ನ್ಯಾಯದ ದೇವರಾದ ಶನಿ ದೇವನು(Shani dev) ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಕಾರ್ಯಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಮಾಡುವ ವ್ಯಕ್ತಿಯು ಶುಭ ಫಲಗಳನ್ನು ಪಡೆಯುತ್ತಾನೆ ಮತ್ತು ತಪ್ಪು ಕಾರ್ಯಗಳಲ್ಲಿ ತೊಡಗಿರುವ ವ್ಯಕ್ತಿಯನ್ನು ಶಿಕ್ಷಿಸುತ್ತಾನೆ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆ ಶನಿಯ ನೆರಳನ್ನು ಎದುರಿಸಬೇಕಾಗುತ್ತೆ. ಶನಿಯ ಸಾಡೇ ಸಾಥ್(Sade saath) ಸಮಯದಲ್ಲಿ, ಜನರು ದೈಹಿಕ, ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತೆ. ಇದರಿಂದ ಯಾವ ರಾಶಿಯ ಮೇಲೆ ಏನು ಪರಿಣಾಮ ಬೀಳುತ್ತದೆ ಅನ್ನೋದನ್ನು ತಿಳಿಯೋಣ.
ಜ್ಯೋತಿಷ್ಯದಲ್ಲಿ, ಶನಿ ದೇವರ ಕೆಲವು ನೆಚ್ಚಿನ ರಾಶಿಗಳನ್ನು(Zodiac sign) ವಿವರಿಸಲಾಗಿದೆ, ಇದು ಶನಿ ದೇವರ ವಕ್ರ ಕಣ್ಣಿನಿಂದ ಪ್ರಭಾವಿತವಾಗೋದಿಲ್ಲ. ಶನಿ ದೇವರು ಯಾವ ರಾಶಿಯ ಮೇಲೆ ಅನುಗ್ರಹ ಹೊಂದಿವೆ ಅನ್ನೋದನ್ನು ಇಲ್ಲಿ ತಿಳಿಯಿರಿ.
1. ವೃಷಭ ರಾಶಿ(Taurus) - ಶುಕ್ರನ ರಾಶಿಯಾದ ವೃಷಭ ರಾಶಿಯು ಶನಿ ದೇವರಿಂದ ಆಶೀರ್ವದಿಸಲ್ಪಟ್ಟಿದೆ. ಶನಿ ಮತ್ತು ಶುಕ್ರನ ನಡುವಿನ ಸ್ನೇಹದ ಪ್ರಜ್ಞೆಯಿಂದಾಗಿ, ಶನಿ ವೃಷಭ ರಾಶಿಯ ಜನರ ಮೇಲೆ ಅಶುಭ ಪರಿಣಾಮ ಬೀರೋದಿಲ್ಲ.
2. ತುಲಾ ರಾಶಿ(Libra) - ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯಲ್ಲಿ ಶನಿಯನ್ನು ಉನ್ನತ ರಾಶಿಚಕ್ರ ಚಿಹ್ನೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ರಾಶಿಯ ಜನರ ಮೇಲೆ ಶನಿಯ ಸಾಡೇ ಸಾಥ್ ಪ್ರಭಾವವು ತುಂಬಾ ಕಡಿಮೆ. ಈ ರಾಶಿಯ ಜನರು ಶನಿ ದೇವರ ಅನಂತ ಅನುಗ್ರಹದಿಂದ ಪ್ರಗತಿಯನ್ನು ಪಡೆಯುತ್ತಾರೆ.
3. ಮಕರ ರಾಶಿ(Capricorn)- ಮಕರ ರಾಶಿಯ ಅಧಿಪತಿ ಶನಿ ದೇವರು. ಮಕರ ರಾಶಿಯನ್ನು ಶನಿ ದೇವರ ನೆಚ್ಚಿನ ರಾಶಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಶನಿಯ ಸಾಡೇ ಸಾಥ್ ಈ ರಾಶಿಚಕ್ರದ ಜನರ ಮೇಲೆ ಕಡಿಮೆ ಪ್ರಭಾವ ಬೀರುತ್ತವೆ.
4. ಕುಂಭ ರಾಶಿ (Aquarius) - ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಹಾಗಾಗಿ, ಶನಿ ದೇವ ಈ ರಾಶಿಯ ಜನರ ಮೇಲೆ ಶುಭ ಪರಿಣಾಮ ಬೀರುತ್ತಾನೆ. ಈ ರಾಶಿಯ ಜನರು ಬಹಳ ಕಡಿಮೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಇದರೊಂದಿಗೆ, ಶನಿ ದೇವ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಸಹ ಕಡಿಮೆ ಮಾಡುತ್ತಾನೆ.