ಇಂದು ಸಂಜೆ ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಈ ಸಂಚಾರವು ಕೆಲವು ನಿರ್ದಿಷ್ಟ ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಈ ಬದಲಾವಣೆಯಿಂದಾಗಿ 5 ರಾಶಿಯವರಿಗೆ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಕೌಟುಂಬಿಕ ಜೀವನದಲ್ಲಿ ಶುಭ ಫಲಗಳು ಕಾದಿವೆ.
ಇಂದು ಸಂಜೆ 7 ಗಂಟೆ 24 ನಿಮಿಷಕ್ಕೆ ಬುಧ ಗ್ರಹ ಸೂರ್ಯನ ರಾಶಿಯಾದ ಸಿಂಹ ಪ್ರವೇಶ ಮಾಡಲಿದೆ. ಈ ಚಲನೆಯಿಂದ ಕೆಲವು ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಯಾವೆಲ್ಲಾ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ ಬನ್ನಿ.
26
ಮೇಷ ರಾಶಿ
ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಅಂದ್ರೆ ಸಂಬಳ ಏರಿಕೆ, ಆದಾಯದ ಮೂಲಗಳ ಸಂಖ್ಯೆ ಹೆಚ್ಚಳ
ಕೆಲಸ ಮಾಡುವ ಸ್ಥಳದಲ್ಲಿ ವಿಶೇಷ ಗೌರವ, ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಾಧ್ಯತೆ.
ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಮತ್ತು ಪ್ರಶಂಸೆ
ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ಮೊದಲ ಆದ್ಯತೆ
ವ್ಯಾಪಾರಿಗಳಿಗೆ ಹೊಸ ಒಪ್ಪಂದ ಮತ್ತು ಉದ್ಯಮದ ವಿಸ್ತರಣೆ
36
ಸಿಂಹ ರಾಶಿ
ಆತ್ಮವಿಶ್ವಾಸ ಹೆಚ್ಚಳ, ದೃಢ ನಿರ್ಧಾರ ಮೇಲಾಧಿಕಾರಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತೀರಿ
ನಿಮ್ಮ ನೇತೃತ್ವದಲ್ಲಿಯೇ ಪ್ರಮುಖವಾದ ಕೆಲಸಗಳು ನಡೆಯಲಿವೆ
ಉದ್ಯೋಗದಲ್ಲಿ ಬಡ್ತಿ ಜೊತೆ ಹೊಸ ಅವಕಾಶಗಳು ಸೃಷ್ಟಿ
ವ್ಯಾಪಾರಿಗಳಿಗೆ ಹೆಚ್ಚಿನ ಗ್ರಾಹಕರಿಂದು ನಿರೀಕ್ಷಿತಕ್ಕಿಂತ ಅಧಿಕ ಆದಾಯ
ದೀರ್ಘಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳಿಗೆ ಪುನಃ ಚಾಲನೆ ಸಿಗಲಿದೆ
ದೊಡ್ಡಮಟ್ಟದ ಲಾಭ ನೀಡುವ ಯೋಜನೆಗಳ ಜೊತೆ ಒಪ್ಪಂದ ಸಾಧ್ಯತೆ
ಉದ್ಯೋಗಿಗಳಿಗೆ ಹೊಸ ಅವಕಾಶಗಳು ಬರಲಿವೆ
ಮೇಲಾಧಿಕಾರಿಗಳಿಂದ ಮೆಚ್ಚುಗೆ ಮತ್ತು ಭವಿಷ್ಯದಲ್ಲಿ ಲಾಭ ಸಿಗುವ ಕೆಲಸ
56
ಧನು ರಾಶಿ
ಶಿಕ್ಷಣ, ಮಾಧ್ಯಮ, ಕಲೆ ಸೇರಿದಂತೆ ರಚನಾತ್ಮಕ ವಿಭಾಗಗಳಲ್ಲಿ ಕೆಲಸ ಮಾಡೋರಿಗೆ ಅದೃಷ್ಟ
ವೃತ್ತಿ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ
ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ
ಹೆಚ್ಚುವರಿ ಜವಾಬ್ದಾರಿ, ಕುಟುಂಬದಲ್ಲಿ ನೆಮ್ಮದಿ
66
ಮಿಥುನ ರಾಶಿ
ಬುದ್ಧಿವಂತಿಕೆ, ಸಂವಹನ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ
ನಿಮ್ಮ ಅಭಿಪ್ರಾಯಗಳು ಪರಿಣಾಮಕಾರಿಯಾಗಿ ಪ್ರಭಾವ ಬೀರಲಿವೆ
ವೃತ್ತಿಜೀವನದಲ್ಲಿ ಮಹತ್ವದ ಬೆಳವಣಿಗೆ, ಮೇಲಧಿಕಾರಿಗಳಿಂದ ಬೆಂಬಲ
ನಿಮ್ಮ ದಕ್ಷತೆಗೆ ಹೊಸ ಮತ್ತು ಹೆಚ್ಚು ಜವಾಬ್ದಾರಿ ಸಿಗಲಿದೆ.
ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.