ಹನುಮಾನ್ ಚಾಲೀಸಾ ಪಠಿಸುವಾಗ ಇವು ನೆನಪಿರಲಿ

First Published Nov 23, 2022, 4:41 PM IST

ಬಜರಂಗಬಲಿಯನ್ನು ಪೂಜಿಸೋದ್ರಿಂದ, ಭಕ್ತರ ಎಲ್ಲಾ ದುಃಖ ಮತ್ತು ನೋವುಗಳು ದೂರವಾಗುತ್ತವೆ ಮತ್ತು ಅವರ ಜೀವನದಲ್ಲಿ ಯಾವಾಗಲೂ ಸಾಕಷ್ಟು ಸಂತೋಷವಿರುತ್ತೆ ಎಂದು ನಂಬಲಾಗಿದೆ. ಈ ದಿನದಂದು ಹನುಮಾನ್ ಚಾಲೀಸಾ ಪಠಣಕ್ಕೂ ವಿಶೇಷ ಮಹತ್ವವಿದೆ. ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ತಿಳಿದುಕೊಳ್ಳೋಣ.

ಒಂದೊಂದು ದೇವರಿಗೆ ಒಂದೊಂದು ದಿನದಂದು ವಿಶೇಷ ಪೂಜೆ ಮಾಡಲಾಗುತ್ತೆ. ಮಂಗಳವಾರವನ್ನು ಮಾರುತಿ ಅಂದರೆ ಹನುಮಾನ್ ಗೆ ಸಮರ್ಪಿಸಲಾಗುತ್ತೆ. ಈ ದಿನ, ಭಜರಂಗಬಲಿಯ ವಿಶೇಷ ಪೂಜೆ ನಡೆಯುತ್ತೆ. ಅಲ್ಲದೆ, ಈ ದಿನ ಮಂತ್ರಗಳನ್ನು ಪಠಿಸೋದರಿಂದ ಹನುಮಂತ ಸಂತೋಷಪಡುತ್ತಾರೆ. ಈ ವಿಶೇಷ ದಿನದಂದು ಹನುಮಂತನಿಗೆ ಸಮರ್ಪಿತವಾದ ವಿವಿಧ ಸ್ತೋತ್ರ ಮತ್ತು ಚಾಲೀಸಾಗಳನ್ನು ಸಹ ಪಠಿಸಲಾಗುತ್ತೆ. ಭಜರಂಗಬಲಿಯನ್ನು ಮೆಚ್ಚಿಸಲು ಹನುಮಾನ್ ಚಾಲೀಸಾ (Hanuman chalisa) ಹೆಚ್ಚು ಉಪಯುಕ್ತ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. 

ಹನುಮಾನ್ ಚಾಲೀಸಾ ಪಠಿಸುವ ಮೂಲಕ, ಭಕ್ತರು ಅನೇಕ ರೀತಿಯ ದುಃಖಗಳನ್ನು ತೊಡೆದು ಹಾಕಬಹುದು. ಇದರೊಂದಿಗೆ, ಗೋಸ್ವಾಮಿ ತುಳಸೀದಾಸರು( Tulasidas) ರಚಿಸಿದ ಹನುಮಾನ್ ಚಾಲೀಸಾ ಸಾಮಾನ್ಯ ಜನರಿಗೆ ತುಂಬಾ ಸುಲಭವಾಗಿ ಲಭ್ಯವಿದೆ. ಹನುಮಾನ್ ಚಾಲೀಸಾ ಪಠಣದ ನಿಯಮಗಳು ಮತ್ತು ಮಹತ್ವ ತಿಳಿಯೋಣ.

ಹನುಮಾನ್ ಚಾಲೀಸಾದ ನಿಯಮಗಳು (Rules)

ಹನುಮಾನ್ ಚಾಲೀಸಾವನ್ನು ಖಂಡಿತವಾಗಿಯೂ ಮಂಗಳವಾರ ಪಠಿಸಬೇಕು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಪಾಠದ ಮೊದಲು ಪರಿಶುದ್ಧತೆಯ ಬಗ್ಗೆ ಕಾಳಜಿ ವಹಿಸಬೇಕು. ಆದ್ದರಿಂದ, ಪಾಠಕ್ಕೆ ಮೊದಲು, ಸ್ನಾನ ಮಾಡಿ ಮತ್ತು ಧ್ಯಾನಿಸಿ ಮತ್ತು ನಿಮ್ಮ ಮೇಲೆ ಗಂಗಾ ನೀರನ್ನು ಚಿಮುಕಿಸಿ.

ಪೂಜಾ ಸಮಯದಲ್ಲಿ ಕುಳಿತುಕೊಳ್ಳಲು ಆಸನ ಬಳಸೋದನ್ನು ಖಚಿತಪಡಿಸಿಕೊಳ್ಳಿ. ಆಸನವಿಲ್ಲದೆ ಕೆಳಗೆ ನೆಲದ ಮೇಲೆ ಕುಳಿತುಕೊಳ್ಳಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ದೇವರ (God) ಯಾವುದೇ ಕಾರ್ಯವನ್ನು ಮಾಡುವಾಗ ಚಾಪೆ ಅಥವಾ ಮಣೆ ಮೇಲೆ ಕುಳಿತುಕೊಳ್ಳೋದನ್ನು ಮಿಸ್ ಮಾಡಬೇಡಿ.

ಹನುಮಾನ್ ಚಾಲೀಸಾ ಪಠಣ ಪ್ರಾರಂಭಿಸುವ ಮೊದಲು, ಗಣೇಶನನ್ನು (Lord Ganesh) ಪೂಜಿಸಿ ಮತ್ತು ಅದರ ನಂತರ ಭಗವಾನ್ ಶ್ರೀ ರಾಮ ಮತ್ತು ಸೀತಾ ಮಾತೆಗೆ ನಮಸ್ಕರಿಸಿ. ಬಳಿಕವಷ್ಟೇ ಹನುಮಾನ್ ಚಾಲೀಸಾ ಪಠಿಸಿ. ಇದರಿಂದ ನೀವು ಅಂದುಕೊಂಡ ಕಾರ್ಯ ಸಿದ್ಧಿಯಾಗುತ್ತೆ ಎಂದು ನಂಬಲಾಗಿದೆ. 

ಹನುಮಾನ್ ಚಾಲೀಸಾ ಪಠಣಕ್ಕೆ ಸ್ವಲ್ಪ ಮೊದಲು, ದೀಪವನ್ನು ಬೆಳಗಿಸಿ ಮತ್ತು ಹನುಮಂತನಿಗೆ ಹೂವುಗಳನ್ನು(Flower) ಅರ್ಪಿಸಿ. ಅಲ್ಲದೆ, ಪಾಠದ ಸಮಯದಲ್ಲಿ, ಮನಸ್ಸಿನಲ್ಲಿ ಯಾರೊಂದಿಗೂ ಯಾವುದೇ ರೀತಿಯ ದ್ವೇಷ - ಕೋಪ ಇಲ್ಲದಿರುವಂತೆ ನೋಡಿಕೊಳ್ಳಬೇಕು. ಬಯಕೆಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಚಾಲೀಸಾ ಪಠಿಸಿ.

ಹನುಮಾನ್ ಚಾಲೀಸಾ ಪಠಣದ ಪ್ರಯೋಜನಗಳು

ನಂಬಿಕೆಗಳ ಪ್ರಕಾರ, ಹನುಮಾನ್ ಚಾಲೀಸಾವನ್ನು ಪಠಿಸೋದರಿಂದ ಜೀವನದಿಂದ ಆರ್ಥಿಕ ಸಮಸ್ಯೆಗಳು (Financial Crisis) ದೂರವಾಗುತ್ತೆ ಮತ್ತು ವ್ಯಕ್ತಿಯ ಶಕ್ತಿಯ ಭಾವನೆಯನ್ನು(Feelings) ಜಾಗೃತಗೊಳಿಸುತ್ತೆ. ಇದರೊಂದಿಗೆ, ಹನುಮಾನ್ ಚಾಲೀಸಾದ ಪಠಣ ಮೋಕ್ಷ ಪಡೆಯಲು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ, ಒಬ್ಬ ವ್ಯಕ್ತಿ ಜ್ಞಾನ ಮತ್ತು ಬುದ್ಧಿವಂತಿಕೆ ಪಡೆಯುತ್ತಾನೆ.
 

click me!