ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ತುಮಕೂರು ನಗರದಿಂದ 16 ಕಿ.ಮೀ. ದೂರದಲ್ಲಿರುವ ಅರೆಯೂರು ಗ್ರಾಮದಲ್ಲಿದೆ.
undefined
ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಶಿವಾಲಯ ಇದು.
undefined
ಇಲ್ಲಿನ ಜ್ಯೋತಿರ್ಲಿಂಗ ನಂಬಿದ ಭಕ್ತರ ಇಷ್ಟಾರ್ಥಗಳು ಈಡೇರಿಸುತ್ತದೆ ಎಂಬುದು ಈ ಕ್ಷೇತ್ರದ ಮಹಿಮೆ.
undefined
ಇಲ್ಲಿ ಜ್ಯೋತಿರ್ಲಿಂಗ ಕಾಸ್ಮಿಕ್ ಪವರ್‌ನ್ನು ಹೊಂದಿದೆ ಎಂಬ ನಂಬಿಕೆ ಇದೆ.
undefined
ಜ್ಯೋತಿರ್ಲಿಂಗದ ಕಾಸ್ಮಿಕ್ ಪವರ್ ರೋಗಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಮಾಡಿ ಕಾಯಿಲೆ ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.
undefined
ಹಿಂದಿನ ಕಾಲದಲ್ಲಿ, ಕಾಯಿಲೆಯಿಂದ ನರಳುತ್ತಿದ ಜನರು ದೇವಸ್ಥಾನದ ಆವರಣದಲ್ಲಿ ಹಲವು ದಿನ ನೆಲೆಸಿ ರೋಗಗಳನ್ನು ಗುಣಪಡಿಸಿಕೊಳ್ಳುತ್ತಿದ್ದರಂತೆ.
undefined
ಇಲ್ಲಿನ ದೇವರು ಮರಣಾಂತಿಕ ರೋಗಗಳನ್ನು ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡದ ವೈಫಲ್ಯ ಶಸ್ತ್ರಚಿಕಿತ್ಸೆಯಿಲ್ಲದೆಯೇ ಗುಣಪಡಿಸುತ್ತಾರೆ ಎನ್ನುವ ನಂಬಿಕೆ ಇದೆ.
undefined
ಈಗ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿರುವ ಸ್ಥಳದಲ್ಲಿ ದೈವಿಕ ಔಷಧೀಯ ಮರವೊಂದು ಇತ್ತು. ಆ ಮರದ ಎಲೆಗಳಿಂದ ಔಷಧಿಗಳನ್ನು ತಯಾರಿಸಿ ಸಂತರು ತಮ್ಮ ಬಳಿಗೆ ಬರುವ ರೋಗಿಗಳನ್ನು ಗುಣಪಡಿಸುತ್ತಿದ್ದರಂತೆ.
undefined
ರೋಗಗಳನ್ನು ಗುಣಪಡಿಸುವ ದೇವರು ವೈದ್ಯನಾಥನ ದರ್ಶನ ಪಡೆಯಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ರೋಗಿಗಳು ಆಗಮಿಸುತ್ತಾರೆ.
undefined
ದೇವಾಲಯದ ಆವರಣದಲ್ಲಿ ವಾಸವಿರುವ ದೈವಿಕ ಹಾವು ಶ್ರೀ ಕ್ಷೇತ್ರವನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.
undefined