ನಿದ್ದೆಯೇ ಪಂಚಪ್ರಾಣ: ಕೆಲವು ರಾಶಿಯವರು ಇತರರಿಗಿಂತ ಹೆಚ್ಚು ನಿದ್ದೆ ಮಾಡಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಆರಾಮ ಹಾಗೂ ಒತ್ತಡ ನಿವಾರಣೆಗಾಗಿ ನಿದ್ದೆಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಲೇಖನವು ಅತಿಯಾಗಿ ನಿದ್ದೆ ಮಾಡುವ ರಾಶಿಗಳ ಬಗ್ಗೆ ವಿವರಿಸುತ್ತದೆ.
ನಿದ್ದೆ ಜೀವನದ ಪ್ರಮುಖವಾದ ಚಟುವಟಿಕೆ. ದಿನಕ್ಕೆ ಕನಿಷ್ಠ 8 ಗಂಟೆಯಾದರೂ ನಿದ್ದೆ ಮಾಡಬೇಕು. ಕೆಲವೊಮ್ಮೆ ನಿದ್ದೆ ಕಡಿಮೆಯಾದ್ರೆ ಅನಾರೋಗ್ಯವುಂಟಾಗುತ್ತದೆ. ಕೆಲವರು ನಿದ್ರಾಹೀನತೆಯಿಂದ ಬಳಲುತ್ತಾರೆ. ಆದ್ರೆ ಒಂದಿಷ್ಟು ಜನರು ಮಾತ್ರ ಅತಿಯಾಗಿ ನಿದ್ದೆ ಮಾಡುತ್ತಾರೆ.
27
ನಿದ್ದೆಗೆ ಮೊದಲ ಆದ್ಯತೆ
ಕೆಲವು ರಾಶಿಯವರು ನಿದ್ದೆಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಈ ರಾಶಿಯವರಿಗೆ ನಿದ್ದೆ ಬಗ್ಗೆ ಮಾತನಾಡಿದರೂ ಕಣ್ಣು ಮುಚ್ಚಲು ಶುರು ಮಾಡ್ತಾರೆ. ಸಾಮಾನ್ಯವಾಗಿ ಎಲ್ಲರಗಿಂತ ಈ ರಾಶಿಯವರು ಅತಿಯಾಗಿ ನಿದ್ದೆ ಮಾಡುತ್ತಾರೆ. ನೆಮ್ಮದಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಇವರು ಇಡೀ ದಿನ ಲವಲವಿಕೆಯಿಂದ ಇರುತ್ತಾರೆ. ಅತಿಹೆಚ್ಚು ನಿದ್ದೆ ಮಾಡುವ ರಾಶಿಗಳು ಯಾವವು ಎಂದು ನೋಡೋಣ ಬನ್ನಿ.
37
ವೃಷಭ ರಾಶಿ
ವೃಷಭ ರಾಶಿಯವರು ಆರಾಮ ಮತ್ತು ವಿಲಾಸಿಮಯ ಜೀವನವನ್ನು ಬಯಸುತ್ತಾರೆ. ಈ ವಿಲಾಸಿಮಯ ಜೀವನದಲ್ಲಿ ನಿದ್ದೆಯೂ ಸೇರಿರುತ್ತದೆ. ಇವರಿಗೆ ಮೆತ್ತನೆಯ ಹಾಸಿಗೆ ಮತ್ತು ದಿಂಬು ಸಿಕ್ಕರೆ ನಿದ್ದೆ ಇವರನ್ನು ಆವರಿಸುತ್ತದೆ. ಸ್ವಲ್ಪ ಸಮಯ ಸಿಕ್ಕರೂ ಸಾಕು ಇವರು ನಿದ್ದೆ ಮಾಡಲು ಹೋಗುತ್ತಾರೆ.
ಕರ್ಕ ರಾಶಿಯವರಿಗೂ ನಿದ್ದೆ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಯಾವುದೇ ಕೆಲಸಗಳಿಲ್ಲ ಅಂದ್ರೆ ನಿದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಮ್ಮೆ ನಿದ್ದೆ ಮಾಡಲು ಶುರು ಮಾಡಿದ್ರೆ ಇವರು ದೀರ್ಘಸಮಯದವರೆಗೆ ನಿದ್ರಿಸುತ್ತಾರೆ. ಹಾಗೆ ಆಳವಾದ ನಿದ್ದೆಗೆ ಜಾರುತ್ತಾರೆ. ನಿದ್ದೆ ಮಾಡುವ ಸಮಯದಲ್ಲಿ ಅಕ್ಕ-ಪಕ್ಕ ಏನಾಗ್ತಿದೆ ಅನ್ನೋದು ಈ ರಾಶಿಯವರಿಗೆ ಗೊತ್ತಾಗಲ್ಲ.
57
ಮೀನ ರಾಶಿ
ಮೀನ ರಾಶಿಯವರು ನಿದ್ದೆ ಮಾಡೋದನ್ನು ಇಷ್ಟಪಡುತ್ತಾರೆ. ಆದರೆ ಸಿಕ್ಕ ಸಿಕ್ಕ ಜಾಗದಲ್ಲಿ ನಿದ್ದೆ ಮಾಡಲು ಮೀನ ರಾಶಿಯವರು ಇಷ್ಟಪಡಲ್ಲ. ಆರಾಮಾದಾಯಕ ಸ್ಥಳವಿದ್ರೆ ಮಾತ್ರ ನಿದ್ದೆ ಮಾಡುತ್ತಾರೆ. ಒತ್ತಡ ನಿವಾರಣೆಗೆ ಇವರು ನಿದ್ದೆ ಮಾಡುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಯವರು ಶ್ರಮಜೀವಿಗಳಾಗಿದ್ದು, ಪದೇ ಪದೇ ನಿದ್ದೆ ಮಾಡಲ್ಲ. ಶ್ರಮಕ್ಕೆ ಮೊದಲ ಆದ್ಯತೆ ನೀಡೋ ಈ ರಾಶಿಯವರು ವಿಲಾಸಿ ಜೀವನದ ಹಿಂದೆ ಓಡಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತ ತಿಳಿದುಕೊಂಡಿರುವ ಮಕರ ರಾಶಿಯವರು ಕೆಲಸ ಪೂರ್ಣವಾದ ಬಳಿಕವಷ್ಟೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಾರೆ.
ಇನ್ನು ಸಿಂಹ, ಕನ್ಯಾ, ವೃಶ್ಚಿಕ ಮತ್ತು ಧನು ರಾಶಿಯವರು ಸಹ ನಿದ್ದೆಗಾಗಿ ಹಾತೊರೆಯುತ್ತಾರೆ. ಈ ರಾಶಿಯುವರು ನಿದ್ದೆ ಮೇಲೆ ಅತಿಯಾದ ವ್ಯಾಮೋಹವನ್ನು ಹೊಂದಿರುತ್ತಾರೆ. Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.