ಮಾನಸಿಕ ಶಾಂತಿ, ನೆಮ್ಮದಿಗಾಗಿ ಈ ಪರಿಹಾರ ಪ್ರಯತ್ನಿಸಿ

First Published Aug 24, 2021, 5:51 PM IST

ಅನೇಕ ಬಾರಿ ಏನನ್ನಾದರೂ ಮಾಡಲು ಹೋದಾಗ ತುಂಬಾ ವಿಚಿತ್ರವಾದ ಏನೋ ಒಂದು ರೀತಿಯ ಅಡೆತಡೆಗಳನ್ನು ಅನುಭವಿಸುತ್ತೀರಿ. ಮನಸ್ಸಿನಲ್ಲಿನ ತಳಮಳ, ಸಂಕಟವನ್ನು ಹೊರ ಹಾಕಲು ಪ್ರಯತ್ನಿಸುತ್ತಾರೆ. ಸಮಸ್ಯೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಮತ್ತು ಮಾನಸಿಕ ತೃಪ್ತಿಯನ್ನು ಬಯಸಲು ನೀವು ಬಯಸಿದರೆ, ಕೆಲವೊಂದು ಸೂತ್ರ ಅನುಸರಿಸಿ. 

ಸಂವಹನವು ಮನುಷ್ಯನನ್ನು ಹೊಂದಿಕೊಳ್ಳುವ ಮತ್ತು ಉಲ್ಲಾಸದಾಯಕವಾಗಿಸುತ್ತದೆ. ಆದರೆ ಸಣ್ಣ ಮಾತುಕತೆಗಳಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದರೆ, ಈ ಕೆಲವು ಪರಿಹಾರಗಳನ್ನು ಪ್ರಯತ್ನಿಸಿ- ಇದರಿಂದ ಮಾನಸಿಕ ನೆಮ್ಮದಿ ಸಿಗೋದ್ರಲ್ಲಿ ಸಂಶಯವಿಲ್ಲ. 

ಸೂರ್ಯನ ಬಿಸಿಲಿನಲ್ಲಿ ಹೊರಗೆ ಹೋಗುವಾಗ ನಿಮಗೆ ಆತಂಕವಾದರೆ, ಹೊರಗೆ ಹೋಗುವ ಮೊದಲು ಸ್ವಲ್ಪ ಕಲ್ಲಂಗಡಿ ರಸದೊಂದಿಗೆ ಸ್ವಲ್ಪ 'ಕಲ್ಲುಸಕ್ಕರೆ' ಸೇವಿಸಿ (ಅಥವಾ ಸುಮಾರು 100 ಗ್ರಾಂ ಕಲ್ಲಂಗಡಿ ತಿನ್ನಿ ಮತ್ತು ಸ್ವಲ್ಪ ಮಿಶ್ರಿಯನ್ನು ಅಗಿಯಿರಿ). ಸೂರ್ಯನ ಬಿಸಿಲಿನಿಂದ ಉಂಟಾಗುವ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. 

ನಿರಂತರವಾಗಿ ಕನಸಿನಲ್ಲಿ ಸಾಯುವುದನ್ನು ನೋಡಿದರೆ, ಪ್ರತಿದಿನ 11 ದಿನಗಳ ಕಾಲ ದಿನಕ್ಕೆ 108 ಬಾರಿ ಮಹಾಮೃತ್ಯುಂಜಯ ಮಂತ್ರ ಪಠಿಸಿ. ಅದು ಮನಸ್ಸನ್ನು ಶಾಂತಗೊಳಿಸುತ್ತದೆ, ಜೊತೆಗೆ ಸಾಧ್ಯವಾದಷ್ಟು ಮಲಗುವ ಮುನ್ನ ದೇವರನ್ನು ಧ್ಯಾನ ಮಾಡಿ ಮಲಗಿ. ಇದರಿಂದ ಯಾವುದೇ ಚಿಂತೆ ಇಲ್ಲದೆ ನಿದ್ರೆ ಮಾಡಲು ಸಾಧ್ಯವಾಗುತ್ತದೆ. 

ಎಂದಾದರೂ ಅಳಲು ಬಯಸಿದರೆ, ಆಗ ಕಣ್ಣೀರನ್ನು ನಿಗ್ರಹಿಸಲು ಪ್ರಯತ್ನಿಸಬೇಡಿ. ಇದು ನಿಮ್ಮ ಆಲೋಚನೆಗಳು ಮಸುಕಾಗಲು ಕಾರಣವಾಗುತ್ತದೆ ಮತ್ತು ಒಂದು ರೀತಿಯ ದೈಹಿಕ ನೋವು ಅಥವಾ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಮಗೆ ಸಾಧ್ಯವಾದಷ್ಟು ಕಣ್ಣೀರು ಹಾಕಿ. ಅತ್ತ  ನಂತರ ನೀವು ಬಲಶಾಲಿ ಮತ್ತು ಫಿಟ್ ಆಗುತ್ತೀರಿ.
 

ಹಠಾತ್ ಮನಸ್ಥಿತಿಯ ಬದಲಾವಣೆ ಎದುರಿಸುತ್ತಿದ್ದರೆ, ಏನೂ ಇಲ್ಲದೆ ಬೇಸರವಾಗುತ್ತಿದ್ದರೆ ಬುಧವಾರ ದೇವಾಲಯಗಳಿಗೆ ಮೊಸರನ್ನು ದಾನ ಮಾಡಿ. ಸಮಸ್ಯೆ ನಿಧಾನವಾಗಿ ಹೋಗುತ್ತದೆ. ಜೊತೆಗೆ ಮಾನಸಿಕ ನೆಮ್ಮದಿಯೂ ಸಿಗುತ್ತದೆ ಎಂಬುದು ನಿಜ,

ಹೆಚ್ಚು ತಲೆನೋವಿನಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಸೂರ್ಯನನ್ನು ವೀಕ್ಷಿಸಿ ಮತ್ತು ತಲೆನೋವು ಸುಧಾರಿಸಲು ಸೂರ್ಯನ ಮುಂದೆ 'ಮಾಂಡುಕ್-ಅಸನ' ಜೊತೆಗೆ ಪ್ರಾಣಯಾಮ ಮಾಡಿ. ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಸಿಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ತಲೆನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. 
 

click me!