Dharmasthala Laksha Deepotsava: ಚಿತ್ರಗಳಲ್ಲಿ ನೋಡಿ, ಶಾಸ್ತ್ರೋಕ್ತವಾಗಿ ನಡೆದ ಕೆರೆಕಟ್ಟೆ ಉತ್ಸವ
First Published | Nov 21, 2022, 4:41 PM ISTಧರ್ಮಸ್ಥಳ (ನ.21): ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಯ ದೇವಳದ ಲಕ್ಷದೀಪೋತ್ಸವದ ಅಂಗವಾಗಿ ಎರಡನೇಯ ದಿನದ ರಾತ್ರಿ ಕೆರೆಕಟ್ಟೆ ಉತ್ಸವ ಧರ್ಮಾದಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ನಡೆಯಿತು. ಮೊದಲಿಗೆ ದೇವಸ್ಥಾನದ ಒಳಭಾಗದಲ್ಲಿ ಸಕಲ ಶಾಸ್ತ್ರ ಗಳೊಂದಿಗೆ ಪೂಜೆ ನಡೆಸಿ ಸಂಪ್ರದಾಯದಂತೆ ಜಾಗಟೆ, ಶಂಖ, ನಾದಸ್ವರ, ಡೋಲು, ಸಂಗೀತ ಮೂಲಕ ಹೂಗಳು ಮತ್ತು ಆಭರಣಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ 16 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ಆನೆ, ಬಸವ, ಪಂಜು, ಗೊಂಬೆಗಳ ಮೆರವಣಿಗೆಯ ಜೊತೆಗೆ ಸಹಸ್ರಾರು ಭಕ್ತರ ಜೊತೆಯಲ್ಲಿ ಪಲ್ಲಕ್ಕಿಯಲ್ಲಿ ಕೆರೆ ಸುತ್ತ 5 ಸುತ್ತು ಪ್ರದಕ್ಷಿಣೆಯನ್ನು ವಿಶೇಷ ವಾದ್ಯಗಳ ಮೂಲಕ ನಡೆಸಲಾಯಿತು.