ಬಿಲ್ವಪತ್ರೆ ಮರವು ತಾಯಿ ಪಾರ್ವತಿಯ(Goddess Parvathi) ಬೆವರಿನಿಂದ ಹುಟ್ಟಿಕೊಂಡಿತು, ಆದ್ದರಿಂದ ತಾಯಿ ಪಾರ್ವತಿಯ ಎಲ್ಲಾ ರೂಪಗಳು ಈ ಮರದಲ್ಲಿ ವಾಸಿಸುತ್ತವೆ. ಬಿಲ್ವಪತ್ರೆ ಮರದ ಬೇರಿನಲ್ಲಿ ಗಿರಿಜಾ, ಕಾಂಡದಲ್ಲಿ ಮಹೇಶ್ವರಿ, ಕೊಂಬೆಗಳಲ್ಲಿ ದಾಕ್ಷಾಯಿಣಿ, ಎಲೆಗಳಲ್ಲಿ ತಾಯಿ ಪಾರ್ವತಿ, ಹಣ್ಣುಗಳಲ್ಲಿ ಕಾತ್ಯಾಯಿನಿ, ಹೂವುಗಳಲ್ಲಿ ಗೌರಿ ಮತ್ತು ಇಡೀ ಬಿಲ್ವಪತ್ರೆ ಮರದಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾರೆ.