ಗ್ರಹಣ ಸಮಯದಲ್ಲಿ ಏನು ಮಾಡಬಾರದು
ಮಿಥ್ಯೆ : ಗ್ರಹಣ (eclipse) ಸಮಯದಲ್ಲಿ ಚೂಪಾದ ವಸ್ತುಗಳನ್ನು ಬಳಸಬಾರದು ಎಂದು ಹೇಳಲಾಗುತ್ತೆ. ಗ್ರಹಣದ ಅವಧಿಯಲ್ಲಿ ಚಾಕು, ಕತ್ತರಿ ಅಥವಾ ಸೂಜಿಗಳಂತಹ ಚೂಪಾದ ವಸ್ತುಗಳನ್ನು ಬಳಸದಿರೋದು ಒಳ್ಳೆಯದು.
ವಾಸ್ತವ: ಗ್ರಹಣ ಸಮಯದಲ್ಲಿ ಗರ್ಭಿಣಿಯರು ಚೂಪಾದ ವಸ್ತುಗಳನ್ನು ಬಳಸಬಾರದು, ಏಕೆಂದರೆ ಇದು ಮಗುವಿಗೆ ಅಪಾಯವನ್ನುಂಟುಮಾಡಬಹುದು ಅಥವಾ ಮಗುವಿನಲ್ಲಿ ಯಾವುದೇ ಜನನ ದೋಷಗಳಿಗೆ ಕಾರಣವಾಗಬಹುದು ಎಂದು ಸಾಬೀತುಪಡಿಸಲು ಇನ್ನೂ ಯಾವುದೇ ಸ್ಟಡಿ ನಡೆದಿಲ್ಲ. ಪುರಾವೆಗಳೇ ಇಲ್ಲದ್ದಾಗ, ಚೂಪಾದ ವಸ್ತುಗಳ ಬಳಕೆಯು ಗ್ರಹಣದಲ್ಲಿ ಹಾನಿಯನ್ನುಂಟು ಮಾಡುತ್ತೆ ಎಂದು ಹೇಳಲಾಗೋದಿಲ್ಲ.