ರಾಮನವಮಿಗೂ, ಚೈತ್ರ ನವರಾತ್ರಿಗೂ ಸಂಬಂಧ ಏನು?

First Published Mar 5, 2023, 1:26 PM IST

ಚೈತ್ರ ಮಾಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ, ಈ ತಿಂಗಳಲ್ಲಿ ಅನೇಕ ಪವಿತ್ರ ಹಬ್ಬಗಳನ್ನು ನೋಡಬಹುದು. ಇವುಗಳಲ್ಲಿ, ಚೈತ್ರ ನವರಾತ್ರಿ ಮತ್ತು ರಾಮ ನವಮಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ರಾಮನವಮಿ ಮತ್ತು ಚೈತ್ರ ನವರಾತ್ರಿ ಹಬ್ಬದ ನಡುವಿನ ಸಂಬಂಧವೇನು ಎಂದು ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿ (Hindu Region) ಚೈತ್ರ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತೆ. ಈ ವರ್ಷ, ಚೈತ್ರ ಮಾಸ ಮಾರ್ಚ್ 8, 2023 ರಂದು ಬುಧವಾರ ಪ್ರಾರಂಭವಾಗಲಿದೆ ಮತ್ತು ಏಪ್ರಿಲ್ 6, 2023 ರ ಶುಕ್ರವಾರ ಕೊನೆಗೊಳ್ಳುತ್ತೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತೆ, ಇದರಲ್ಲಿ ಚೈತ್ರ ನವರಾತ್ರಿ ಮತ್ತು ರಾಮ ನವಮಿಗೆ ವಿಶೇಷ ಮಹತ್ವವಿದೆ.

ಶರದಿಯ ನವರಾತ್ರಿಯ ಹತ್ತನೇ ದಿನದಂದು ಭಗವಾನ್ ರಾಮನು (Bhagawan Ram) ರಾವಣನನ್ನು ಕೊಂದನು. ಅದೇ ಸಮಯದಲ್ಲಿ, ಭಗವಾನ್ ಶ್ರೀ ರಾಮ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಅವತಾರ ತಾಳಿದನು ಎನ್ನಲಾಗುತ್ತೆ. ಆದ್ದರಿಂದ ಈ ವಿಶೇಷ ದಿನವನ್ನು ರಾಮನವಮಿ ಎಂದು ಕರೆಯಲಾಗುತ್ತೆ. 

Latest Videos


ಈ ವಿಶೇಷ ದಿನದಂದು, ಭಗವಾನ್ ಶ್ರೀ ರಾಮನನ್ನು ಪೂಜಿಸಲಾಗುತ್ತೆ ಮತ್ತು ಉಪವಾಸ ಮಾಡಲಾಗುತ್ತೆ ಹಾಗೆಯೇ ಸಂತೋಷ ಮತ್ತು ಶಾಂತಿಗಾಗಿ ಹವನವನ್ನು ಮಾಡಲಾಗುತ್ತೆ. ಚೈತ್ರ ನವರಾತ್ರಿ ಮತ್ತು ರಾಮ ನವಮಿಯ ನಡುವಿನ ವಿಶೇಷ ಸಂಬಂಧವೇನು ಎಂದು ತಿಳಿಯೋಣ.

ರಾಮನವಮಿ ಮತ್ತು ಚೈತ್ರ ನವರಾತ್ರಿಯ ನಡುವಿನ ಸಂಬಂಧ 
ಭಗವಾನ್ ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಭೂಮಿಯ ಮೇಲೆ ಅವತಾರ ತಾಳಿದನು. ಧರ್ಮಗ್ರಂಥಗಳ ಪ್ರಕಾರ, ಶ್ರೀ ರಾಮ ವಿಷ್ಣುವಿನ ಏಳನೇ ಅವತಾರ ಮತ್ತು ಈ ಕಾರಣಕ್ಕಾಗಿಯೇ ರಾಮನವಮಿ ಹಬ್ಬವನ್ನು ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತೆ. ಈ ದಿನವು ಚೈತ್ರ ನವರಾತ್ರಿ (Chaitra Navaratri) ಉಪವಾಸದ ಕೊನೆಯ ದಿನ. ಈ ಕಾರಣಕ್ಕಾಗಿ, ಈ ದಿನದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗುತ್ತೆ.
 

ರಾಮ ನವಮಿ ದಿನಾಂಕ 
ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಶುಕ್ಲ ಪಕ್ಷದ ನವಮಿ ತಿಥಿ ಮಾರ್ಚ್ 29, 2023 ರಂದು ರಾತ್ರಿ 09:07 ಕ್ಕೆ ಪ್ರಾರಂಭವಾಗುತ್ತೆ ಮತ್ತು ಮಾರ್ಚ್ 30, 2023 ರಂದು ರಾತ್ರಿ 11:30 ಕ್ಕೆ ಕೊನೆಗೊಳ್ಳುತ್ತೆ . ಉದಯ ತಿಥಿಯ ಪ್ರಕಾರ, ರಾಮನವಮಿ (Ram Navami)ಹಬ್ಬವನ್ನು ಮಾರ್ಚ್ 30, 2023 ರ ಶುಕ್ರವಾರ ಆಚರಿಸಲಾಗುತ್ತೆ.

ರಾಮನವಮಿ ಪೂಜೆಯ ಮಹತ್ವ 
ರಾಮನವಮಿಯ ದಿನದಂದು, ಭಗವಾನ್ ಶ್ರೀ ರಾಮನ ಅವತಾರ ದಿನವನ್ನು ದೇಶಾದ್ಯಂತ ಆಡಂಬರ ಮತ್ತು ಸಂತೋಷದಿಂದ ಆಚರಿಸಲಾಗುತ್ತೆ. ಈ ವಿಶೇಷ ದಿನದಂದು, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ರಾಮನವಮಿಯಂದು ಶ್ರೀ ರಾಮ ಮತ್ತು ದುರ್ಗಾ ದೇವಿಯನ್ನು ಪೂಜಿಸೋದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದ ದುಃಖಗಳನ್ನು ತೆಗೆದುಹಾಕುತ್ತೆ ಎಂಬ ನಂಬಿಕೆಯಿದೆ. ರಾಮನವಮಿಯಂದು ಪೂಜೆಮಾಡೋ ಮೂಲಕ ಭಕ್ತರು ಸಂಪತ್ತು ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ.

click me!