ಯಾವ ರಾಶಿಯವರಿಗೆ ಯಾವ ದಿನ ಲಕ್ಕಿ ಗೊತ್ತಾ..?

ರಾಶಿಯ ಅನುಸಾರವಾಗಿ ಯಾವ ರಾಶಿಯವರಿಗೆ ಯಾವ ದಿನ ಶುಭ? ಎಂದು ತಿಳಿದುಕೊಂಡರೆ ಆ ದಿನದಂದೇ ಹೊಸ ಕಾರ್ಯಗಳನ್ನು ಆರಂಭಿಸಬಹುದು. ಆ ದಿನ ಆರಂಭಿಸಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬ ಬಗ್ಗೆ ಶಾಸ್ತ್ರದಲ್ಲಿ ಹೇಳಲಾಗಿದೆ.  
 

ಮೇಷ ರಾಶಿಯವರು ತುಂಬಾ ಚುರುಕಾಗಿರುವುದಲ್ಲದೇ, ಸದಾ ಕ್ರೀಯಾಶೀಲರಾಗಿರುತ್ತಾರೆ. ಉತ್ಸಾಹವೇ ಇವರ ಶಕ್ತಿ ಮತ್ತು ಸ್ಪೂರ್ತಿಯಾಗಿರುತ್ತದೆ. ಇವರಿಗೆ ಮಂಗಳವಾರ ಶುಭ 
 

ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಹುಟ್ಟಿನಿಂದಲೂ ಹಠವಾದಿಗಳು ಮತ್ತು ಗುರಿ ತಲುಪುವ ಬಗ್ಗೆಯೇ ಯೋಚಿಸುತ್ತಿರುವವರಾಗಿರುತ್ತಾರೆ. ಈ ರಾಶಿಯವರಿಗೆ ಶುಭದಿನ ಬುಧವಾರ ಮತ್ತು ಶುಕ್ರವಾರ. 
 


ಮಿಥುನ ರಾಶಿಯ ಅಧಿಪತಿ ಬುಧಗ್ರಹ. ಈ ರಾಶಿಯವರ ಗ್ರಹಿಕೆ ಮತ್ತು ಸ್ಮರಣಾ ಶಕ್ತಿ ತುಂಬಾ ಚೆನ್ನಾಗಿರುತ್ತದೆ. ಬುಧವಾರವು ಇವರಿಗೆ ಅತ್ಯಂತ ಶುಭದಿನವಾಗಿದೆ. 
 

ಕರ್ಕಾಟಕ ರಾಶಿಯ ಅಧಿಪತಿ ಚಂದ್ರ ಗ್ರಹ. ಈ ರಾಶಿಯವರು ಉತ್ತಮ ವಿಚಾರ ಮತ್ತು ಕಲ್ಪನಾ ಶಕ್ತಿಗೆ ಹೆಸರುವಾಸಿಯಾಗಿರುತ್ತಾರೆ. ಸೋಮವಾರದಂದು ಮಾಡಿದ ಕೆಲಸಗಳು ಇವರಿಗೆ ಶುಭಫಲವನ್ನು ನೀಡುತ್ತವೆ. 
 

ಸಿಂಹ ರಾಶಿಯವರ ಅಧಿಪತಿ ಗ್ರಹ ಸೂರ್ಯ ಮತ್ತು ಶುಭದಿನ ಭಾನುವಾರ. ಸೂರ್ಯ ಗ್ರಹದ ಅಧಿಪತ್ಯದಲ್ಲಿರುವ ಸಿಂಹರಾಶಿಯವರಿಗೆ ಭಾನುವಾರವು ಅತ್ಯಂತ ಮಹತ್ವಪೂರ್ಣ ಮತ್ತು ಪ್ರಭಾವದ ದಿನವಾಗುತ್ತದೆ. 
 

ಕನ್ಯಾ ರಾಶಿಯವರ ಅಧಿಪತಿ ಗ್ರಹ ಬುಧ.  ತಮ್ಮ ಪ್ರತಿಭೆಯನ್ನು ಎಲ್ಲಿ ತೋರಿಸಬೇಕೆಂಬ ಬಗ್ಗೆ ಈ ರಾಶಿಯವರಿಗೆ ಚೆನ್ನಾಗಿ ಅರಿವಿರುತ್ತದೆ. ಈ ರಾಶಿಯವರಿಗೆ ಬುಧವಾರ ಅದೃಷ್ಟದ ದಿನವಾಗಿರುತ್ತದೆ.
 

ತುಲಾ ರಾಶಿಯವರ ಅಧಿಪತಿ ಗ್ರಹ ಶುಕ್ರ. ಬೇರೆ ದಿನಗಳಿಗೆ ಹೋಲಿಸಿದರೆ ಶುಕ್ರವಾರ ಇವರಿಗೆ ಅತ್ಯಂತ ಖುಷಿ ಕೊಡುವ ವಾರವಲ್ಲದೇ ಉತ್ತಮ ಅನುಭವಗಳಾಗುವ ದಿನವಾಗಿರುತ್ತದೆ.
 

ವೃಶ್ಚಿಕ ರಾಶಿಯವರ ಅಧಿಪತಿ ಗ್ರಹ ಮಂಗಳ. ಈ ರಾಶಿಯವರಿಗೆ ಮಂಗಳವಾರದಷ್ಟು  ಉತ್ತಮ ದಿನ ಮತ್ಯಾವುದೂ ಆಗಲು ಸಾಧ್ಯವಿಲ್ಲ. ಈ ದಿನ ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನವಾಗಿರುತ್ತದೆ.
 

ಧನು ರಾಶಿಯವರ ಅಧಿಪತಿ ಗ್ರಹ ಗುರು. ಹಾಗಾಗಿ ಈ ರಾಶಿಯವರಿಗೆ ಗುರುವಾರ ಅತ್ಯಂತ ಶುಭದಿನವಾಗಿರುತ್ತದೆ. ಗುರುವಾರದಂದು ಮಾಡುವ ಕೆಲಸಗಳು ಇವರಿಗೆ ಯಶಸ್ಸನ್ನು ತಂದುಕೊಡಲಿದೆ.
 

ಮಕರ ರಾಶಿಯ ಅಧಿಪತಿ ಗ್ರಹ ಶನಿ. ಭಿನ್ನವಾದ ಕಾರ್ಯಗಳನ್ನು ಮಾಡಿ ಎಲ್ಲರ ನಡುವೆ ಎದ್ದು ಕಾಣಲು ಬಯಸುವ ಗುಣ ಈ ರಾಶಿಯವರದ್ದು. ಇವರಿಗೆ ಶುಭದಿನ ಶನಿವಾರ.
 

ಕುಂಭ  ರಾಶಿಯವರಿಗೂ ಅಧಿಪತಿ ಗ್ರಹ ಶನಿದೇವನಾಗಿರುತ್ತಾನೆ. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇವರಲ್ಲಿರುತ್ತದೆ.ಇವರಿಗೆ ಶನಿವಾರವು ಶುಭವನ್ನು ತಂದುಕೊಡುವ ದಿನವಾಗಿರುತ್ತದೆ.
 

ಮೀನ ರಾಶಿಗೆ ಅಧಿಪತಿ ಗ್ರಹ ಗುರು. ಗುರುವಾರದಂದು ಹೆಚ್ಚು ಉತ್ಸುಕರಾಗಿರುವ ಈ ರಾಶಿಯವರು, ಗುರುವಾರದಂದು ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತಾರೆ.
 

Latest Videos

click me!