ಶ್ವಾನಗಳ(Dog) ಚಲನೆಗೆ ಶಕುನ ಶಾಸ್ತ್ರದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಅವು ಶಕುನ ಮತ್ತು ಅಪಶಕುನದೊಂದಿಗೆ ಸಂಬಂಧ ಹೊಂದಿರೋದನ್ನು ಕಾಣಬಹುದು. ಅವು ನಮ್ಮ ಜೀವನದ ಮೇಲೆ ಶುಭ ಪರಿಣಾಮ ಬೀರುತ್ತವೆ. ಇದರೊಂದಿಗೆ, ಈ ಶಕುನ ಮತ್ತು ಅಪಶಕುನ ಮುಂಬರುವ ಸಮಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಸೂಚಿಸುತ್ತೆ. ಈ ವಿಷಯಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದಿದ್ದರೂ, ಈ ಊಹೆಗಳನ್ನು ಜನರಲ್ಲಿನ ನಂಬಿಕೆಯ ಆಧಾರದ ಮೇಲೆ ಮಾಡಲಾಗಿದೆ. ನಾಯಿಗಳಿಗೆ ಸಂಬಂಧಿಸಿದ ಶಕುನ ಮತ್ತು ಅಪಶಕುನ ಬಗ್ಗೆ ತಿಳಿದುಕೊಳ್ಳೋಣ.
ಬಾಯಿಗೆ ರೊಟ್ಟಿ, ಬ್ರೆಡ್(Bread) ತುಂಬಿಸಿರುವ ನಾಯಿ
ನಾಯಿ ತನ್ನ ಬಾಯಿಯಲ್ಲಿ ಬ್ರೆಡ್ ತುಂಬಿಸಿ ನಿಮ್ಮ ಕಡೆಗೆ ಬರೋದನ್ನು ನೀವು ನೋಡಿದರೆ, ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಿ. ಇದು ನಿಮ್ಮ ಯಶಸ್ಸಿನ ಸಂಕೇತ ಎಂದು ಶಕುನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದು ವ್ಯವಹಾರದಲ್ಲಿ ಲಾಭದ ಸೂಚಕವಾಗಿದೆ. ಅಥವಾ ನೀವು ಉದ್ಯೋಗದಲ್ಲಿ ಸಂಬಳ ಹೆಚ್ಚಳದ ಸುದ್ದಿಯನ್ನು ಸಹ ಪಡೆಯಬಹುದು. ನೀವು ಉದ್ಯೋಗ ಸಂದರ್ಶನ ನೀಡಲು ಹೊರಟಿದ್ದರೆ, ಆಗ ನೀವು ನಾಯಿಯನ್ನು ನೋಡಿದ್ರೆ ನೀವು ಆಯ್ಕೆಯಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ.
ನಾಯಿ ತನ್ನ ಬಾಯಿಯಲ್ಲಿ ಹಾಳೆಯನ್ನು ತರುತ್ತಿರೋದು ನೋಡುವುದು
ನೀವು ನಾಯಿಯ ಬಾಯಿಯಲ್ಲಿ ಪಾಲಿಥಿನ್(Polythene) ಅಥವಾ ಇನ್ನಾವುದೇ ತ್ಯಾಜ್ಯವನ್ನು ನೋಡಿದ್ರೆ, ನೀವು ಜಾಗರೂಕರಾಗಿರಬೇಕು. ಹಾಗೆ ನಾಯಿ ಬರುವುದು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೂಚಿಸುತ್ತೆ ಎಂದು ನಂಬಲಾಗಿದೆ. ಇದರರ್ಥ ನೀವು ಮಾಡುತ್ತಿರುವ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ. ಹಾಗಾಗಿ, ನೀವು ಜಾಗರೂಕರಾಗಿರಬೇಕು ಮತ್ತು ನಿಮ್ಮ ಸಿದ್ಧತೆಯನ್ನು ಸರಿಯಾಗಿ ಮಾಡಬೇಕು.
ನಾಯಿ ತನ್ನ ಬಾಯಿಯಲ್ಲಿ ಬಟ್ಟೆ(Cloth) ಹಿಡಿದುಕೊಂಡಿರೋದು ಕಂಡುಬಂದ್ರೆ
ಬಾಯಿಯಲ್ಲಿ ಬಟ್ಟೆ ತುಂಬಿಸಿರುವ ನಾಯಿಯನ್ನು ನೋಡಿದ್ರೆ, ಇದು ಸಹ ಒಳ್ಳೆಯ ಸಂಕೇತವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಮಾನಸಿಕ ತೊಂದರೆಗೆ ಒಳಗಾಗುವ ಸಾಧ್ಯತೆ ಕೂಡ ಇದೆ ಎಂದು ನಂಬಲಾಗಿದೆ.
ಪ್ರಯಾಣ(Travel) ಮಾಡುವಾಗ ಜಾಗರೂಕರಾಗಿರಬೇಕು. ನೀವು ಹೋಗುತ್ತಿರುವ ಕೆಲಸವನ್ನು ಪೂರ್ಣಗೊಳಿಸೋದು ಕಷ್ಟವಾಗುತ್ತದೆ. ಈ ರೂಪದಲ್ಲಿ ನಾಯಿಯನ್ನು ನೋಡೋದು ಮನೆಯಲ್ಲಿನ ಭಿನ್ನಾಭಿಪ್ರಾಯವನ್ನು ಸೂಚಿಸುತ್ತೆ. ಈ ಭಿನ್ನಾಭಿಪ್ರಾಯದಿಂದಾಗಿ, ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಒತ್ತಡಕ್ಕೆ ಒಳಗಾಗಬಹುದು.
ನಾಯಿಯ ಬಾಯಿಯಲ್ಲಿ ಮಾಂಸದ(Meat) ತುಂಡು ಕಂಡುಬಂದ್ರೆ
ನಾಯಿ ಬಾಯಿಯಲ್ಲಿ ಮಾಂಸದ ತುಂಡನ್ನು ತರುವುದು ಕಂಡುಬಂದರೆ, ಅದು ತುಂಬಾ ಶುಭ ಸಂಕೇತ. ಇದು ಕೆಲಸದಲ್ಲಿ ಯಶಸ್ಸನ್ನು ನೀಡುತ್ತೆ ಮತ್ತು ಲಾಭವನ್ನು ಸಹ ಸೂಚಿಸುತ್ತೆ. ಈ ರೀತಿ ನಾಯಿಯನ್ನು ನೋಡುವುದು ಕೆಲಸದಲ್ಲಿನ ಯಶಸ್ಸಿನ ಬಗ್ಗೆ ಹೇಳುತ್ತೆ . ನೀವು ಎಲ್ಲಿಂದಲಾದರೂ ಉಡುಗೊರೆಯನ್ನು ಸಹ ಪಡೆಯಬಹುದು ಅಥವಾ ನೀವು ಸ್ಥಗಿತಗೊಂಡ ಹಣವನ್ನು ಸಹ ಪಡೆಯಬಹುದು.