ಬುದ್ಧ ಪೂರ್ಣಿಮೆಯಂದು, ವರ್ಷದ ಮೊದಲ ಚಂದ್ರ ಗ್ರಹಣ…

Published : Apr 18, 2023, 03:04 PM IST

ಬುದ್ಧ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಭಗವಾನ್ ಬುದ್ಧನ ಜನ್ಮದಿನವೆಂದು ಆಚರಿಸಲಾಗುತ್ತೆ. ಈ ವರ್ಷ, ಬುದ್ಧ ಪೂರ್ಣಿಮಾ ದಿನದಂದು ಚಂದ್ರ ಗ್ರಹಣ ಸಂಭವಿಸಲಿದೆ. ಆದ್ದರಿಂದ ಬುದ್ಧ ಪೂರ್ಣಿಮೆಯ ಮಹತ್ವ ಮತ್ತು ಶುಭ ಮುಹೂರ್ತ ಮತ್ತು ಅದು ಎಷ್ಟು ಕಾಲ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ.

PREV
18
ಬುದ್ಧ ಪೂರ್ಣಿಮೆಯಂದು,  ವರ್ಷದ ಮೊದಲ ಚಂದ್ರ ಗ್ರಹಣ…

ಪೂರ್ಣಿಮಾ ತಿಥಿಗೆ ವಿಶೇಷ ಮಹತ್ವವಿದೆ. ಈ ಬಾರಿ ವೈಶಾಖ ಪೂರ್ಣಿಮಾ ಬಹಳ ಮುಖ್ಯವಾಗಲಿದೆ. ಭಗವಾನ್ ಬುದ್ಧನು ವೈಶಾಖ ಪೂರ್ಣಿಮೆಯ ದಿನದಂದು ಜನಿಸಿದನು, ಆದ್ದರಿಂದ ಇದನ್ನು ಬುದ್ಧ ಪೂರ್ಣಿಮಾ(Buddha Poornima) ಎಂದೂ ಕರೆಯಲಾಗುತ್ತೆ.

28

ಈ ಬಾರಿ ವರ್ಷದ ಮೊದಲ ಚಂದ್ರ ಗ್ರಹಣವು(Lunar Eclipse) ಬುದ್ಧ ಪೂರ್ಣಿಮಾ ದಿನದಂದು ಸಂಭವಿಸಲಿದೆ. ಲಕ್ಷ್ಮಿ, ನಾರಾಯಣ ಮತ್ತು ಚಂದ್ರ ದೇವರನ್ನು ಈ ದಿನ ಪೂಜಿಸಲಾಗುತ್ತೆ. ಈ ದಿನದಂದು ಮಾಡಿದ ದಾನಗಳು ಸಹ ವಿಶೇಷ ಮಹತ್ವವನ್ನು ಹೊಂದಿವೆ. ಬುದ್ಧ ಪೂರ್ಣಿಮಾ ಅಥವಾ ವೈಶಾಖ ಪೂರ್ಣಿಮಾ ಯಾವಾಗ ಮತ್ತು ಅದರ ಮಹತ್ವವೇನು ಎಂದು ತಿಳಿಯೋಣ.

38

ಬುದ್ಧ ಪೂರ್ಣಿಮೆ ಯಾವಾಗ?
ಈ ಬಾರಿ ಬುದ್ಧ ಪೂರ್ಣಿಮಾ ಮೇ 5 ರಂದು ಇದೆ. ಈ ವರ್ಷದ ಮೊದಲ ಚಂದ್ರಗ್ರಹಣವು ಬುದ್ಧ ಪೂರ್ಣಿಮಾ ದಿನದಂದು ಸಂಭವಿಸಲಿದೆ. ಬುದ್ಧ ಪೂರ್ಣಿಮೆಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ(Bath) ಮಾಡೋದರಿಂದ ವ್ಯಕ್ತಿಗೆ ಪಾಪಗಳಿಂದ ಮುಕ್ತಿ ಸಿಗುತ್ತೆ ಎಂದು ನಂಬಲಾಗಿದೆ.

48

ಬುದ್ಧ ಪೂರ್ಣಿಮಾ 2023ರ ದಿನಾಂಕ
ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಮೇ 4 ರ ಗುರುವಾರ ರಾತ್ರಿ 11:45 ಕ್ಕೆ ಪ್ರಾರಂಭವಾಗಲಿದೆ ಮತ್ತು ಮೇ 5 ರ ಶುಕ್ರವಾರ ರಾತ್ರಿ 11:29 ಕ್ಕೆ ಕೊನೆಗೊಳ್ಳಲಿದೆ. ಈ ದಿನದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ. 

58

ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತೆ. ಆದರೆ, ಈ ಚಂದ್ರ ಗ್ರಹಣವು ಭಾರತದಲ್ಲಿ(India) ಗೋಚರಿಸೋದಿಲ್ಲ, ಆದ್ದರಿಂದ ಸೂತಕದ ಅವಧಿ ಮಾನ್ಯವಾಗಿರೋದಿಲ್ಲ. ಇದು ವರ್ಷದ ಮೊದಲ ಚಂದ್ರಗ್ರಹಣವಾಗಲಿದೆ.

68

ಬುದ್ಧ ಪೂರ್ಣಿಮೆಯ ಮಹತ್ವ
ಭಗವಾನ್ ಗೌತಮ ಬುದ್ಧನ ಜನ್ಮದಿನವಾಗಿ ವೈಶಾಖ ಪೂರ್ಣಿಮಾವನ್ನು ಸಹ ಆಚರಿಸಲಾಗುತ್ತೆ. ನಂಬಿಕೆಗಳ ಪ್ರಕಾರ, ಭಗವಾನ್ ಬುದ್ಧನು ಬೋಧ್ ಗಯಾದ ಬೋಧಿ ಮರದ ಕೆಳಗೆ ಜ್ಞಾನೋದಯವನ್ನು ಪಡೆದನು. 

78

ಈ ದಿನದಂದು ಕುರ್ಮಾ ಜಯಂತಿಯನ್ನು ಸಹ ಆಚರಿಸಲಾಗುತ್ತೆ. ವಾಸ್ತವವಾಗಿ, ವಿಷ್ಣು ಭೂಮಿಯನ್ನು ಉಳಿಸಲು ಕುರ್ಮಾ ಅವತಾರವನ್ನು ತೆಗೆದುಕೊಂಡನು. ಈ ದಿನದಂದು ಗೌತಮ ಬುದ್ಧನಿಗೆ ಜ್ಞಾನೋದಯವಾಯಿತು. ಭಗವಾನ್ ವಿಷ್ಣುವನ್ನು ನಂಬುವವರಿಗೆ ಈ ದಿನ ತುಂಬಾ ವಿಶೇಷವಾಗಿದೆ.
 

88

ಈ ದಿನದಂದು ಕುರ್ಮಾ ಜಯಂತಿಯನ್ನು ಸಹ ಆಚರಿಸಲಾಗುತ್ತೆ. ವಾಸ್ತವವಾಗಿ, ವಿಷ್ಣು ಭೂಮಿಯನ್ನು ಉಳಿಸಲು ಕುರ್ಮಾ ಅವತಾರವನ್ನು ತೆಗೆದುಕೊಂಡನು. ಈ ದಿನದಂದು ಗೌತಮ ಬುದ್ಧನಿಗೆ ಜ್ಞಾನೋದಯವಾಯಿತು. ಭಗವಾನ್ ವಿಷ್ಣುವನ್ನು ನಂಬುವವರಿಗೆ ಈ ದಿನ ತುಂಬಾ ವಿಶೇಷವಾಗಿದೆ.
 

click me!

Recommended Stories