ಈ ವಸ್ತುಗಳನ್ನು ಯಾವುತ್ತೂ ದಾನ ಮಾಡಬೇಡಿ, ಸಮಸ್ಯೆ ಕಾಡುತ್ತೆ

Suvarna News   | Asianet News
Published : Oct 31, 2021, 11:33 AM ISTUpdated : Oct 31, 2021, 11:37 AM IST

ದಾನ (donate) ಎಂಬುದು, 'ಸನಾತನ್ ಧರ್ಮ'ದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನಿರ್ಗತಿಕರಿಗೆ ಮತ್ತು ಬಡವರಿಗೆ ದೇಣಿಗೆ ನೀಡಿದಾಗ ಮಾತ್ರ ಒಂದು ವರ್ಷದಲ್ಲಿ ಪೂರ್ಣ ಫಲ ಸಿಗುತ್ತದೆ. ಯಾವಾಗ ಮತ್ತು ಯಾವುದನ್ನು ದಾನ ಮಾಡಬಾರದು ಎಂಬುದನ್ನು ಸಹ ಶಾಸ್ತ್ರಗಳು ಮತ್ತು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.  ನಾವು ಎಂದಿಗೂ ದಾನ ಮಾಡಬಾರದಾದ ವಸ್ತುಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.  ಈ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. 

PREV
16
ಈ ವಸ್ತುಗಳನ್ನು ಯಾವುತ್ತೂ ದಾನ ಮಾಡಬೇಡಿ, ಸಮಸ್ಯೆ ಕಾಡುತ್ತೆ

ಪಾತ್ರೆ (steel vessels): ಯಾವುದೇ ಸಂದರ್ಭದಲ್ಲೂ ಉಕ್ಕಿನ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು, ವಿಶೇಷವಾಗಿ ಬಳಸಿದ ಪಾತ್ರೆಗಳು. ಹೌದು ನಾವು ಬಳಸಿದ ಪಾತ್ರೆಗಳನ್ನು(used vessels) ದಾನ  ಮಾಡುವುದರಿಂದ  ಮನೆಯ ಸುಖ ಮತ್ತು ಸಮೃದ್ಧಿ ಕಡಿಮೆಯಾಗುತ್ತದೆ. ನೀಡಿದರೂ ಹೊಸ ಪಾತ್ರೆಗಳನ್ನು ದಾನ ನೀಡಿ. 
 

26

ಪ್ಲಾಸ್ಟಿಕ್ (plastic): ಬೇರೆಲ್ಲಾ ವಸ್ತುಗಳು ಓಕೇ. ಆದರೆ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದು ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಎಂದಿಗೂ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬೇಡಿ. ದಾನ ಮಾಡುವ ಮನಸ್ಸಿದ್ದರೆ ದವಸ, ಧಾನ್ಯ , ವಸ್ತ್ರ (clothes) ಮೊದಲಾದವುಗಳನ್ನ ದಾನ ಮಾಡಿ. 

36

ಮೊನಚಾದ ವಸ್ತು (sharp object): ಚೂಪಾದ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ. ಉದಾಹರಣೆಗೆ- ಚಾಕುಗಳು, ಕತ್ತರಿಗಳು ಇತ್ಯಾದಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಜಗಳ ಉಂಟಾಗುತ್ತದೆ. ಈ ಚೂಪಾದ ವಸ್ತುಗಳು ಆಯುಧಗಳಾಗಿವೆ. ಇವು ನಕಾರಾತ್ಮಕತೆಯ ಸಂಕೇತವಾಗಿದೆ. ಅದುದರಿಂದ ಇಂತಹ ವಸ್ತುಗಳನ್ನು ದಾನ ನೀಡುವುದು ತಪ್ಪಿಸಿ. 

46

ಪೊರಕೆ (broomstick): ಪೊರಕೆಗಳನ್ನು ದಾನ ಮಾಡುವುದು ಬಡತನಕ್ಕೆ ಕರೆ ನೀಡುವುದಾಗಿದೆ, ಆದ್ದರಿಂದ ಅದನ್ನು ಎಂದಿಗೂ ದಾನ  ಮಾಡಬೇಡಿ. ನಿಮ್ಮ ಹಳೆಯ ಪೊರಕೆಯನ್ನು ದಾನ ಮಾಡುವುದೂ ಸಹ ಸರಿ ಅಲ್ಲ. ಪೊರಕೆ ಗೆ ಹಳೆಯದಾದರೆ ಅದನ್ನು ಎಸೆಯಿರಿ. ಪೊರಕೆಯನ್ನು ಬೇರೆಯವರಿಗೆ ಬಳಕೆ ಮಾಡಲು ಕೊಡುವುದು ಸಹ ಸರಿಯಲ್ಲ. 

56

ಹಳಸಿದ ಆಹಾರ (stale food): ಕೊಳೆತ, ಹಳಸಿದ ಆಹಾರದಂತಹ  ಆಹಾರಕ್ಕೆ ಯೋಗ್ಯವಲ್ಲದ ಯಾವುದನ್ನೂ ಬೇರೆಯವರಿಗೆ ನೀಡಬೇಡಿ. ಹಾಗೆ ಮಾಡುವುದು ಅಶುಭ. ಯಾವಾಗಲೂ ತಾಜಾ ಮತ್ತು ಒಳ್ಳೆಯ ವಸ್ತುಗಳನ್ನು ಮಾತ್ರ ದಾನ ಮಾಡಿ. ಅಂತೆಯೇ ಬಳಸಿದ ಎಣ್ಣೆಯನ್ನು ದಾನ ಮಾಡಬೇಡಿ. ಪ್ರಾಣಿಗಳಿಗಾದರೂ ಸರಿ ಹಳಸಿದ ವಸ್ತುಗಳನ್ನು ನೀಡಬೇಡಿ.

66

ಈ ಯಾವುದೇ ವಸ್ತುಗಳ ಅಗತ್ಯವನ್ನು ಹೊಂದಿರುವ ಒಬ್ಬ ವ್ಯಕ್ತಿ ಇದ್ದರೆ, ಅವರಿಗೆ ಕೊಡಿ, ಆದರೆ ತಪ್ಪಾಗಿ ಈ ವಸ್ತುಗಳನ್ನು ದಾನ ಮಾಡಬೇಡಿ. ವಸ್ತುಗಳನ್ನು ಸರಿಯಾಗಿಯೇ ದಾನ ಮಾಡಿ. ಬಡವರಿಗೆ ದಾನ ಮಾಡಿದರೆ ಅದರಿಂದ ಹೆಚ್ಚು ಫಲ ಸಿಗುತ್ತದೆ. 

Read more Photos on
click me!

Recommended Stories