ಕಾಯಿಲೆ ಗುಣಪಡಿಸಿ, ಇಷ್ತಾರ್ಥ ಪೂರೈಸುವ ಖ್ಯಾತಿ ಹೊಂದಿರುವ ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟಮನೂರ್ ಮಹಾದೇವ ದೇವಸ್ಥಾನ.
ಈ ಸ್ಥಳದ ಹೆಸರಿನ ಮೂಲ 'ಮನೂರ್' ಎಂದರೆ. ಇದರರ್ಥ ಜಿಂಕೆಗಳ ಮನೆ.
ಪುರಾಣಗಳ ಪ್ರಕಾರ, ಖರಾ ಎಂಬ ಅಸುರನು ಶಿವನಿಂದ ಮೂರು ಶಿವಲಿಂಗಗಳನ್ನು ಪಡೆದು ಕೇರಳಕ್ಕೆ ತಂದನು, ಒಂದು ಹಲ್ಲುಗಳಿಂದ ಇನ್ನೆರಡು ಎಡ ಮತ್ತು ಬಲಗೈಯಲ್ಲಿ ಹಿಡಿದುಕೊಂಡಿದ್ದನು.
ಅವನು ಎಡಗೈಯಲ್ಲಿ ಹಿಡಿದಿದ್ದ ಲಿಂಗವನ್ನು ಎಟ್ಟಮನೂರ್‌ನಲ್ಲಿ ಸ್ಥಾಪಿಸಿದನು. ನಂತರ, ಖರಾ ಜಿಂಕೆ ಆಗಿ ಮಾರ್ಪಟ್ಟು ಈ ಸ್ಥಳದಲ್ಲಿ ದೇವರ ಸೇವೆಯಲ್ಲಿ ತೊಡಗಿಸಿಕೊಂಡನು.
ಎಟ್ಟಮನೂರ್‌ನಲ್ಲಿರುವ ದೇವರು ಜಿಂಕೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅಲ್ಲಿ ಹಿಡಿದಿಟ್ಟುಕೊಂಡಿದ್ದಾನೆ ಎಂದು ನಂಬಲಾಗಿದೆ, ಅದರಿಂದ ಈ ಸ್ಥಳಕ್ಕೆ ಎಟ್ಟಮನೂರ್ (ಜಿಂಕೆ ಎತ್ತಿದ ಸ್ಥಳ) ಎಂದು ಹೆಸರು.
ಮಹಾನ್ ತತ್ವಜ್ಞಾನಿ ಶಂಕರಾಚಾರ್ಯರು ಈ ದೇವಾಲಯದಲ್ಲಿ ಉಳಿದುಕೊಂಡು 'ಸೌಂದರ್ಯ ಲಹರಿ' ಬರೆದಿದ್ದಾರೆ ಎಂದು ಹೇಳಲಾಗುತ್ತದೆ.
ಈ ದೇವಾಲಯದ ಪ್ರಮುಖ ಪೂಜೆ ಎಂದರೆ ದೀಪ. ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ ಸದಾ ಪ್ರಜ್ವಲಿಸುವ, ದೊಡ್ಡ ದೀಪವನ್ನು ಕಾಣಬಹುದು.
ಇಲ್ಲಿ ಪೂಜಿಸಿದರೆ, ಹರಕೆ ಹೊತ್ತರೆ ಹಲವು ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆಯೂ ಇದೆ.
ಭಕ್ತರು ಅಕ್ಕಿ ಅಥವಾ ಬೇರೆ ವಸ್ತುಗಳ ತುಲಾಭರಂವನ್ನು ಅಗೋಮಮೂರ್ತಿ ಶಿವನಿಗೆ ಅರ್ಪಿಸುತ್ತಾರೆ.
ದೈತ್ಯ ಕಂಚಿನ ಬಸವನ ಹೊಟ್ಟೆಯಿಂದ ತೆಗೆದ ಕೆಲವು ಕೆಂಪು ಅಕ್ಕಿ ಧಾನ್ಯಗಳನ್ನು ತಿಂದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತದೆ ಎಂಬ ಪ್ರತೀತಿ ಇದೆ.