ಏಕಾದಶಿಯಂದು ಅನ್ನವನ್ನೇಕೆ ತಿನ್ನಬಾರದು? ಇದರ ಹಿಂದಿನ ನಿಜವಾದ ಕಾರಣ ತಿಳಿಯಿರಿ

First Published Aug 26, 2021, 7:54 PM IST

ಪ್ರತಿ ತಿಂಗಳು ಎರಡು ಬಾರಿ ಬರುವ ಏಕಾದಶಿಯಂದು ಹೆಚ್ಚಿನ ಜನರು ವೃತ ಮಾಡುತ್ತಾರೆ. ಆ ದಿನ ವಿಷ್ಣು ಪೂಜೆ  ವ್ರತ ಮಾಡುವ ಮೂಲಕ ಅನ್ನ ತಿನ್ನುವುದಿಲ್ಲ. ಇದನ್ನು ಮಾಡದಿರುವುದರ ಹಿಂದೆ ಒಂದು ದೊಡ್ಡ ಕಾರಣವನ್ನು ಧಾರ್ಮಿಕ ಗ್ರಂಥಗಳಲ್ಲಿ ನೀಡಲಾಗಿದೆ. ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.

ತಿಂಗಳಲ್ಲಿ ಎರಡು ದಿನ ಏಕಾದಶಿ ಬರುತ್ತದೆ. ಈ ದಿನವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದಿನ ಭಕ್ತರು ಭಗವಾನ್ ವಿಷ್ಣುವನ್ನು ಶ್ರದ್ಧೆ ವಿಧಿ - ವಿಧಾನದಿಂದ ಪೂಜಿಸುತ್ತಾರೆ.ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು. ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನೂ ಸೇವಿಸದೇ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ.

ಏಕಾದಶಿಯ ದಿನದಂದು ವಿಷ್ಣುವನ್ನು ಧ್ಯಾನಿಸಬೇಕು. ಈ ದಿನ, ಉಪವಾಸ, ಪಠಣ, ತಪಸ್ಸು ಮತ್ತು ದಾನದಿಂದ ಒಬ್ಬರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕಾದಶಿಯಂದು ಸಾತ್ವಿಕ ಆಹಾರ ಸೇವಿಸಬೇಕು ಮತ್ತು ಅನ್ನವನ್ನು ತಿನ್ನಬಾರದು. ಈ ದಿನ ಅನ್ನವನ್ನು ತಿನ್ನದಿರಲು ಕಾರಣವೇನು? ಇಂದು ನಾವು ಇದನ್ನು ನಿಮಗೆ ಹೇಳುತ್ತೇವೆ.

ಮಹರ್ಷಿಯು ದೇಹವನ್ನು ತ್ಯಜಿಸಿದನು
ದಂತಕಥೆ ಪ್ರಕಾರ, ಮಹರ್ಷಿ ಮೇಧಾ ಶಕ್ತಿಮಾತೆಯ ಕೋಪದಿಂದ ತಪ್ಪಿಸಿಕೊಳ್ಳಲು ತನ್ನ ದೇಹವನ್ನು ತೊರೆದರು. ಇದರ ನಂತರ ಅವನ ದೇಹದ ಭಾಗಗಳು ಭೂಮಿಯಲ್ಲಿ ಹೀರಲ್ಪಟ್ಟವು. ಈ ಘಟನೆ ನಡೆದ ದಿನ, ಆ ದಿನ ಏಕಾದಶಿ ತಿಥಿ. ಮಹರ್ಷಿ ಮೇಧರು ಬಾರ್ಲಿ ಮತ್ತು ಅನ್ನದ ರೂಪದಲ್ಲಿ ಜನಿಸಿದರೆಂದು ನಂಬಲಾಗಿದೆ. ಭಕ್ತರು ಅನ್ನ ಮತ್ತು ಬಾರ್ಲಿಯನ್ನು ಜೀವಿಗಳೆಂದು ಪರಿಗಣಿಸಲು ಇದೇ ಕಾರಣ.

ಏಕಾದಶಿಯಂದು ಅನ್ನ ತಿನ್ನುವುದು ಸರಿಯಲ್ಲ.
ಏಕಾದಶಿಯ ದಿನ ಅನ್ನ ತಿನ್ನುವುದು ಮಹರ್ಷಿ ಮೇಧರ ಮಾಂಸ ಮತ್ತು ರಕ್ತ ಸೇವನೆಗೆ ಸಮಾನವೆಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಏಕಾದಶಿಯ ದಿನ ಅನ್ನ ತಿನ್ನುವುದು ತೆವಳುತ್ತಿರುವ ಜೀವಿಗಳಿಗೆ ಜನ್ಮ ನೀಡುವಂತೆ ಮಾಡುತ್ತದೆ. ಅದಕ್ಕಾಗಿಯೇ ಜನರು ಈ ದಿನ ಅನ್ನ ತಿನ್ನುವುದರಿಂದ ದೂರವಿರುತ್ತಾರೆ.

ಚಂದ್ರನು ಮನಸ್ಸಿನ ಅಂಶ
ವೈಜ್ಞಾನಿಕ ಸಂಗತಿಗಳ ಪ್ರಕಾರ, ಚಂದ್ರ ಮನಸ್ಸಿನ ಮೇಲ್ ಪ್ರಭಾವ ಬೀರುವ ಗ್ರಹ. ಇದು ನೀರಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅನ್ನದಲ್ಲಿ ಬಹಳಷ್ಟು ನೀರು ಇರುತ್ತದೆ. ಆದ್ದರಿಂದ, ಅದರ ಸೇವನೆಯಿಂದ, ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಪ್ರಕ್ಷುಬ್ಧ ಮನಸ್ಸಿನಿಂದಾಗಿ, ಉಪವಾಸದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ, ಏಕಾದಶಿಯಂದು ಅನ್ನ ತಪ್ಪಿಸಲು ಒತ್ತು ನೀಡಲಾಗಿದೆ.

ಜಾಗರಣೆ ಮಾಡಿ
ಕಾಮಿಕ ಏಕಾದಶಿ ವ್ರತದ ಉಪವಾಸವನ್ನು ಆಚರಣೆ ಮಾಡುವವರು ಈ ದಿನ ರಾತ್ರಿ ಜಾಗರಣೆ ಮಾಡಬೇಕು. ಮತ್ತು ಭಗವಾನ್ ವಿಷ್ಣುವನ್ನು ಸ್ಮರಿಸಬೇಕು. ರಾತ್ರಿ ಪೂರ್ತಿ ವಿಷ್ಣುವಿನ ಭಜನೆ, ಕೀರ್ತನೆ ಹಾಡಿದರೆ, ಅದರಿಂದ ಸದ್ಗತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ವ್ರತದ ನಂತರ ಬಡವರಿಗೆ ದಾನ ನೀಡುವುದು ಸಹ ತುಂಬಾ ಮುಖ್ಯವಾಗಿದೆ. 

ಏಕಾದಶಿಯಂದು ಉಪವಾಸ ಮಾಡದವರು ಸಾತ್ವಿಕ ಆಹಾರ ಸೇವಿಸಬೇಕು ಸಾತ್ವಿಕ ಆಹಾರ ಎಂದರೆ ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ, ಮಾಂಸ ಸೇವನೆ ಮಾಡದಿರುವುದು. ಈ ದಿನ ಹಣ್ಣುಗಳನ್ನು ತಿನ್ನಬಹುದು. ಉಪವಾಸ ಮುರಿಯಬೇಕಾದರೆ ಸೂರ್ಯಾಸ್ತಮಾನದ ಬಳಿಕ ಬಿಡಬಹುದು. ಸಂಜೆ ಪಾರಾಯಣ ಮಾಡಿ ನಂತರ ಉಪವಾಸ ಬಿಡಬೇಕು. 
 

click me!