ಸರಳವೋ ಅದ್ದೂರಿಯೋ ಪ್ರತಿಯೊಬ್ಬರಿಗೂ ತಮ್ಮ ಮದುವೆ ಬಗ್ಗೆ ಕನಸಂತೂ ಇದ್ದೇ ಇರುತ್ತದೆ. ಆದರೆ ಈ ರಾಶಿಯವರು ತಮ್ಮ ವಿವಾಹ ವಿಜೃಂಭಣೆಯಿಂದ ಆಗಬೇಕು ಎಂದು ಬಯಸುತ್ತಾರೆಯಂತೆ. ಅದಕ್ಕಾಗಿ ಸರ್ವ ಪ್ರಯತ್ನವನ್ನೂ ಮಾಡುತ್ತಾರೆ. ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು?ಎಂದೆಲ್ಲಾ ಯೋಚನೆ ಮಾಡಿಟ್ಟಿರುತ್ತಾರೆ. ಅಂತಹ ರಾಶಿಗಳು ಯಾವವು ನೋಡೋಣಾ...
ಮೇಷ :
ಈ ರಾಶಿಚಕ್ರದ ಜನರು ಗ್ಲಾಮರ್ ಪ್ರಿಯರು. ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಬಯಸುತ್ತಾರೆ. ಅಲ್ಲದೆ, ಹನಿಮೂನ್‌ಗೆ ಸಂಬಂಧಿಸಿದಂತೆ ಕೂಡಾ ಅವರ ಯೋಜನೆಗಳು ಬಹಳ ದೊಡ್ಡದಾಗಿರುತ್ತದೆ. ದೂರದ ಊರಿನಲ್ಲಿ ಮದುವೆ ಅಥವಾ ಹನಿಮೂನ್ ಮಾಡುವ ಯೋಜನೆ ಮಾಡಿಕೊಂಡಿರುತ್ತಾರೆ.
ತುಲಾ :
ಈ ರಾಶಿಯ ಜನರು ಕೂಡಾ ಅದ್ದೂರಿ ವಿವಾಹದಲ್ಲಿಯೇ ನಂಬಿಕೆಯುಳ್ಳವರು. ಇವರು ಅದ್ದೂರಿ ಮದುವೆಯ ಕನಸು ಕಾಣುವುದಲ್ಲದೆ, ಅದರ ಸಿದ್ಧತೆಗಾಗಿ ಬಹಳ ಯೋಜನೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇವರು ತಮ್ಮ ಮದುವೆಯಲ್ಲಿ ವಿಂಟೇಜ್ ಮತ್ತು ಕ್ಲಾಸಿ ಲುಕ್ ಇಷ್ಟಪಡುತ್ತಾರೆ.
ಧನು ರಾಶಿ :
ಈ ರಾಶಿಚಕ್ರದ ಜನರು ತಮ್ಮ ಮದುವೆ ಮತ್ತು ಜೀವನ ಸಂಗಾತಿ ಬಗ್ಗೆ ಬಹಳ ಅದೃಷ್ಟವತರಾಗಿರುತ್ತಾರೆ. ಅವರ ಕನಸಿನಂತೆಯೇ ಅವರ ವಿವಾಹ ವಿಜೃಂಭಣೆಯಿಂದ ನೆರವೇರುತ್ತದೆ. ತಮ್ಮ ನೆಚ್ಚಿನ ಸ್ಥಳದಲ್ಲಿ ಮದುವೆಯಾಗಲು ಹಣವನ್ನು ನೀರಿನಂತೆ ಖರ್ಚು ಮಾಡುವುದಕ್ಕೂ ಮುಂದೆ ಹಿಂದೆ ನೋಡುವುದಿಲ್ಲ.
ಕುಂಭ ರಾಶಿ:
ಈ ರಾಶಿ ಚಕ್ರದ ಜನರು ಪ್ರತಿ ವಿಷಯದಲ್ಲೂ ರಾಯಲ್ ಶೈಲಿಯನ್ನು ಇಷ್ಟಪಡುತ್ತಾರೆ. ಮದುವೆ ವಿಷಯಕ್ಕೆ ಬಂದರೂ ಅವರ ಮೊದಲ ಆಯ್ಕೆ ಇದೇ ಆಗಿರುತ್ತದೆ. ಅದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲು ಸಿದ್ಧರಾಗಿರುತ್ತಾರೆ.
ಮೀನ ರಾಶಿ:
ಈ ರಾಶಿಯವರು ಮದುವೆ ಸಾಂಪ್ರದಾಯಿಕ ಶೈಲಿಯಲ್ಲಿಯೇ ನಡೆಯಬೇಕು ಎಂದು ಬಯಸುತ್ತಾರೆ. ಆದರೆ ಮದುವೆಯ ದಿನದ ಉಡುಗೆ, ಆಭರಣ, ಅಲಂಕಾರಗಳಲ್ಲಿ ಮಾತ್ರ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲವು ಉತ್ತಮ, ದಿ ಬೆಸ್ಟ್ ಆಗಿರಬೇಕು ಎಂದು ಅವರು ಬಯಸುತ್ತಾರೆ,