ಮನೆಯ ಮುಖ್ಯ ದ್ವಾರ ದಕ್ಷಿಣಾಭಿಮುಖವಾಗಿದೆಯೇ, ಇವರಿಗೆ ಪಕ್ಕಾ ಅದೃಷ್ಟ

ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ರಾಶಿಗೂ, ದಿಕ್ಕಿಗೂ ಸಂಬಂಧವಿರುವ ಕಾರಣ ರಾಶಿಯ ಅನುಸಾರ ಕೆಲವರಿಗೆ ಕೆಲವು ದಿಕ್ಕಿನ ಮನೆಗಳು ಚೆನ್ನಾಗಿ ಆಗಿ ಬರುತ್ತವೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿರುವ ಮನೆಯು ಯಾವ ರಾಶಿಯವರಿಗೆ ಶುಭವನ್ನು ನೀಡುತ್ತದೆ ನೋಡೋಣ.

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ದಕ್ಷಿಣ ದಿಕ್ಕಿನಲ್ಲಿರುವ ಮನೆಯು ಈ ರಾಶಿಯವರಿಗೆ ಶುಭವನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. 
 

ವೃಷಭ ರಾಶಿಯವರಿಗೆ ಮನೆಯ ಮುಖ್ಯದ್ವಾರ ದಕ್ಷಿಣ ದಿಕ್ಕಿಗಿದ್ದರೆ ಅಶುಭವೆಂದು ಹೇಳಲಾಗುತ್ತದೆ. ಹೀಗಿದ್ದಾಗ ಯಾವುದೇ ಕೆಲಸಗಳು ಸುಗಮವಾಗಿ ಪೂರ್ತಿಯಾಗುವುದಿಲ್ಲ.
 


ಮಿಥುನ ರಾಶಿಯವರಿಗೂ ಸಹ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಆಗಿ ಬರುವುದಿಲ್ಲ. ದಕ್ಷಿಣ ದಿಕ್ಕಿಗಿರುವ ಮನೆಯಲ್ಲಿ ವಾಸಿಸಿದರೆ ಅವರಿಗೆ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳನ್ನು ಎದುರಾಗುತ್ತವೆ.
 

ಕರ್ಕ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆ ಶುಭವನ್ನುಂಟು ಮಾಡುತ್ತದೆ. ಅತ್ಯಂತ ಶುಭವನ್ನು ನೀಡುವ ದಕ್ಷಿಣ ಬಾಗಿಲ ಮನೆಯಲ್ಲಿ ಈ ರಾಶಿಯವರು ವಾಸ ಮಾಡುವುದರಿಂದ ಲಾಭ, ಆರ್ಥಿಕ ಸಮೃದ್ಧಿ ಮತ್ತು ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದಾಗಿದೆ.     

ಸಿಂಹ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಹೆಚ್ಚು ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಸಿಂಹ ರಾಶಿಯವರಿಗೆ ಇಂಥ ಮನೆ ಭಾಗ್ಯವನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ. 
 

ಕನ್ಯಾ ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆ ಸಮಸ್ಯೆಗಳ ಆಗರವಾಗುತ್ತದೆ. ಹಾಗಾಗಿ ಈ ರಾಶಿಯವರಿಗೆ ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರವಿರುವ ಮನೆಯು ವಾಸಕ್ಕೆ ಯೋಗ್ಯವಲ್ಲ. 
 

ತುಲಾ ರಾಶಿಯವರಿಗೆ ದಕ್ಷಿಣ ದ್ವಾರವಿರುವ ಮನೆ ಮಿಶ್ರ ಫಲವನ್ನು ನೀಡುತ್ತದೆ ಎಂದು ಹೇಳಬಹುದು. ಸಾಧಾರಣ ಮಟ್ಟಿಗೆ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.
 

ವೃಶ್ಚಿಕ ರಾಶಿಗೆ ದಕ್ಷಿಣ ದಿಕ್ಕಿನಲ್ಲಿರುವ ಮನೆಯು ಈ ರಾಶಿಯವರಿಗೆ ಶುಭವನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿರುವುದರಿಂದ ಈ ರಾಶಿಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. 
 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯು ಧನು ರಾಶಿಯವರ ಮಕ್ಕಳಿಗೆ ಉತ್ತಮವಾಗಿದೆ. ಶುಭ ಫಲವನ್ನು ನೀಡುತ್ತದೆ. ಧನು ರಾಶಿಯವರ ಮಕ್ಕಳು ಉತ್ತಮ ಅಭಿವೃದ್ಧಿಯನ್ನು ಹೊಂದುವುದಲ್ಲದೆ, ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುವಲ್ಲಿ ಸಫಲರಾಗುತ್ತಾರೆ. 
 

ಮಕರ ರಾಶಿಯವರಿಗೆ ಮನೆಯ ಮುಖ್ಯ ದ್ವಾರಕ ದಕ್ಷಿಣಕ್ಕಿದ್ದರೆ ಪೂರ್ಣವಾಗಿ ಏಳಿಗೆಯನ್ನು ಹೊಂದಾಲಾಗುವುದಿಲ್ಲ. ಹಣಕಾಸಿಗೆ ಸಂಬಂಧಪಟ್ಟಂತೆ ಉತ್ತಮವಾಗುವುದನ್ನು ಬಿಟ್ಟರೆ, ಇನ್ನಾವುದೇ ರೀತಿಯ ಅಭಿವೃದ್ಧಿಯು ಇಲ್ಲಿ ಸಾಧ್ಯವಿಲ್ಲ.
 

ಕುಂಭ ರಾಶಿಯವರಿಗೆ ದಕ್ಷಿಣಕ್ಕೆ ಮುಖ್ಯ ದ್ವಾರವಿರುವ ಮನೆಯು ಶುಭವಲ್ಲವೆಂದು ಹೇಳಲಾಗುತ್ತದೆ. ಕುಂಭ ರಾಶಿಯವರು ಇಂಥ ಮನೆಯಲ್ಲಿ ವಾಸ ಮಾಡಿದರೆ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದಕ್ಕೂ ಕಷ್ಟ ಪಡಬೇಕಾಗುತ್ತದೆ.
 

ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯು ಮೀನ ರಾಶಿಯವರಿಗೆ ಶುಭವಾಗಿದೆ. ಇಂಥ ಮನೆಯಲ್ಲಿ ವಾಸಿಸಿದರೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಕೆಲಸ ಕೈಗೂಡುವುದಲ್ಲದೇ, ಸಾಮಾಜಿಕ ಮತ್ತು ಆರ್ಥಿಕವಾಗಿ ಉತ್ತಮ ಮಟ್ಟ ತಲುಪಬಹುದಾಗಿದೆ.
 

Latest Videos

click me!