Shani Gochar 2023: ಇನ್ನೆರಡು ತಿಂಗಳು ಸಹಿಸಿಬಿಡಿ, ಮತ್ತೆ ನಿಮಗೆ ಶನಿ ಕಾಟ ಇರೋಲ್ಲ!

First Published | Nov 23, 2022, 4:22 PM IST

ಶನಿಯು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಮೂರು ರಾಶಿಗಳು ಶನಿಯ ಹಿಡಿತದಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಡಬಹುದು. ಆ ಅದೃಷ್ಟವಂತ ರಾಶಿಗಳಲ್ಲಿ ನಿಮ್ಮದಿದೆಯೇ?

ಶನಿ ಸಾಡೇಸಾತಿ, ಧೈಯಾದಿಂದ ನಲುಗಿ ಹೋಗಿರುವವರು, ನಲುಗುತ್ತಿರುವವರು ನೀವಾದರೆ, ನಿಮಗೆ ಈ ಸುದ್ದಿಯಿಂದ ಸಂತೋಷವಾಗಬಹುದು. ಆದರೆ, ನೀವು ಈ ಮೂರು ರಾಶಿಗೆ ಸೇರಿದವರಾಗಿರಬೇಕು ಅಷ್ಟೇ.

shanidev

ಹೌದು, ಶನಿ ಸಾಡೇಸಾತಿ(Sadesati), ಧೈಯಾ ಸಮಯದ ಅನಾನುಕೂಲಗಳನ್ನು, ಕಷ್ಟಕೋಟಲೆಗಳು ಅನುಭವಿಸಿದವರಿಗೇ ಗೊತ್ತು. ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡಿ ಸತಾಯಿಸಿ ಪರೀಕ್ಷಿಸುತ್ತಾನೆ ಶನಿ. ಆತ ಕಲಿಯುಗದ ಮ್ಯಾಜಿಸ್ಟ್ರೇಟ್. ಕರ್ಮ ಫಲದಾತ. ನವಗ್ರಹಗಳಲ್ಲಿ ಶನಿಗೆ ನ್ಯಾಯಾಧೀಶನ ಸ್ಥಾನಮಾನ ಸಿಕ್ಕಿದೆ. ಶನಿಯ ಹೆಸರು ಕೇಳಿದರೇ ಹೆದರುವವರಿದ್ದಾರೆ. ಆತ ಬಹಳ ನಿಧಾನಗತಿಯ ನಡೆಯವ. ಒಂದು ರಾಶಿಯಿಂದ ಮತ್ತೊಂದಕ್ಕೆ ಚಲಿಸಲು ಶನಿ(Lord Shani)ಯು ಬರೋಬ್ಬರಿ ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಹೀಗಾಗಿ, ಯಾರು ಬೇಕೆನ್ನಲಿ, ಬೇಡವೆನ್ನಲಿ, ಬೇಡಿಕೊಳ್ಳಲಿ- ಎಲ್ಲ ರಾಶಿಗಳಿಗೂ ಕಾಲಿಟ್ಟು ಕಾಡಿಸಿ ಕಂಗೆಡಿಸದೆ ಬಿಡುವವನಲ್ಲ. ಬೇಗ ರಾಶಿ ಪರಿವರ್ತನೆ(Zodiac transit) ಮಾಡಿ ರಿಲೀಫ್ ಕೊಡುವವನೂ ಅವನಲ್ಲ. 

Tap to resize

ಶನಿ ಗ್ರಹವು ರಾಶಿಚಕ್ರದ ಚಿಹ್ನೆಯನ್ನು ಬದಲಾಯಿಸಿದಾಗ, ಅದು ಪ್ರತಿ ರಾಶಿಚಕ್ರ ಚಿಹ್ನೆಯ ಸ್ಥಳೀಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ. 2023 ವರ್ಷಕ್ಕೆ ಕೆಲವೇ ದಿನಗಳು ಉಳಿದಿವೆ. ಈ ವರ್ಷದ ಮೊದಲ ತಿಂಗಳಲ್ಲೇ ಶನಿದೇವನು ತನ್ನದೇ ಆದ ಕುಂಭ ರಾಶಿ(Aquarius)ಯನ್ನು ಪ್ರವೇಶಿಸಲಿದ್ದಾನೆ. ಆಗ, ಅನೇಕ ರಾಶಿಗಳು ಶನಿಯ ಸಾಡೇಸಾತಿ ಮತ್ತು ಧೈಯಾದಿಂದ ಮುಕ್ತರಾಗುತ್ತಾರೆ. ಯಾವೆಲ್ಲ ರಾಶಿಗಳು ಶನಿಯ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾರೆ ನೋಡೋಣ. 

shanidev 2022

2023ರಲ್ಲಿ ಶನಿಯ ರಾಶಿ ಬದಲಾವಣೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಪ್ರಸ್ತುತ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜನವರಿ 17, 2023ರಂದು ರಾತ್ರಿ 8:02ಕ್ಕೆ ಆತ ಮಕರ ರಾಶಿಯಿಂದ ಹೊರಟು ಕುಂಭ ರಾಶಿ(Aquarius)ಯನ್ನು ಪ್ರವೇಶಿಸುತ್ತಾನೆ. ಶನಿಯ ಈ ರಾಶಿ ಬದಲಾವಣೆಯು ಪ್ರತಿಯೊಂದು ರಾಶಿಯ ಸ್ಥಳೀಯರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಸಾಡೇಸಾತಿ ಯಾರ ಮೇಲಿದೆ?
2022ರಲ್ಲಿ, ಶನಿಯು ಮಕರ ರಾಶಿಯಲ್ಲಿ ಸಾಗುತ್ತಿದೆ. ಶನಿಯ ನಿಧಾನಗತಿಯ ಚಲನೆಯಿಂದಾಗಿ, ಅದರ ಪರಿಣಾಮವು ಹಲವು ವರ್ಷಗಳವರೆಗೆ ಇರುತ್ತದೆ. ಶನಿಯ ಸಾಡೇ ಸಾತಿ ಎಂದರೆ ಏಳೂವರೆ ವರ್ಷಗಳು. ಅದರಲ್ಲಿ ಮೂರು ಹಂತಗಳಿವೆ. ಎರಡನೇ ಹಂತವು ಅತ್ಯಂತ ನೋವಿನಿಂದ ಕೂಡಿರುತ್ತದೆ. ಈ ಹಂತದಲ್ಲಿ, ವ್ಯಕ್ತಿಯು ವೈಫಲ್ಯಗಳು, ರೋಗಗಳು ಮತ್ತು ದುರದೃಷ್ಟದಿಂದ ಬಳಲುತ್ತಾನೆ. ಶನಿಯ ಸಾಡೇ ಸಾತಿಯ ಮೊದಲ ಹಂತವು ಆರ್ಥಿಕವಾಗಿ ಕಾಡಿದರೆ, ಎರಡನೆಯದು ಕುಟುಂಬ ಮತ್ತು ಮೂರನೇ ಹಂತ ಆರೋಗ್ಯದ ವಿಷಯವಾಗಿ ಸಮಸ್ಯೆ ತರುತ್ತದೆ.
 

ಈ ಸಮಯದಲ್ಲಿ ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಶನಿಯ ಸಾಡೇ ಸಾತಿ ನಡೆಯುತ್ತಿದೆ. ಇನ್ನು ಮಿಥುನ(Gemini) ಹಾಗೂ ತುಲಾ ರಾಶಿಯವರಿಗೆ ಧೈಯಾ ನಡೆಯುತ್ತಿದೆ. 

ಈ ರಾಶಿಗಳಿಗೆ ಸಾಡೇಸಾತಿ ಮತ್ತು ಧೈಯಾದಿಂದ ಮುಕ್ತಿ
ಜನವರಿ 17, 2023ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ, ಮಿಥುನ ಮತ್ತು ತುಲಾ ರಾಶಿಯ ಜನರ ಧೈಯಾವು ಕೊನೆಗೊಳ್ಳುತ್ತದೆ. ಆದರೆ, ಕರ್ಕ ಮತ್ತು ವೃಶ್ಚಿಕ ರಾಶಿಯ ಜನರಿಗೆ ಧೈಯಾವು ಪ್ರಾರಂಭವಾಗುತ್ತದೆ.

ಧನು ರಾಶಿಯವರಿಗೆ ಶನಿ ಸಾಡೇ ಸಾತಿಯ ಕೊನೆಯ ಘಟ್ಟ ನಡೆಯುತ್ತಿದ್ದು, 2023ರ ಜನವರಿ 17ರಂದು ಇದರಿಂದ ಮುಕ್ತಿ ಸಿಗಲಿದೆ. ಕುಂಭ ರಾಶಿಯವರಿಗೆ ಎರಡನೇ ಘಟ್ಟ ಸಾಡೇಸಾತಿ ನಡೆಯುತ್ತಿದ್ದು, ಮೊದಲ ಘಟ್ಟ ಮಕರ ರಾಶಿಗೆ ನಡೆಯುತ್ತಿದೆ. ಮಕರ, ಕುಂಭ, ಮೀನ ರಾಶಿಗಳಲ್ಲಿ ಸಾಡೇ ಸಾತಿ ಮುಂದುವರಿಯಲಿದೆ. ಹಾಗಾಗಿ, ಜನವರಿ 17, 2023ರಿಂದ ಧನು ರಾಶಿ, ಮಿಥುನ ಹಾಗೂ ತುಲಾ ರಾಶಿಯವರು ಹೊಸ ವರ್ಷದಲ್ಲಿ ನಿಟ್ಟುಸಿರು ಬಿಡಬಹುದು. 

Latest Videos

click me!