ರವಿಯು ವೃಷಭ ಮಿಥುನ ಸಂಚಾರವಿದ್ದು, ಜೂನ್ 13ರಿಂದ ಜುಲೈ 14ರವರೆಗೆ ಅಸ್ತನಾಗುವ ಲೋಕದಲ್ಲಿ ಗುರುಬಲವಿರದು. ರಾಹು-ಕೇತು ಇಷ್ಟ ರಾಶಿಗಳಲ್ಲಿ ಕುಂಭ ಸಿಂಹ ಸಂಚಾರವಿದ್ದು, ಕುಜನು ಸಿಂಹಚಾರ, ಕುಜ ಕೇತು ಯುತಿ ರಾಹು ಶನಿಯನ್ನು ದೃಷ್ಟಿಸುವುದು, ಗುರು ಅಶ್ತನೂ ಇರುವ ದೋಷಗಳ ತಿಂಗಳು, ಗಾಳಿ, ಅಗ್ನಿ, ಸಿಡಿಲು, ತೀವ್ರವಾಗುವುದು, ಭೂಕುಸಿತ ದೋಷಗಳಿವೆ. ಯುದ್ಧ ದಾಹ ಮತ್ತೆ ಸಿಡಿಯುವುದು, ಶತ್ರುವೃದ್ಧಿ, ಮೋಸ, ಸುಳ್ಳು ಡಾಂಭಿಕ ನೇತಾರರಿಂದ ತೆರೆಮರೆಯ ಯುದ್ಧ ಜಗಳ ಹಚ್ಚುವುದಾದೀತು. ಸಾಮಾನ್ಯ ಜನರ ಮಾನಸಿಕತೆ ಗೊಂದಲದಲ್ಲಿ ಇದ್ದು ನಿಂತ ನೀರಂತೆ ಆಗುವುದು. ಶ್ರೀವನ ದುರ್ಗೆ, ಮಹಾದೇವನ ಸೇವೆಗಳಿಂದ ಭೀತಿ ಪರಿಹಾರ.