ಮನೆಯಲ್ಲಿ ಪೂಜೆ ಮಾಡುವಾಗ ಗರುಡ ಗಂಟೆಯನ್ನು ಬಳಸಬೇಕು. ಈ ಗಂಟೆ ಬಾರಿಸೋದರಿಂದ ನಕಾರಾತ್ಮಕ ಶಕ್ತಿ (Negative Energy) ಮನೆಯಿಂದ ದೂರವಾಗುತ್ತೆ, ಅಲ್ಲದೇ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆವರಿಸುತ್ತೆ. ಇದರೊಂದಿಗೆ, ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿ ತುಂಬಾ ಸಂತೋಷವಾಗ್ತಾರೆ ಎಂದು ಹೇಳಲಾಗುತ್ತೆ..
ದೇವಾಲಯದ ಬಾಗಿಲಿಗೆ ದೊಡ್ಡ ಗಂಟೆಗಳನ್ನು(Temple bell) ಹಾಕುವ ಸಂಪ್ರದಾಯ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಹಾಗೆ, ಮನೆಯಲ್ಲಿ ಪೂಜೆ ಮಾಡುವಾಗ ಆರತಿ ಮಾಡುವಾಗ, ಗಂಟೆ ಬಾರಿಸೋದನ್ನು ಶುಭವೆಂದು ಪರಿಗಣಿಸಲಾಗುತ್ತೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಘಂಟೆಗಳು ಲಭ್ಯವಿವೆ. ಆದರೆ ಈ ಎಲ್ಲಾ ಗಂಟೆಗಳಲ್ಲಿ, ಗರುಡ ಗಂಟೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತಿದೆ.
212
ನಂಬಿಕೆಗಳ ಪ್ರಕಾರ, ಸೃಷ್ಟಿಯನ್ನು ಸೃಷ್ಟಿಸುತ್ತಿರುವಾಗ ಧ್ವನಿ ಮತ್ತು ಶಬ್ದ ಸಂಯೋಜನೆಗೆ ಹೆಚ್ಚಿನ ಕೊಡುಗೆ ನೀಡಿತು. ಆದ್ದರಿಂದ, ಸೃಷ್ಟಿಯಲ್ಲಿ ಹೊರಹೊಮ್ಮಿದ ಶಬ್ದ ಈಗ ಗರುಡ ಗಂಟೆಯನ್ನು ಬಾರಿಸುವಾಗ ಹೊರಬರುತ್ತೆ. ಅದರ ಶಬ್ದದಿಂದ ದೇವರು(God) ಮತ್ತು ದೇವತೆಗಳು ತುಂಬಾ ಸಂತೋಷಪಡುತ್ತಾರೆ. ಇದರೊಂದಿಗೆ, ಪರಿಸರವು ಶುದ್ಧವಾಗುತ್ತೆ ಎಂದು ನಂಬಲಾಗಿದೆ.
312
ಧರ್ಮಗ್ರಂಥಗಳ ಪ್ರಕಾರ, ಪೂಜೆಯ ಸಮಯದಲ್ಲಿ ಗರುಡ ಗಂಟೆಯನ್ನು ಬಾರಿಸೋದರಿಂದ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿ (Negative energy) ಮತ್ತು ವಾಸ್ತು ದೋಷವನ್ನು ತೆಗೆದುಹಾಕುತ್ತೆ. ಹಾಗಾಗಿ, ದೇವರು ಮತ್ತು ದೇವತೆಗಳ ಆಶೀರ್ವಾದ ಪಡೆಯಲಾಗುತ್ತೆ ಎಂದು ಹೇಳಲಾಗುತ್ತೆ..
412
ಎಷ್ಟು ವಿಧದ ಘಂಟೆಗಳಿವೆ?
ನಾಲ್ಕು ವಿಧಗಳಲ್ಲಿ ಗರುಡ ಗಂಟೆ(Garuda ghanti) ಯೂ ಒಂದು. ಈ ಗಂಟೆಯನ್ನು ಕೈಯಿಂದ ಬಾರಿಸಲಾಗುತ್ತೆ . ಗರುಡವನ್ನು ಅದರ ಮೇಲಿನ ತುದಿಯಲ್ಲಿ ತಯಾರಿಸಲಾಗುತ್ತೆ.
512
ಬಾಗಿಲ ಗಂಟೆ
ಇಂತಹ ಗಂಟೆಗಳು ಗಾತ್ರದಲ್ಲಿ ಸಣ್ಣ ಮತ್ತು ದೊಡ್ಡದಾಗಿರುತ್ತವೆ. ಅದನ್ನು ಬಾಗಿಲಿಗೆ(Door) ನೇತು ಹಾಕಲಾಗಿರುತ್ತೆ.
ಕೈ ಗಂಟೆ
ಸತ್ಯನಾರಾಯಣ ಪಥ, ರಾಮಾಯಣ ಪಠಣ ಮುಂತಾದವುಗಳ ಸಮಯದಲ್ಲಿ ಈ ಗಂಟೆಯನ್ನು ಬಾರಿಸಲಾಗುತ್ತೆ. ಇದು ಗಟ್ಟಿಯಾದ ಹಿತ್ತಾಳೆ ದುಂಡನೆಯ ಆಕಾರದ ತಟ್ಟೆಯಂತಿದೆ, ಇದನ್ನು ಮರದ ಸುತ್ತಿಗೆಯಿಂದ ಹೊಡೆಯಲಾಗುತ್ತೆ, ಇದಕ್ಕೆ ಜಾಗಟೆ ಎಂದು ಸಹ ಕರೆಯಲಾಗುತ್ತೆ..
612
ಗಂಟೆ
ಇದು ಸಾಮಾನ್ಯವಾಗಿ ದೇವಾಲಯಗಳಲ್ಲಿ(Temple) ಪ್ರತಿಷ್ಠಾಪಿಸಲಾಗುವ ಅತಿದೊಡ್ಡ ಗಂಟೆಯಾಗಿದೆ. ಈ ಗಂಟೆಯ ಶಬ್ದವು ಹಲವಾರು ಕಿಲೋಮೀಟರ್ ಗಳವರೆಗೆ ಕೇಳಿಸುತ್ತೆ.
712
ಗರುಡ ಗಂಟೆ ಬಾರಿಸೋದನ್ನು ಮಂಗಳಕರವೆಂದು ಏಕೆ ಪರಿಗಣಿಸಲಾಗುತ್ತೆ ಗೊತ್ತಾ?
ಗರುಡನು ಭಗವಾನ್ ವಿಷ್ಣುವಿನ(Lord Vishnu) ವಾಹನ ಮತ್ತು ದ್ವಾರಪಾಲಕನಾಗಿದ್ದಾನೆ. ಈ ಕಾರಣಕ್ಕಾಗಿ, ಅವುಗಳನ್ನು ಹೆಚ್ಚಾಗಿ ದೇವಾಲಯಗಳ ದ್ವಾರಗಳಲ್ಲಿ ನಿರ್ಮಿಸಲಾಗುತ್ತೆ. ದುಷ್ಟ ಶಕ್ತಿಗಳಿಂದ ಮನೆಯನ್ನು ರಕ್ಷಿಸಲು ಅನೇಕ ಬಾರಿ ಗರುಡನ ವಿಗ್ರಹ ಅಥವಾ ಚಿತ್ರವನ್ನು ಬಾಗಿಲಲ್ಲಿ ಇಡೋದು ಶುಭವೆಂದು ಪರಿಗಣಿಸಲಾಗುತ್ತೆ.
812
ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಮತ್ತು ಸಂಜೆ ಗಂಟೆ ಬಾರಿಸಬೇಕು ಎಂದು ನಂಬಲಾಗಿದೆ. ಇದು ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತೆ.
912
ಸ್ಕಂದ ಪುರಾಣದ ಪ್ರಕಾರ, ದೇವಾಲಯದಲ್ಲಿ ಗಂಟೆ ಬಾರಿಸುವ ಮೂಲಕ, ಒಬ್ಬ ವ್ಯಕ್ತಿಯು ನೂರು ಜನ್ಮಗಳ ಪಾಪಗಳನ್ನು ತೊಡೆದುಹಾಕುತ್ತಾನೆ ಎಂದು ಹೇಳಲಾಗುತ್ತೆ.
1012
ಪ್ರತಿದಿನ ಸ್ನಾನ ಇತ್ಯಾದಿಗಳ ನಂತರ ಗರುಡ ಗಂಟೆಯನ್ನು ಬಾರಿಸುವುದರಿಂದ, ತಾಯಿ ಲಕ್ಷ್ಮಿ (Goddess Lakshmi)ಭಗವಾನ್ ವಿಷ್ಣುವಿನೊಂದಿಗೆ ತುಂಬಾ ಸಂತೋಷವಾಗಿರ್ತಾಳೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ.
1112
ಪ್ರತಿದಿನ ಗರುಡ ಗಂಟೆ ಬಾರಿಸೋದ್ರಿಂದ, ಮನೆಯ ವಾತಾವರಣವು ಶುದ್ಧಗೊಳ್ಳುತ್ತೆ, ಇದು ಸದಸ್ಯರ ನಡುವಿನ ಪ್ರೀತಿಯನ್ನು(Love) ಕಾಪಾಡುತ್ತೆ.
1212
ಗರುಡ ಗಂಟೆ ಬಾರಿಸುವ ಮೂಲಕ ಆರತಿ ಮಾಡೋದು ಪೂಜೆಯ ಪೂರ್ಣ ಫಲ ನೀಡುತ್ತೆ. ಇದರೊಂದಿಗೆ, ವ್ಯಕ್ತಿಯ ಮಾನಸಿಕ ಒತ್ತಡವನ್ನು(Mental stres) ನಿವಾರಿಸಲು ಸಾಧ್ಯವಾಗುತ್ತೆ..