ಮಹಿಳೆಯರು ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಇವರು ಗಂಡನಿಗೆ ಸಂಪೂರ್ಣ ಬೆಂಬಲ ನೀಡುವುದಲ್ಲದೆ, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಮತ್ತು ವ್ಯವಹಾರದಲ್ಲಿಯೂ ಜಾಣತನ ಪ್ರದರ್ಶಿಸುತ್ತಾರೆ. ತಮ್ಮ ಭಾವನೆಗಳನ್ನು ಸುಲಭವಾಗಿ ಬಹಿರಂಗಪಡಿಸದ ಇವರು ಆಳವಾದ ಚಿಂತನಾಶಕ್ತಿಯನ್ನು ಹೊಂದಿರುತ್ತಾರೆ.
Kannada Numerology: ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮದಿನಾಂಕಗಳು ಅವರ ಭವಿಷ್ಯವನ್ನು ವಿಶ್ಲೇಷಣೆ ಮಾಡುತ್ತವೆ. ಜನ್ಮದಿನಾಂಕ ಅಥವಾ ಮೂಲಾಂಕದಿಂದ ವ್ಯಕ್ತಿಯ ಆಲೋಚನಾ ವಿಧಾನವನ್ನು ವಿಶ್ಲೇಷಣೆ ಮಾಡಬಹುದು. ಕೆಲವು ಮೂಲಾಂಕದ ಮಹಿಳೆಯರು ಇತರರಗಿಂತ ತುಂಬಾನೇ ವಿಭಿನ್ನವಾಗಿರುತ್ತಾರೆ. ಕೆಲವು ದಿನಾಂಕಗಳಂದು ಜನಿಸಿದ ಮಹಿಳೆಯರು ಮೇಲ್ನೋಟಕ್ಕೆ ಶಾಂತ ಸ್ವಭಾವದವರಾಗಿದ್ದು, ಆಳವಾಗಿ ಚಿಂತನಾಶಕ್ತಿಯನ್ನು ಹೊಂದಿರುತ್ತಾರೆ. ಈ ಮೂಲಾಂಕದವರು ನಿಜವಾದ ಪ್ರೀತಿಯನ್ನು ಎಂದಿಗೂ ಬಹಿರಂಗಪಡಿಸಲ್ಲ. ತಮ್ಮ ಭಾವನೆಗಳನ್ನು ಮನಸ್ಸಿನಲ್ಲಿಯೇ ಹಿಡಿದಿಟ್ಟುಕೊಂಡಿರುತ್ತಾರೆ.
25
ಗಂಡನ ಪ್ರತಿಯೊಂದು ಹೆಜ್ಜೆಗೂ ಸಾಥ್
ಸಂಖ್ಯಾಶಾಸ್ತ್ರದ ಪ್ರಕಾರ, ದಿನಾಂಕ 4, 13 ಮತ್ತು 22ರಂದು ಜನಿಸಿದ ಮಹಿಳೆಯರಿಗೆ ಗಂಡನೇ ಸರ್ವಸ್ವ. ತಮ್ಮ ಪ್ರೀತಿಯಲ್ಲಿ ಯಾವಾಗಲೂ ಸಂತೋಷವೇ ಇರಬೇಕೆಂದು ಬಯಸಲ್ಲ. ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಜೀವನದ ಪಾಠ ತಿಳಿದಿರುವ ಮಹಿಳೆಯರು ಎಂದಿಗೂ ಗಂಡನ ಮೇಲೆ ಒತ್ತಡ ಹಾಕಲ್ಲ. ಗಂಡನ ಪ್ರತಿಯೊಂದು ಹೆಜ್ಜೆಗೂ ಸಾಥ್ ನೀಡುವ ಗುಣವನ್ನು ಹೊಂದಿರುತ್ತಾರೆ.
35
ಮೂಲಾಂಕ 4
ಮೂಲಾಂಕ 4 ಹೊಂದಿರುವ ಮಹಿಳೆಯರು ಮೊದಲ ನೋಟದಲ್ಲಿಯೇ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲ್ಲ. ಪ್ರತಿಯೊಂದು ವಿಷಯವನ್ನು ಮೌಲ್ಯಮಾಪನ ಮತ್ತು ವಿಶ್ಲೇಷಣೆ ಮಾಡುತ್ತಾರೆ. ಆನಂತರವೇ ಆ ಪ್ರೀತಿಯನ್ನು ಅವರು ಒಪ್ಪಿಕೊಳ್ಳುತ್ತಾರೆ. ಸಂಗಾತಿಯಲ್ಲಿನ ಅನಗತ್ಯವಾದ ಮಾತು, ಡ್ರಾಮಾ ಮಾಡೋದನ್ನು ಮೂಲಾಂಕ 4 ಹೊಂದಿರುವ ಮಹಿಳೆಯರ ನಂಬಲ್ಲ. ಸಂಗಾತಿಯ ಸುಳ್ಳು ಸಿಹಿ ಮಾತುಗಳನ್ನು ಬೇಗನೇ ಪತ್ತೆ ಮಾಡುತ್ತಾರೆ.
ಮೂಲಾಂಕ 4 ಹೊಂದಿರುವ ಮಹಿಳೆಯರು ಒಮ್ಮೆ ಪ್ರೀತಿಯನ್ನು ಒಪ್ಪಿಕೊಂಡ್ರೆ ಅದನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನವನ್ನು ಮಾಡ್ತಾರೆ. ಸಂಗಾತಿಯೊಂದಿಗೆ ಮಾತ್ರ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಸಂಗಾತಿಗೆ ಎಲ್ಲಾ ಸಮಯದಲ್ಲಿಯೂ ಬೆಂಬಲವಾಗಿ ನಿಲ್ಲುತ್ತಾರೆ. ಕುಟುಂಬದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಶಾಂತಿ ನೆಲೆಸುವಂತೆ ಮಾಡುತ್ತಾರೆ. ಆಳವಾದ ಚಿಂತನೆ, ನಿಷ್ಠೆ ಮತ್ತು ಪ್ರೀತಿಯ ಬಗ್ಗೆ ಗಂಭೀರವಾದ ಆಲೋಚನೆಯನ್ನು ಹೊಂದಿರುತ್ತಾರೆ.
ರಾಹು ಕಲಿಸುವ ಪಾಠವೆಂದರೆ ಆರೋಗ್ಯಕರ ಬಂಧಗಳನ್ನು ನಿರ್ಮಿಸುವುದು. ಮೂಲಾಂಕ 4 ಹೊಂದಿರುವ ಜನರು ತಮ್ಮ ಅಪಾರ ಪ್ರೀತಿ ಮತ್ತು ಸ್ವ-ಆರೈಕೆಯನ್ನು ಸಮತೋಲನಗೊಳಿಸಲು ಶ್ರಮಿಸುತ್ತಿರುತ್ತಾರೆ. ಆಳವಾದ ಮತ್ತು ಸಮತೋಲನದ ನಿರ್ಧಾರದ ಮೂಲಕ ಕೆಲಸ ಮಾಡುವ ಸ್ಥಳಗಳಲ್ಲಿಯೂ ಎಲ್ಲರ ಗಮನ ಸೆಳೆಯುತ್ತಾರೆ. ಸ್ವಂತ ಉದ್ದಿಮೆಯಲ್ಲಿಯೂ ಬಂಡವಾಳ ಸಂಗ್ರಹಣೆಯ ಜಾಣ್ಮೆಯನ್ನು ಹೊಂದಿರುತ್ತಾರೆ.