ಧನು ರಾಶಿಯಲ್ಲಿ ಸ್ನೇಹಿತರ ಮಿಲನ, 4 ರಾಶಿಗಳಿಗೆ ಅದೃಷ್ಟದ ಹೊಳೆ, ಡಬಲ್ ಜಾಕ್‌ಪಾಟ್ ಗ್ಯಾರಂಟಿ!

Published : Oct 30, 2025, 08:46 PM IST

ಡಿಸೆಂಬರ್ ಅಂತ್ಯದಲ್ಲಿ ಧನು ರಾಶಿಯಲ್ಲಿ ಮಂಗಳ ಮತ್ತು ಶುಕ್ರ ಗ್ರಹಗಳ ಸಂಯೋಗ ನಡೆಯಲಿದೆ. ಈ ಮಂಗಳ-ಶುಕ್ರ ಯುತಿಯು 4 ರಾಶಿಯವರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿದೆ. ಈ ಸಂಯೋಗದಿಂದ ಈ ನಾಲ್ಕು ರಾಶಿಗಳಿಗೆ ಆರ್ಥಿಕ ಲಾಭ, ವೃತ್ತಿಯಲ್ಲಿ ಪ್ರಗತಿ ಮತ್ತು ಅದೃಷ್ಟದ ಬೆಂಬಲ ಸಿಗಲಿದೆ.

PREV
15
ಮಂಗಳ-ಶುಕ್ರ ಸಂಯೋಗ

ಜ್ಯೋತಿಷ್ಯದ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅನೇಕ ಪ್ರಮುಖ ಗ್ರಹಗಳ ಸಂಚಾರ ನಡೆಯಲಿದೆ. ಡಿಸೆಂಬರ್ ಆರಂಭದಲ್ಲಿ ಮಂಗಳ ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಡಿಸೆಂಬರ್ ಕೊನೆಯಲ್ಲಿ ಶುಕ್ರನೂ ಧನು ರಾಶಿಗೆ ಪ್ರವೇಶಿಸುತ್ತಾನೆ. ಇವರಿಬ್ಬರೂ ಧನು ರಾಶಿಯಲ್ಲಿ ಸಂಚರಿಸಲಿದ್ದಾರೆ. ಇದರಿಂದ ನಾಲ್ಕು ರಾಶಿಗಳ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಬರಲಿದೆ. ನಾಲ್ಕು ಅದೃಷ್ಟದ ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ

25
ಧನು ರಾಶಿ
  • ಧನು ರಾಶಿಯ ಮೊದಲ ಮನೆಯಾದ ಲಗ್ನ ಸ್ಥಾನದಲ್ಲಿ ಮಂಗಳ-ಶುಕ್ರ ಸಂಯೋಗ ನಡೆಯಲಿದೆ.
  • ಮಂಗಳ ಗ್ರಹವು ಧನು ರಾಶಿಯವರಿಗೆ ಧೈರ್ಯ ಮತ್ತು ಶೌರ್ಯವನ್ನು ನೀಡುತ್ತಾನೆ. ಇದರಿಂದ ಧನು ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ.
  • ಶುಕ್ರನನ್ನು ಅದೃಷ್ಟದ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರನಿಂದ ಧನು ರಾಶಿಯವರಿಗೆ ಸಂಪತ್ತು, ಐಷಾರಾಮಿ, ಚಿನ್ನ ಸೇರಿದಂತೆ ವಿಲಾಸಿಮಯ ಸೌಲಭ್ಯಗಳು ಸಿಗುತ್ತದೆ.
  • ಈ ಸಂಯೋಗದಿಂದ ಕೊಟ್ಟ ಸಾಲ ಹಿಂದಿರುಗಿ ಬರಲಿದೆ. ಬರಬೇಕಾಗಿರುವ ಹಣ ನಿಮ್ಮ ಜೇಬು ಸೇರಲಿದೆ.
  • ವಾಹನ ಖರೀದಿ ಭಾಗ್ಯ, ಹೂಡಿಕೆ ಮಾಡಲು ಸದಾವಕಾಶ, ಲಾಭ ಹೆಚ್ಚಿಸುವ ಒಪ್ಪಂದಗಳಿಗೆ ಸಹಿ
35
ಕುಂಭ ರಾಶಿ

ಕುಂಭ ರಾಶಿಯ 11ನೇ ಮನೆಯಲ್ಲಿ ಮಂಗಳ-ಶುಕ್ರ ಸಂಯೋಗ ನಡೆಯಲಿದೆ. ಕುಂಭ ರಾಶಿಗೆ 11ನೇ ಮನೆಯನ್ನು ಲಾಭ ಸ್ಥಾನ ಎಂದು ಪರಿಗಣಿಸಲಾಗುತ್ತದೆ.

  • ಈ ಸಂಯೋಗದಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
  • ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಬಡ್ತಿ ಆಗುತ್ತದೆ.
  • ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆ
  • ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಬೆಳವಣಿಗೆಯಾಗಿ, ಲಾಭ ಹೆಚ್ಚಾಗಲಿದೆ
  • ಈ ರಾಶಿಯವರಿಗೆ ವಿವಿಧ ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ.
45
ತುಲಾ ರಾಶಿ

ತುಲಾ ರಾಶಿಯ ಮೂರನೇ ಮನೆಯಲ್ಲಿ ಮಂಗಳ-ಶುಕ್ರ ಸಂಯೋಗ ನಡೆಯಲಿದೆ. ಮೂರನೇ ಮನೆಯನ್ನು ಧೈರ್ಯ ಸ್ಥಾನ ಎನ್ನಲಾಗುತ್ತದೆ.

  • ಈ ಸಂಯೋಗದಿಂದ ಆತ್ಮವಿಶ್ವಾಸ ಹೆಚ್ಚಳವಾಗಲಿದೆ
  • ಪ್ರಯಾಣದಿಂದ ಲಾಭ, ಸಂವಹನ ಕ್ಷೇತ್ರದಲ್ಲಿದ್ದವರಿಗೆ ಅನುಕೂಲಕರ ಸಮಯ
  • ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗಲಿದ್ದು, ಮದುವೆ ಯೋಗ ಬರಲಿದೆ
  • ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ

ಇದನ್ನೂ ಓದಿ: 2026ರಲ್ಲಿ ರಾಹು-ಕೇತು ಸಂಚಾರ, 18 ತಿಂಗಳು 3 ರಾಶಿಗೆ ಸುವರ್ಣಯುಗ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ!

55
ಮೇಷ ರಾಶಿ

ಮೇಷ ರಾಶಿಯ 9ನೇ ಮನೆಯಲ್ಲಿ ಮಂಗಳ-ಶುಕ್ರ ಸಂಯೋಗ ನಡೆಯಲಿದೆ. ಈ 9ನೇ ಮನೆ ಮೇಷ ರಾಶಿಗೆ ಭಾಗ್ಯ ಸ್ಥಾನ ಎಂದು ಕರೆಯಲಾಗುತ್ತದೆ. ಹಾಗಾಗಿ ಅದೃಷ್ಟ ದೇವತೆ ನಿಮ್ಮನ್ನು ಹುಡುಕಿಕೊಂಡ ಬರಲಿದೆ.

  • ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ
  • ಹೊಸ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿದೆ
  • ಎಲ್ಲಾ ಕೆಲಸಗಳಲ್ಲಿಯೂ ಜೀವನ ಸಂಗಾತಿಯಿಂದ ಬೆಂಬಲ ಸಿಗಲಿದೆ.
  • ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಹೆಚ್ಚಳವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: Lucky zodiac signs December 2025: ಗುರು ಮನೆಯಲ್ಲಿ ಶುಕ್ರನ ಪ್ರವೇಶ ಮೂಟೆಗಟ್ಟಲೆ ಹಣ ಗಳಿಸಲಿವೆ ಅದೃಷ್ಟದ 3 ರಾಶಿಗಳು

Read more Photos on
click me!

Recommended Stories