ಚಾಣಕ್ಯನ ನೀತಿ: ಇಲ್ಲೆಲ್ಲಾ ನಿಂತರೆ ನರಕಕ್ಕೆ ಸಮಾನವಂತೆ, ಯಾಕಿರಬಹುದು?

First Published Mar 7, 2023, 12:52 PM IST

ಆಚಾರ್ಯ ಚಾಣಕ್ಯನ ನೀತಿಗಳು ಯಶಸ್ಸಿನ ಹಾದಿಯಲ್ಲಿ ನಿರಂತರವಾಗಿ ಮುಂದುವರಿಯಲು ಬಹಳ ಉಪಯುಕ್ತವೆಂದು ಪರಿಗಣಿಸಲಾಗಿದೆ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅನುಸರಿಸುವ ಮೂಲಕ ಅನೇಕ ಯುವಕರು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ. 

ಆಚಾರ್ಯ ಚಾಣಕ್ಯನನ್ನು(Acharya Chanakya) ವಿಶ್ವದ ಅತ್ಯುತ್ತಮ ವಿದ್ವಾಂಸನೆಂದು ಪರಿಗಣಿಸುತ್ತಾರೆ. ಅವರು ರೂಪಿಸಿದ ಚಾಣಕ್ಯ ನೀತಿ ಇಂದಿಗೂ ಲಕ್ಷಾಂತರ ಯುವಕರಿಗೆ ಮಾರ್ಗದರ್ಶನ ನೀಡುತ್ತಿದೆ. ಅಂದು ಆಡಳಿತ ನಿರ್ವಹಿಸಲು ಚಾಣಕ್ಯ ನೀತಿಯೇ ಮುಖ್ಯ ಸೇತುವೆಯಾಗಿತ್ತು, ಹಾಗೆಯೇ ಇಂದಿಗೂ ಸಹ ಚಾಣಕ್ಯ ನೀತಿಗಳು ನಮ್ಮ ಜೀವನ ರೂಪಿಸಲು ಸಾಧ್ಯವಾಗಿಸುತ್ತೆ. 

ಚಾಣಕ್ಯ ನೀತಿಯ ಮೂಲಕ, ಅನೇಕ ವಿದ್ಯಾರ್ಥಿಗಳು ನಿರಂತರವಾಗಿ ಯಶಸ್ಸಿನ ಹಾದಿಯಲ್ಲಿ(Success journey) ಮುಂದುವರಿಯುತ್ತಾರೆ. ಏಕೆಂದರೆ ಚಾಣಕ್ಯ ನೀತಿಯು ಮಾನವರು ತಮ್ಮ ಜೀವಿತಾವಧಿಯಲ್ಲಿ ಏನು ಮಾಡಬೇಕು ಮತ್ತು ಯಾವ ವಿಷಯಗಳನ್ನು ತಪ್ಪಿಸಬೇಕು ಎಂಬುದನ್ನು ವಿವರಿಸುತ್ತೆ. ಆಚಾರ್ಯ ಚಾಣಕ್ಯನ ನೀತಿಗಳಿಂದಾಗಿ, ಚಕ್ರವರ್ತಿ ಚಂದ್ರಗುಪ್ತ ಮೌರ್ಯ ಮಗಧದಲ್ಲಿ ಮೌರ್ಯ ರಾಜವಂಶವನ್ನು ಸ್ಥಾಪಿಸಿದನು.

Latest Videos


ಆಚಾರ್ಯ ಚಾಣಕ್ಯನ ನೀತಿಗಳು(Chanakya niti) ಯಶಸ್ಸು ಮತ್ತು ವೈಫಲ್ಯದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತವೆ. ಚಾಣಕ್ಯ ನೀತಿಯ ಈ ಭಾಗದಲ್ಲಿ, ಒಬ್ಬ ವ್ಯಕ್ತಿಯು ಯಾವ ಸ್ಥಳದಲ್ಲಿ ಒಂದು ಕ್ಷಣವೂ ಇರಬಾರದು ಎಂದು ಅವರು ಹೇಳಿದ್ದಾರೆ, ಅದರ ಬಗ್ಗೆ ತಿಳಿಯೋಣ.

ಚಾಣಕ್ಯ ನೀತಿಯ ಈ ಶ್ಲೋಕವನ್ನು(Shloka) ನೆನಪಿನಲ್ಲಿಡಿ
ಲೋಕಯಾತ್ರಾ ಭಯಂ ಲಜ್ಜಾ ದಾಕ್ಷಿಣ್ಯಮ್ ತ್ಯಾಗಶೀಲತಾ  
ಪಂಚ ಯತ್ರ ನ ವಿದ್ಯಾಂತೇ ನಾ ಕುರ್ಯತತ್ರ ಸಂಗತಿಮ್
ಈ ಶ್ಲೋಕ ಅರ್ಥ ಏನಂದ್ರೆ, ಜೀವನೋಪಾಯವಿಲ್ಲದ ಸ್ಥಳ. ಎಲ್ಲಿ ಜನರಿಗೆ ಭಯ, ಅವಮಾನ, ಔದಾರ್ಯ ಅಥವಾ ದಾನ ಮಾಡುವ ಪ್ರವೃತ್ತಿ ಇರೋದಿಲ್ಲ. ಒಬ್ಬ ವ್ಯಕ್ತಿಯು ಅಂತಹ ಐದು ಸ್ಥಳಗಳಲ್ಲಿ ವಾಸಿಸಬಾರದು.

ಈ ಶ್ಲೋಕದ ಮೂಲಕ ಆಚಾರ್ಯ ಚಾಣಕ್ಯನು ಮಾನವರು ಜೀವನೋಪಾಯವಿಲ್ಲದ ಸ್ಥಳಗಳಲ್ಲಿ ಉಳಿಯುವುದು ನಿಷ್ಪ್ರಯೋಜಕ ಎಂದು ಹೇಳಿದ್ದಾರೆ. ಏಕೆಂದರೆ ಅಂತಹ ಸ್ಥಳದಲ್ಲಿ ಹಣ(Money) ವಿನಿಮಯವಾಗೋದಿಲ್ಲ ಅಥವಾ ಮನುಷ್ಯನ ಪ್ರಗತಿಯ ಮಾರ್ಗವು ತೆರೆದುಕೊಳ್ಳೋದಿಲ್ಲ. 

ಹಾಗೆಯೇ, ರಾಜ ಅಥವಾ ಆಡಳಿತ ಅಥವಾ ಧರ್ಮದ ಭಯ ಮತ್ತು ನಾಚಿಕೆ ಇಲ್ಲದ ಜನ ನಡುವೆ ಮತ್ತು ಅನೀತಿ, ಕ್ರೌರ್ಯ ಮತ್ತು ದುರಾಸೆ ಹೆಚ್ಚಿರುತ್ತೋ ಅಂತಹ ಸ್ಥಳದಲ್ಲಿ ಉಳಿಯೋದು ಮನುಷ್ಯರಿಗೆ ನರಕವಿದ್ದಂತೆ. ಇಂತ ಜನರ ಜೊತೆ ಇದ್ದರೆ, ನಮ್ಮಲ್ಲೂ ಅಂತಹುದೇ ಕೆಟ್ಟ ಗುಣಗಳು(Bad character) ಬೆಳೆಯುವ ಸಾಧ್ಯತೆ ಇದೆ. 

ಜನರಿಗೆ ಔದಾರ್ಯ ಮತ್ತು ದಾನದ ಸ್ವಭಾವ ಇಲ್ಲದಿದ್ದರೆ, ಮಾತೆ ಲಕ್ಷ್ಮಿಯು(Goddess Lakshmi) ಆರ್ಥಿಕವಾಗಿ ಅಥವಾ ಭೌತಿಕವಾಗಿ ಅಲ್ಲಿ ನಿಲ್ಲೋದಿಲ್ಲ ಅಥವಾ ಮುಂದುವರಿಯೋದಿಲ್ಲ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಯಾರೇ ಆಗಲಿ ಸ್ವಲ್ಪ ಹೊತ್ತು ಮಾತ್ರ ಅಂತಹ ಜಾಗದಲ್ಲಿ ನಿಲ್ಲಬಹುದು, ಏಕೆಂದರೆ ಅಂತಹ ಸ್ಥಳದಲ್ಲಿ ಕೀಳರಿಮೆಯ ಭಾವ ತುಂಬಾ ಹೆಚ್ಚಾಗಿರುತ್ತೆ.

click me!