ದೇಶದ ಮೊದಲ ಕೊರೋನಾ ಸಾವಿನ ಊರಲ್ಲಿ ನಡೆದ ಜಾತ್ರೆ! ಫೋಟೋ ನೋಡಿ
First Published | Mar 15, 2020, 12:45 PM ISTದೇಶದ ಮೊದಲ ಕೊರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ವರದಿಯಾಗಿದೆ. ಕೊರೋನಾ ಭೀತಿಯಿಂದ ಇಡೀ ಕರ್ನಾಟಕ ರಾಜ್ಯವೇ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕರ್ನಾಟಕದಲ್ಲಿ ಬಂದ್ ಮಾಡಲಾಗಿದೆ. ಜಾತ್ರೆಗಳು, ದೇವಾಲಯಗಳಲ್ಲಿನ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕವು ಮಾರಣಾಂತಿಕ ಕೊರೋನ ವೈರಸ್ ಹರಡದಂತೆ ಹೋರಾಡುತ್ತಿರುವಾಗ, ಕಲಬುರಗಿಯ ಜನರು ದೇವಾಲಯದ ಸಮಾರಂಭ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.