Astrology Tips: ಗುಲಾಬಿ ಹೂವುಗಳನ್ನು ಈ ರೀತಿ ಬಳಸಿದ್ರೆ ಅದೃಷ್ಟ ಬದಲಾಗುತ್ತೆ

First Published | Mar 4, 2023, 5:02 PM IST

ಜ್ಯೋತಿಷ್ಯದಲ್ಲಿ, ಗುಲಾಬಿ ಹೂವಿನ ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ, ಇದನ್ನು ಮಾಡುವುದರಿಂದ ನೀವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಹಾಗಾಗಿ ಗುಲಾಬಿ ಹೂವುಗಳಿಂದ ಇಲ್ಲಿ ತಿಳಿಸಿದ ಪರಿಹಾರಗಳನ್ನು ಮಾಡಿ, ಅದು ನಿಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸುತ್ತದೆ ಅನ್ನೋದನ್ನು ತಿಳಿಯಿರಿ. 

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇರಬಾರದು ಮತ್ತು ಅವರು ತಮ್ಮ ಕುಟುಂಬದೊಂದಿಗೆ ಸಂತೋಷದ ಜೀವನವನ್ನು ನಡೆಸಬೇಕು ಎಂದು ಬಯಸುತ್ತಾರೆ. ಜ್ಯೋತಿಷ್ಯದಲ್ಲಿ, ಗುಲಾಬಿಗಳ (Rose) ಕೆಲವು ಪರಿಹಾರಗಳನ್ನು ಹೇಳಲಾಗಿದೆ, ಇದನ್ನು ಮಾಡೋದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಸಾಧ್ಯವಾಗುತ್ತೆ. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ನೋಡೋಣ. 

ಕೆಲವೊಮ್ಮೆ ಅಥವಾ ಹಲವಾರು ಬಾರಿ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಹಣದ ಕೊರತೆ (Money Problem) ಕಾಡುತ್ತದೆ, ಇದಕ್ಕೆ ಕಾರಣ ಏನೆಂದು ನಿಮಗೆ ತಿಳಿಯದೇ ಹೋಗಬಹುದು. ಆದರೆ ವಾಸ್ತು ದೋಷದಿಂದಾಗಿ ಈ ಸಮಸ್ಯೆ ಕಾಡಬಹುದು ಅನ್ನೋದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಸಮಸ್ಯೆ ನಿವಾರಿಸೋದು ಹೇಗೆ?

Tap to resize

ಶುಕ್ರವಾರ, ಗುಲಾಬಿ ಹೂವಿನ ಮೇಲೆ ಕರ್ಪೂರದ ತುಂಡನ್ನು ಬೆಳಗಿಸಿ ಮತ್ತು ಬಳಿಕ ಇದನ್ನು ತಾಯಿ ಲಕ್ಷ್ಮಿಗೆ (goddess Lakshmi) ಅರ್ಪಿಸಿ. ಹೀಗೆ ಮಾಡೋದರಿಂದ ಧನ ಲಾಭವಾಗುತ್ತದೆ. ನೀವು ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗುವುದು. 

ನಿಮ್ಮ ಮನೋಕಾಮನೆಗಳೆಲ್ಲವೂ ಈಡೇರಬೇಕು ಎಂದು ನೀವು ಬಯಸಿದರೆ, ಪ್ರತಿ ಮಂಗಳವಾರ ಹನುಮಂತನಿಗೆ 11 ಗುಲಾಬಿ ಹೂವುಗಳನ್ನು (11 rose for Hanuman) ಅರ್ಪಿಸಬೇಕು. ಹೀಗೆ ಮಾಡುವುದರಿಂದ ನೀವು ಅಂದುಕೊಂಡಿದ್ದೆಲ್ಲಾ ಈಡೇರುತ್ತದೆ. ನೀವು ಸಂತೋಷದ ಜೀವನ ನಡೆಸಲು ಸಾಧ್ಯವಾಗುತ್ತೆ.

ಒಂದು ಬಿಳೆ ಬಟ್ಟೆಯ ನಾಲ್ಕು ಮೂಲೆಗಳಿಗೆ ನಾಲ್ಕು ಗುಲಾಬಿ ಹೂವುಗಳನ್ನು ಕಟ್ಟಿ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಇದರಿಂದ ಜೀವನದ ದುಃಖವು ನೀರಿನಂತೆ ಹರಿದು ಹೋಗುತ್ತದೆ, ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. 

ನೀವು ಕೆಲಸದ ಹುಡುಕಾಟದಲ್ಲಿದ್ದು, ಎಷ್ಟೇ ಹುಡುಕಿದರೂ ಕೆಲಸ (Searching for Job) ಸಿಗುತ್ತಿಲ್ಲವೇ? ಹಾಗಿದ್ರೆ ಜ್ಯೋತಿಷ್ಯದ ಈ ಪರಿಹಾರ ಪಾಲಿಸಿ. ಅದಕ್ಕಾಗಿ 40 ದಿನಗಳವರೆಗೆ ನೀವು ಬರಿಗಾಲಿನಲ್ಲಿ ಹನುಮಂತನ ಮಂದಿರಕ್ಕೆ ಹೋಗಿ ಹನುಮನಿಗೆ ಕೆಂಪು ಗುಲಾಬಿ ಹೂವುಗಳನ್ನು ಅರ್ಪಿಸಿ. ಇದರಿಂದಾ ಶೀಘ್ರದಲ್ಲೇ ನಿಮಗೆ ಕೆಲಸ ಲಭ್ಯವಾಗುವುದು. 
 

Latest Videos

click me!