ದೀಪಾವಳಿ ಪೂಜೆಗೆ ಏನು ಮಾಡಬೇಕು? ಏನು ಮಾಡಬಾರದು ಇಲ್ಲಿದೆ ನೋಡಿ...

First Published | Oct 29, 2021, 12:03 PM IST

ದೀಪಾವಳಿ ಸಮಯದಲ್ಲಿ ಯಾವುದೇ ಅಪಘಾತವಾಗದಂತೆ ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಕೆಲವು ನಿಯಮಗಳನ್ನು ಯಾವಾಗಲೂ ಅನುಸರಿಸಬೇಕು. ದೀಪಾವಳಿಯಲ್ಲಿ ಸಾಮಾನ್ಯವಾಗಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಿರಿ. ಇದರಿಂದ ಲಕ್ಷ್ಮಿ ದೇವಿ ಖಂಡಿತಾ ಪ್ರಸನ್ನಳಾಗುತ್ತಾಳೆ. 

ದೀಪಾವಳಿ ಎಂದರೆ ಸಂಭ್ರಮದ ಹಬ್ಬ. ದೀಪಾವಳಿ ನಾಲ್ಕು ದಿನಗಳ ಹಬ್ಬವಾಗಿದ್ದು, ಬೆಳಕಿನಿಂದಾಗಿ ದೇಶವನ್ನು ಬೆಳಗಿಸುತ್ತದೆ ಮತ್ತು ತನ್ನ ಸಂತೋಷದಿಂದ ಎಲ್ಲರನ್ನೂ ಬೆರಗುಗೊಳಿಸುತ್ತದೆ. ದೀಪಾವಳಿ ಎಂದರೆ ಕತ್ತಲಿನಿಂದ (Darkness) ಬೆಳಕಿನೆಡೆಗೆ (Light) ನಡೆಯುವ ಹಬ್ಬ. ಇದೆ ಕಾರಣಕ್ಕಾಗಿ ರಾತ್ರಿ ಸಮಯದಲ್ಲಿ ದೀಪಗಳನ್ನು ಹಚ್ಚುವ ಮೂಲಕ ಅಂಧಕಾರವನ್ನು ದೂರ ಮಾಡಿ ಲಕ್ಷ್ಮಿ ದೇವಿಯನ್ನು ಆಹ್ವಾನಿಸಲಾಗುತ್ತದೆ. 

ದೀಪಾವಳಿ ಹಬ್ಬದಲ್ಲಿ, ಪ್ರತಿಯೊಂದೂ ನಾಲ್ಕು ದಿನಗಳಲ್ಲಿ ವಿಭಿನ್ನ ಸಂಪ್ರದಾಯದೊಂದಿಗೆ (Rituals) ಪೂರ್ಣಗೊಳ್ಳುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಕೆಲವು ಕೆಲಸಗಳನ್ನು ಮಾಡಬಾರದು ಎಂದು ನಿಮಗೆ ತಿಳಿದಿದೆಯೇ? ದೀಪಾವಳಿಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ.

Tap to resize

ದೀಪಾವಳಿ ಪೂಜೆಗೆ ಏನು ಮಾಡಬೇಕು?
ಎಡದಿಂದ ಬಲಕ್ರಮದಲ್ಲಿ ಗಣೇಶ, ಲಕ್ಷ್ಮಿ , ಭಗವಾನ್ ವಿಷ್ಣು (Bhaga, ಸರಸ್ವತಿ ಮಾತೆ ಮತ್ತು ಕಾಳಿ ಮಾತೆಯ ವಿಗ್ರಹಗಳನ್ನು ಇರಿಸಿ. ನಂತರ ಲಕ್ಷ್ಮಣ  , ಶ್ರೀ ರಾಮ್ ಮತ್ತು ತಾಯಿ ಸೀತ ಅವರ ಪ್ರತಿಮೆಗಳನ್ನು ಸ್ಥಾಪಿಸಿ.  ಎಲ್ಲಾ  ದೇವರಿಗೆ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ಇದನ್ನು ತಪ್ಪದೆ ಮಾಡಿ. 

ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಪೂಜಾ ಪ್ರದೇಶವನ್ನು ಸ್ಥಾಪಿಸಿ ಮತ್ತು ಕುಟುಂಬದ ಎಲ್ಲಾ ಸದಸ್ಯರು ಪೂಜೆಯನ್ನು ಮಾಡುವಾಗ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು.
ಮುಖ್ಯ ಪೂಜೆಯ ದಿಯಾಗೆ ದೇಸಿ ತುಪ್ಪವನ್ನು ತುಂಬಿಸಿ. ದಿಯಾಗಳ ಸಂಖ್ಯೆ 11, 21, 51 ಇರಬೇಕು.
ದೀಪಾವಳಿ ರಾತ್ರಿ ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಮತ್ತೊಂದು ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ.

ಕೆಂಪು ಬಣ್ಣಗಳನ್ನು ಸಾಧ್ಯದಷ್ಟು ಬಳಸಿ.  ಕೆಂಪು  ದೀಪಗಳು, ಮೇಣದ ಬತ್ತಿಗಳು, ದೀಪಗಳು ಮತ್ತು ಕೆಂಪು ಹೂವುಗಳನ್ನು ಬಳಸಬಹುದು. ಭಾರತೀಯ ಸಂಪ್ರದಾಯದಲ್ಲಿ 'ವಿಘ್ನಹರ್ತ' ಎಂದು ಪೂಜಿಸಲ್ಪಡುವ ಗಣೇಶನ ಆರಾಧನೆಯೊಂದಿಗೆ ದೀಪಾವಳಿ ಪೂಜೆಯನ್ನು ಪ್ರಾರಂಭಿಸಿ. ಯಾವಾಗಲೂ ನಿಮ್ಮ ಮನೆಯನ್ನು ಸ್ವಚ್ಛವಾಗಿಡಿ. ತಾಯಿ ಲಕ್ಷ್ಮಿಗೆ ಶಾಂತಿ, ಸ್ವಚ್ಛತೆ ಇಷ್ಟ. ಆದ್ದರಿಂದ ಕುಟುಂಬ ಸದಸ್ಯರ ನಡುವೆ ವಿವಾದಗಳು ಬೇಡ. 

ದೀಪಾವಳಿ ಪೂಜೆಗೆ ಏನು ಮಾಡಬಾರದು?
ಜೂಜಾಟವನ್ನು ತಪ್ಪಿಸಬೇಕು. ಯಾವುದೇ ಕೆಟ್ಟ ರೀತಿಯ ಆಟ, ವ್ಯಸನವನ್ನು ಸಾಧ್ಯವಾದಷ್ಟು ತಪ್ಪಿಸಿ. 
ದೀಪಾವಳಿ ಹಬ್ಬದ ದಿನದಂದು ಮದ್ಯ ಸೇವನೆ ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
ರಾತ್ರಿಯಿಡೀ ದೀಪ ಉರಿಯುತ್ತಿರಲಿ. ಪೂಜಾ ಗೃಹವನ್ನು ಖಾಲಿ ಬಿಡಬೇಡಿ. 

ಕುಳಿತುಕೊಳ್ಳುವ ಸ್ಥಿತಿಯಲ್ಲಿಲ್ಲದ  ಗಣೇಶನ ವಿಗ್ರಹವನ್ನು ಪೂಜಾ ಪ್ರದೇಶದಲ್ಲಿ ಇಡಬೇಡಿ. ಭಗವಾನ್ ವಿಷ್ಣುವಿಲ್ಲದೇ ಲಕ್ಷ್ಮಿ ದೇವಿಯನ್ನು ಏಕಾಂಗಿಯಾಗಿ ಇಡಬೇಡಿ. ಇದು ಅದೃಷ್ಟವನ್ನು ನೀಡುವುದಿಲ್ಲ. ಮನೆಯೊಳಗೆ ಪಟಾಕಿ ಅಥವಾ ಹೂವುಗಳನ್ನು ಬಳಸಬೇಡಿ. ಅಲ್ಲದೆ ಲೋಹ ಅಥವಾ ಗಾಜಿನ ಪಾತ್ರೆಗಳಲ್ಲಿ ಪಟಾಕಿಗಳನ್ನು ಹಚ್ಚಬೇಡಿ.
 

ದೀಪಾವಳಿಯ ಮನೆಯ ಅಲಂಕಾರದಲ್ಲಿ ಕಿಂಚಿತ್ತೂ ದೋಷ ಬಾರದಂತೆ ನೋಡಿಕೊಳ್ಳಿ. ಎಲ್ಲಾ ಕಳೆ, ಕೊಳೆ ನಿವಾರಣೆಯಾಗಲಿ. ಇದರಿಂದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಸುಲಭ. ಜೊತೆಗೆ ದೀಪಾವಳಿ ಸಮಯದಲ್ಲಿ ಮನೆಯನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಿ. ಮನೆ ಮುಂದೆ ರಂಗೋಲಿ (Rangoli) ಹಾಕೋದನ್ನು ಮರೆಯಬೇಡಿ. 

Latest Videos

click me!