿಗೆ ಇದು ತಿಳಿದಿಲ್ಲ, ಹಾಗಾಗಿ ಗಣೇಶನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಸ್ಟೋರಿ ಓದಿ.  

27

ಭಗವಾನ್ ಗಣೇಶನ ಹೆಂಡತಿಯರು ಯಾರು? (Wives of Ganesha)
ಪೌರಾಣಿಕ ನಂಬಿಕೆಗಳ ಪ್ರಕಾರ, ಒಮ್ಮೆ ಗಣೇಶ ತಪಸ್ಸನ್ನು ಮಾಡುತ್ತಿದ್ದನು. ಆಗ ತುಳಸಿ ಹಾದುಹೋದರು, ಅವಳು ಗಣೇಶನನ್ನು ನೋಡಿ ಆಕರ್ಷಿತಳಾದಳು. ತುಳಸಿ ಮದುವೆಯ ಪ್ರಸ್ತಾಪವನ್ನು ಗಣೇಶನ ಬಳಿಗೆ ಕೊಂಡೊಯ್ದರು, ಆದರೆ ಗಣೇಶ ತಮ್ಮನ್ನು ಬ್ರಹ್ಮಚಾರಿ ಎಂದು ಬಣ್ಣಿಸಿದರು ಮತ್ತು ತುಳಸಿಯನ್ನು ಮದುವೆಯಾಗಲು ನಿರಾಕರಿಸಿದರು.

37

ಮದುವೆ ಪ್ರಸ್ತಾಪವನ್ನು (marriage proposal) ತಿರಸ್ಕರಿಸಿದ್ದರಿಂದ ತುಳಸಿ ಮಾತೆ ಕೋಪಗೊಂಡು ಗಣೇಶನನ್ನು ಶಪಿಸಿದಳು. ಗಣೇಶ ಎಂದಿಗೂ ಒಂದು ಮದುವೆ ಆಗಬಾರದು, ಎರಡು ಮದುವೆ ಆಗುವಂತೆ ಶಾಪ ಕೊಡುತ್ತಾರೆ.  ಇದರಿಂದ ಕೋಪಗೊಂಡ ಗಣೇಶ, ನೀವು ಅಸುರನನ್ನು ಮದುವೆಯಾಗುತ್ತೀರಿ ಎಂದು ಮಾತಾ ತುಳಸಿಯನ್ನು ಶಪಿಸಿದನು. ವಿಶೇಷವೆಂದರೆ, ಈ ಕಾರಣಕ್ಕಾಗಿ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸೋಲ್ಲ.

47

ನಂಬಿಕೆಗಳ ಪ್ರಕಾರ, ಗಣೇಶನು ತನ್ನ ದೇಹದ ಮೇಲೆ ಕೋಪಗೊಂಡಿದ್ದರಿಂದ ಬ್ರಹ್ಮಚಾರಿಯಾಗಿರಲು ಬಯಸಿದನು. ಆತ ಆನೆಯಂತೆ ಕಾಣುತ್ತಿದ್ದನು. ಯಾರೂ ಆತನನ್ನು ಮದುವೆಯಾಗಲು ಬಯಸುವುಸೋದಿಲ್ಲ ಎಂದು ಅವರೇ ಭಾವಿಸಿದರು. ಆದ್ದರಿಂದ, ಗಣೇಶನು ಬ್ರಹ್ಮಚಾರಿಯಾಗಿ ಉಳಿಯಲು ಬಯಸಿದನು. ಕೋಪಗೊಂಡ ಗಣೇಶನು ಮದುವೆ ಎಲ್ಲಿ ನಡೆದರೂ ಅಡ್ಡಿಪಡಿಸುತ್ತಿದ್ದರು, ಆದ್ದರಿಂದ ಮದುವೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ತಾನು ಮದುವೆಯಾಗಗೋದಿಲ್ಲ, ಇತರ ಯಾರಿಗೂ ಮದುವೆಯಾಗಲು (marriage) ಬಿಡೋದಿಲ್ಲ ಎಂದು ಗಣೇಶ ಮದುವೆಗೆ ಅಡ್ಡಿಪಡಿಸುತ್ತಿದ್ದನು.

57

ಈ ಕಾರಣದಿಂದಾಗಿ, ದೇವರು ಮತ್ತು ದೇವತೆಗಳು ತುಂಬಾ ಅಸಮಾಧಾನಗೊಂಡರು. ಅವರೆಲ್ಲರೂ ತಮ್ಮ ಸಮಸ್ಯೆಗಳೊಂದಿಗೆ ಬ್ರಹ್ಮನ ಬಳಿಗೆ ಹೋದರು. ಆಗ ಬ್ರಹ್ಮ ತನ್ನ ಶಕ್ತಿಯಿಂದ ಇಬ್ಬರು ಹೆಣ್ಣುಮಕ್ಕಳನ್ನು ಸೃಷ್ಟಿಸಿದನು. ಈ ಇಬ್ಬರ ಹೆಸರುಗಳು ರಿದ್ಧಿ ಮತ್ತು ಸಿದ್ಧಿ.  ಜ್ಞಾನವನ್ನು ಪಡೆಯಲು ರಿದ್ಧಿ ಮತ್ತು ಸಿದ್ಧಿಯನ್ನು ಗಣೇಶನ ಬಳಿಗೆ ಕಳುಹಿಸಿದನು. ಸ್ವಲ್ಪ ಸಮಯದ ನಂತರ, ಇಬ್ಬರೂ ಗಣೇಶನನ್ನು ವಿವಾಹವಾದರು. ಇದಲ್ಲದೆ, ಗಣೇಶನಿಗೆ ತುಷ್ಟಿ, ಪುಷ್ಟಿ ಮತ್ತು ಶ್ರೀ ಎಂಬ ಇನ್ನೂ ಮೂವರು ಹೆಂಡತಿಯರಿದ್ದಾರೆ. ಆದ್ದರಿಂದ, ಗಣೇಶನಿಗೆ ಐದು ಹೆಂಡತಿಯರಿದ್ದಾರೆ ಎಂದು ನಂಬಲಾಗಿದೆ.

67

ಗಣೇಶನ ಮಕ್ಕಳು ಮತ್ತು ಮೊಮ್ಮಕ್ಕಳು ಯಾರು?
ಭಗವಾನ್ ಗಣೇಶನಿಗೆ ಲಾಭ ಮತ್ತು ಶುಭ (Shubh and Labh) ಎಂಬ ಇಬ್ಬರು ಪುತ್ರರಿದ್ದಾರೆ. ಶುಭನು ನಮ್ಮ ಸಂಪತ್ತು, ಜ್ಞಾನ ಮತ್ತು ಖ್ಯಾತಿಯನ್ನು ಸುರಕ್ಷಿತವಾಗಿರಿಸುತ್ತಾನೆ, ಅಂದರೆ ಪುರುಷಾರ್ಥದ ಮೂಲಕ ಗಳಿಸಿದ ಎಲ್ಲವನ್ನೂ ಸುರಕ್ಷಿತವಾಗಿರಿಸುತ್ತಾನೆ. ಲಾಭ ಗಳಿಸಿದ್ದನ್ನು ಹೆಚ್ಚಿಸಲು ಕೆಲಸ ಮಾಡುತ್ತಾರೆ. ಲಾಭವು ನಮಗೆ ಸಂಪತ್ತು, ಖ್ಯಾತಿ ಇತ್ಯಾದಿಗಳಲ್ಲಿ ನಿರಂತರ ಹೆಚ್ಚಳವನ್ನು ನೀಡುತ್ತೆ.

77

ಗಣೇಶನ ಮಗಳ ಹೆಸರು ಸಂತೋಷಿ. ಗಣೇಶನಿಗೆ ಅಶೋಕ ಸುಂದರಿ, ಜ್ಯೋತಿ ಮತ್ತು ದೇವಿ ಮಾನಸ ಎಂಬ ಮೂವರು ಸಹೋದರಿಯರಿದ್ದಾರೆ. ಗಣಪತಿಗೆ ಅಮೋದ್ ಮತ್ತು ಪ್ರಮೋದ್ ಎಂಬ ಇಬ್ಬರು ಮೊಮ್ಮಕ್ಕಳಿದ್ದಾರೆ. ಗಣೇಶನನ್ನು ಮಂಗಳಕರ ಮತ್ತು ಜ್ಞಾನದ ದೇವರು ಎಂದು ಕರೆಯಲಾಗುತ್ತೆ.

ವಿ.ಸೂ : ಇಲ್ಲಿರುವ ಮಾಹಿತಿಯನ್ನು ವಿವಿಧ ಧಾರ್ಮಿಕ ಗ್ರಂಥಗಳ, ಪುಸ್ತಕಗಳ ಆಧಾರದ ಮೇಲೆ ಬರೆಯಲಾಗಿದೆ.

Read more Photos on
click me!

Recommended Stories