ಶ್ರೀಮಂತರಾಗಲು ಬಯಸಿದರೆ, ಚಾಣಕ್ಯ ತಿಳಿಸಿದ ಈ 5 ವಿಷಯಗಳನ್ನು ನೀವು ತಿಳಿದಿರಬೇಕು

First Published | Nov 1, 2021, 6:25 PM IST

ಶ್ರೀಮಂತನಾಗಿರುವುದು ಜೀವನದ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ. ಹಣವಿಲ್ಲದಿದ್ದರೆ, ಒಬ್ಬನು ಭೌತಿಕ ಸೌಕರ್ಯಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ, ಅಥವಾ ಅವನು ತನ್ನ ಕುಟುಂಬಕ್ಕೆ ಉತ್ತಮ ಶಿಕ್ಷಣ ಮತ್ತು ಆರೋಗ್ಯವನ್ನು (good education and health) ಒದಗಿಸಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಹಣವನ್ನು ನಿಭಾಯಿಸಲು ಸಾಧ್ಯವಾಗದಿರುವುದು ಸಹ ದೊಡ್ಡ ಸಮಸ್ಯೆಯಾಗುತ್ತದೆ . 

ಜೀವನದಲ್ಲಿ ಹಲವಾರು ಬಾರಿ ಈ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ಒಬ್ಬರು ವಿವಿಧ ತೊಂದರೆಗಳಿಗೆ ಸಿಲುಕುತ್ತಾರೆ. ಶ್ರೀಮಂತರಾಗಿರಲು ಮತ್ತು ಸಂತೋಷದ ಜೀವನವನ್ನು (happy life) ನಡೆಸಲು ಬಯಸಿದರೆ, ಆಚಾರ್ಯ ಚಾಣಕ್ಯರ ಈ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 

ಸ್ವಲ್ಪ ಹಣವನ್ನು ಉಳಿಸಿ (save money)
ನೀವು ಎಷ್ಟೇ ಶ್ರೀಮಂತರಾಗಿದ್ದರೂ, ಕೆಟ್ಟ ಸಮಯಕ್ಕಾಗಿ ಹಣವನ್ನು ಉಳಿಸಲು ಮರೆಯದಿರಿ. ಏಕೆಂದರೆ ಕೆಟ್ಟ ಸಮಯ ಮತ್ತು ಅನಾರೋಗ್ಯವೂ ಯಾವುದೇ ಸಮಯದಲ್ಲಿ ಬರಬಹುದು. ನಿವು ಹಣ ಉಳಿಸಿದರೆ ಅದರಿಂದ ಹಲವು ಸಂದರ್ಭಗಳಲ್ಲಿ ಈ ಹಣ ಜೀವವನ್ನು ಉಳಿಸುತ್ತದೆ ಅಥವಾ ಕಷ್ಟನಿಂದ ನಿಮ್ಮನ್ನು ಪಾರು ಮಾಡುತ್ತದೆ. 

Latest Videos


ಯಾವಾಗಲೂ ಸರಿಯಾದ ಸ್ಥಳದಲ್ಲಿರಿ   
ಗೌರವಾನ್ವಿತರು ಮತ್ತು ಒಳ್ಳೆಯ ಜನರು ವಾಸಿಸುವ ದೇಶ, ನಗರ ಅಥವಾ ಪ್ರದೇಶದಲ್ಲಿ ಯಾವಾಗಲೂ ವಾಸಿಸಿ. ನಿಮ್ಮ ಸುತ್ತ ಒಳ್ಳೆಯ ಚಿಂತಕರು, ಒಳ್ಳೆಯ ವ್ಯಕ್ತಿಗಳು ಇಲ್ಲದಿದ್ದರೆ ಯಾವಾಗ ಬೇಕಾದರೂ ತೊಂದರೆಗೆ ಸಿಲುಕಬಹುದು. ಅಲ್ಲದೆ, ನಿಮಗೆ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯವಿಲ್ಲದ (medical infrastructure) ಸ್ಥಳಗಳಲ್ಲಿ ನೀವು ಉಳಿಯಬಾರದು. 

ಹಣದಿಂದ ಪ್ರಲೋಭನೆಗೆ ಒಳಗಾಗಬೇಡಿ
ಹಣದ ಬಗ್ಗೆ  ದುರಾಸೆ ಹೊಂದಬೇಡಿ. ಅದರಿಂದ ನೀವು ನಿಮ್ಮ ಧರ್ಮ, ತತ್ವಗಳು, ಕುಟುಂಬ ಸಂತೋಷವನ್ನು (family happiness) ರಾಜಿ ಮಾಡಿಕೊಳ್ಳಬೇಕು ಅಥವಾ ಅದನ್ನು ಪಡೆಯಲು ತಪ್ಪು ಜನರೊಂದಿಗೆ ಬದುಕಬೇಕಾಗಬಹುದು. ಹಣ ಬೇಕು ನಿಜ. ಅದನ್ನು ಉತ್ತಮ ದಾರಿಯ ಮೂಲಕ ಪಡೆದುಕೊಳ್ಳಲು ಪ್ರಯತ್ನಿಸಿ. 
 

ಚಿಂತನಶೀಲವಾಗಿ ದಾನ ಮಾಡಿ 
ಕೆಲವು ವಸ್ತು ತುಂಬಾ ಹಾನಿಕಾರಕ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ದೇಣಿಗೆಗಳ ವಿಷಯದಲ್ಲೂ ಇದು ನಿಜ. ಆದ್ದರಿಂದ ದಾನ ಮಾಡಿ, ಆದರೆ ಅದನ್ನು ನಿಮ್ಮ ಮಿತಿಯೊಳಗೆ ಮಾಡಿ. ದಾನ (donate) ಮಾಡದಿರುವುದು ತುಂಬಾ ತಪ್ಪು. ಪಾಪಗಳನ್ನು ತೊಡೆದುಹಾಕಲು, ಖಂಡಿತವಾಗಿಯೂ ನಿಮ್ಮ ಆದಾಯದ ಒಂದು ಭಾಗವನ್ನು ಬಡವರು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಹೂಡಿಕೆ ಮಾಡಿ. 
 

ಯಾವಾಗಲೂ ಗುರಿಗಳನ್ನು ಹೊಂದಿಸಿ 
ಗುರಿ ಇಲ್ಲದ ವ್ಯಕ್ತಿ ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ನೀವು ಶ್ರೀಮಂತರಾಗಲು ಬಯಸಿದರೆ, ಗುರಿಗಳನ್ನು ಹೊಂದಿಸಿ ಮತ್ತು ಅದಕ್ಕೆ ಅನುಗುಣವಾಗಿ ವರ್ತಿಸಿ. ಒಂದು ಬಾರಿ ಗುರಿ ತಪುಪಲು ಪ್ರಯತ್ನಿಸಿ. ಸೋತರೆ ಮತ್ತೊಮ್ಮೆ ಪ್ರಯತ್ನಿಸಿ, ಎಲ್ಲಿವರೆಗೆ ಗುರಿ ತಪುಲುವುದೋ ಅಲ್ಲಿವರೆಗೆ ಪ್ರಯತ್ನ ನಿಲ್ಲಿಸಬೇಡಿ. 

click me!