ಮೇಷ ರಾಶಿಯವರು ಸ್ವತಂತ್ರರಾಗಿರಲು ಬಯಸುತ್ತಾರೆ. ಯಾವುದೇ ನಿರ್ಧಾರವನ್ನು ಸ್ವತಃ ತೆಗೆದುಕೊಳ್ಳುಲು ಹಿಂಜರಿಯುವುದಿಲ್ಲ. ಇವರು ಪರಿಶ್ರಮಿಗಳು ಮತ್ತು ಶಕ್ತಿವಂತರು.
212
ವೃಷಭ ರಾಶಿಯವರದು ಶಾಂತ ಸ್ವಭಾವ. ಇವರಿಗೆ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವು ಚೆನ್ನಾಗಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ.
312
ಮಿಥುನ ರಾಶಿಯವರು ಉತ್ತಮ ಮಾತುಗಾರರಾಗಿರುತ್ತಾರೆ. ಈ ರಾಶಿಯವರು ಹಲವಾರು ಭಾಷೆಗಳ ಜ್ಞಾನವನ್ನು ಹೊಂದಿರುತ್ತಾರೆ. ಇವರ ಸ್ವಭಾವ ಆಗಾಗ ಬದಲಾಗುವ ಕಾರಣ ಇವರನ್ನು ಅರಿತುಕೊಳ್ಳುವುದು ಕಷ್ಟಕರ.
412
ಕರ್ಕಾಟಕ ರಾಶಿಯವರು ಪರಿಶುದ್ಧ ಹೃದಯವನ್ನು ಮತ್ತು ಸ್ವಚ್ಛ ಮನಸ್ಸನ್ನು ಹೊಂದಿರುತ್ತಾರೆ. ತನ್ನವರನ್ನು ಹೆಚ್ಚು ಪ್ರೀತಿಸುತ್ತಾರೆ. ರಾಜಕೀಯ ವಿಷಯಗಳಲ್ಲಿ ಹೆಚ್ಚು ಪ್ರಾವೀಣ್ಯತೆ ಹೊಂದಿರುತ್ತಾರೆ.
512
ಸಿಂಹ ರಾಶಿಯು ಸೂರ್ಯನ ಪ್ರಭಾವಕ್ಕೊಳಪಡುತ್ತದೆ. ಬಾಲ್ಯದಿಂದಲೂ ಇವರಿಗೆ ನಾಯಕತ್ವದ ಗುಣವಿರುತ್ತದೆ. ರಾಜನಂತೆ ಜೀವನವನ್ನು ನಡೆಸುತ್ತಾರೆ. ಅಹಂಕಾರ ಮತ್ತು ಸಿಟ್ಟು ಇವರ ಅವಗುಣಗಳಾಗಿವೆ.
612
ಕನ್ಯಾ ರಾಶಿಯವರು ಜ್ಞಾನಿಗಳು ಮತ್ತು ವಿನಯವಂತರು ಆಗಿರುತ್ತಾರೆ. ಕೆಲವು ಬಾರಿ ವ್ಯಂಗ್ಯ ಮತ್ತು ವಿಷಯವನ್ನು ದೊಡ್ಡದು ಮಾಡುವ ಗುಣ ಸಹ ಇವರಲ್ಲಿರುತ್ತದೆ. ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವವರೆಗೂ ಪಟ್ಟು ಬಿಡುವುದಿಲ್ಲ.
712
ತುಲಾ ರಾಶಿಯವರು ಆಕರ್ಷಕವಾಗಿರುತ್ತಾರೆ. ಭಾವನೆಗಳನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳಲು ಇವರು ಇಷ್ಟಪಡುವುದಿಲ್ಲ. ಈ ರಾಶಿಯವರಿಗೆ ದುಬಾರಿ ಮತ್ತು ಬ್ರಾಂಡೆಡ್ ವಸ್ತುಗಳು ಇಷ್ಟವಾಗುತ್ತವೆ.
812
ವೃಶ್ಚಿಕ ರಾಶಿಯವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಸ್ವಭಾವ ಇವರದ್ದು. ಹಾಗಾಗಿ ಈ ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿರುತ್ತದೆ.
912
ಧನು ರಾಶಿಯವರು ಬೃಹಸ್ಪತಿಯಂತೆ ಜ್ಞಾನಿಗಳಾಗಿರುತ್ತಾರೆ. ಇವರು ಪ್ರಾಮಾಣಿಕರು, ಸತ್ಯವಂತರು, ಕರ್ತವ್ಯನಿಷ್ಠರು ಮತ್ತು ವಿಶ್ವಾಸಕ್ಕೆ ಅರ್ಹ ವ್ಯಕ್ತಿತ್ವ ಇವರದ್ದಾಗಿರುತ್ತದೆ.
1012
ಮಕರ ರಾಶಿಯವರು ಆಳವಾದ ಚಿಂತನೆಯನ್ನು ಮಾಡುವ ಸ್ವಭಾವದವರಾಗಿರುತ್ತಾರೆ. ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರಿತು ನಿಭಾಯಿಸುತ್ತಾರೆ. ಬೇರೆಯವರನ್ನು ಅನುಮಾನದಿಂದ ನೋಡುವ ಗುಣ ಇವರಿಗಿರುತ್ತದೆ.
1112
ಕುಂಭ ರಾಶಿಯವರು ನಿಧಾನಿಗಳು ಮತ್ತು ದಯಾವಂತರು. ಇವರ ಬುದ್ಧಿವಂತಿಕೆ, ಚಾತುರ್ಯ್ಯ ಮತ್ತು ತರ್ಕ ಮಾಡುವ ಕ್ಷಮತೆ ಇತರರು ಮೆಚ್ಚುವಂತಿರುತ್ತದೆ.
1212
ಮೀನ ರಾಶಿಯವರು ಬಹುಮುಖ ಪ್ರತಿಭೆಯುಳ್ಳವರಾಗಿರುತ್ತಾರೆ. ತಮ್ಮ ಮಾತನ್ನು ಉಳಿಸಿಕೊಳ್ಳುವ ಇವರು ತರ್ಕ, ವಿವಾದಗಳಲ್ಲಿ ನಿಸ್ಸೀಮರಾಗಿರುತ್ತಾರೆ.