ವೇದ ಜ್ಯೋತಿಷ್ಯದಲ್ಲಿ ಗ್ರಹಗಳ ದೃಷ್ಟಿ ಮತ್ತು ಸಂಯೋಗಕ್ಕೆ ಹೆಚ್ಚಿನ ಮಹತ್ವವಿದೆ. ಇದೇ ಜುಲೈ 29 ರಂದು, ಗುರು ಪೂರ್ಣಿಮೆಯ ವಿಶೇಷ ದಿನದಂದು, ಶುಕ್ರ ಮತ್ತು ಮಂಗಳ ಗ್ರಹಗಳು ಪರಸ್ಪರ 90 ಡಿಗ್ರಿ ಕೋನದಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಲಿದೆ. ಈ ಸಂಯೋಗವನ್ನೇ 'ಕೇಂದ್ರ ದೃಷ್ಟಿ ಯೋಗ' ಎಂದು ಕರೆಯಲಾಗುತ್ತದೆ.
ಸುಖ, ಸಂಪತ್ತು, ಪ್ರೀತಿ ಮತ್ತು ಐಷಾರಾಮಿ ಜೀವನಕ್ಕೆ ಶುಕ್ರ ಕಾರಣನಾದರೆ, ಧೈರ್ಯ, ಕಾರ್ಯಕ್ಷಮತೆ ಮತ್ತು ಯಶಸ್ಸಿಗೆ ಮಂಗಳ ಕಾರಣ. ಈ ಎರಡೂ ಗ್ರಹಗಳು ರೂಪಿಸುವ ಯೋಗವು ಕೆಲವು ರಾಶಿಯವರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. 4 ರಾಶಿಗಳ ಜೀವನದಲ್ಲಿ ವೃತ್ತಿ, ಆದಾಯ, ಕುಟುಂಬ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.