#Deepavali ಮನೆ ಸ್ವಚ್ಚಗೊಳಿಸುವಾಗ ಈ ವಸ್ತು ಸಿಕ್ಕರೆ ಲಕ್

Suvarna News   | Asianet News
Published : Oct 28, 2021, 02:21 PM IST

ದೀಪಾವಳಿ (Diwali) ಸನಾತನ ಧರ್ಮದ ಅತಿದೊಡ್ಡ ಹಬ್ಬ (Biggest festival) ಎಂದು ಪರಿಗಣಿಸಲಾಗಿದೆ, ಆದ್ದರಿಂದ ಈ ಹಬ್ಬಕ್ಕೆ ಮೊದಲು ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ (cleaning home). ನಂತರ ಮನೆಗೆ ಬಣ್ಣ ಬಳಿಯಲಾಗುತ್ತದೆ ಮತ್ತು ಸುಂದರಗೊಳಿಸಲಾಗುತ್ತದೆ. ದೀಪಾವಳಿಯಲ್ಲಿ ಮನೆಯನ್ನು ಅಲಂಕರಿಸಲಾಗುತ್ತದೆ (decorating home) ಇದರಿಂದ ಮನೆಯಲ್ಲಿ ಲಕ್ಷ್ಮಿ ಮಾತೆ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. 

PREV
17
#Deepavali ಮನೆ ಸ್ವಚ್ಚಗೊಳಿಸುವಾಗ ಈ ವಸ್ತು ಸಿಕ್ಕರೆ ಲಕ್

ಈ ವರ್ಷ ದೀಪಾವಳಿ (Diwali2021) ಅನ್ನು 2021 ರ ನವೆಂಬರ್ 4 ರಂದು ಆಚರಿಸಲಾಗುವುದು. ಇದಕ್ಕಾಗಿ ಮನೆಗಳನ್ನು ಸ್ವಚ್ಛಗೊಳಿಸುವುದು, ಶಾಪಿಂಗ್ ಇತ್ಯಾದಿಗಳು ಪ್ರಾರಂಭವಾಗಿವೆ. ನೀವು ನಿಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ, ಸ್ವಚ್ಛಗೊಳಿಸುವ ಸಮಯದಲ್ಲಿ  ಪಡೆಯುವ ಕೆಲವು ವಿಷಯಗಳು ಅಥವಾ ಎಲ್ಲೋ ಮೂಲೆಯಲ್ಲಿ ಸಿಗುವ ವಸ್ತುಗಳು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.

27

ಸ್ವಚ್ಛತೆಯಲ್ಲಿ ಇವುಗಳನ್ನು ಪಡೆಯುವುದು ತುಂಬಾ ಶುಭಕರ. 
ಜ್ಯೋತಿಷ್ಯ (Astrology) ಪ್ರಕಾರ, ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ವಸ್ತುಗಳನ್ನು ಸಿಕ್ಕರೆ ಅದೃಷ್ಟ ಖುಲಾಯಿಸುವುದು ಗ್ಯಾರಂಟಿ. ಈ ವಿಷಯಗಳು ಜೀವನದ ಸಂತೋಷ ಮತ್ತು ಯೋಗಕ್ಷೇಮವನ್ನು ಸೂಚಿಸುತ್ತವೆ. ಅಂತಹ ವಸ್ತುಗಳು ಯಾವುವು? ಅದರಿಂದ ಏನು ಪ್ರಯೋಜನ ಮೊದಲಾದ ವಿಷಯಗಳನ್ನು ತಿಳಿಯೋಣ... 

37

ದಿಢೀರ್ ಹಣ: ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪರ್ಸ್ ನಲ್ಲಿ ನೋಟು (money in purse) ಅಥವಾ ನಾಣ್ಯ ದೊರೆತರೆ ತುಂಬಾ ಒಳ್ಳೆಯದು. ಅಥವಾ ಹಣ ಮನೆಯಲ್ಲಿ ಯಾವುದೇ ಮೂಲೆಯಲ್ಲೂ ಸಿಕ್ಕರೆ ಶುಭ ಎಂದು ಪರಿಗಣಿಸಲಾಗುತ್ತದೆ. ಈ ಹಣವನ್ನು ದೇವಾಲಯಕ್ಕೆ ದಾನ ಮಾಡಿ, ನಿಮಗೆ ಲಕ್ಷ್ಮಿ ಮಾತೆಯ ಅನುಗ್ರಹದ ಸುರಿಮಳೆಯಾಗುತ್ತದೆ. 

47

ಶಂಖ ಅಥವಾ ಕವಡೆ : ಮನೆಯನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಶಂಖ (conch) ಅಥವಾ ಕೌರಿ ಅಥವಾ ಕವಡೆ ಸಿಕ್ಕರೆ ಅದನ್ನು ಸಹ ತುಂಬಾ ಶುಭಕರ ಎಂದು ಹೇಳಲಾಗುತ್ತದೆ. ಈ ಎರಡೂ ವಸ್ತುಗಳು ತಾಯಿ ಲಕ್ಷ್ಮಿಯ ನೆಚ್ಚಿನ ವಿಷಯಗಳು. ಇವುಗಳು ಸಿಕ್ಕರೆ ಹಣ ಹೆಚ್ಚುತ್ತದೆ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.

57

ನವಿಲು ಗರಿಗಳು (peacock feather) ಅಥವಾ ಕೊಳಲುಗಳು ಸಿಗುವುದು: ಸ್ವಚ್ಛಗೊಳಿಸುವ ಸಮಯದಲ್ಲಿ ಇದ್ದಕ್ಕಿದ್ದಂತೆ ನವಿಲು ಗರಿ ಅಥವಾ ಕೊಳಲುಗಳನ್ನು ನೀವು ಕಂಡುಕೊಂಡರೆ ಅದೃಷ್ಟವೇ ಬದಲಾಗುತ್ತದೆ. ಇದರ ಅರ್ಥ ನಿಮ್ಮ ಮೇಲೆ ದೇವರ ಅನುಗ್ರಹದ ಸಂಕೇತವಾಗಿದೆ. ಅಂದರೆ, ನಿಮ್ಮ ಜೀವನದಲ್ಲಿ ಶೀಘ್ರದಲ್ಲೇ ಏನಾದರೂ ಒಳ್ಳೆಯದು ಸಂಭವಿಸಲಿದೆ. 

67

ಹಳೆಯ ಅಕ್ಕಿಯನ್ನು (old rice) ಪಡೆಯುವುದು: ಮನೆಯನ್ನು ಸ್ವಚ್ಚಗೊಳಿಸುವಾಗ ಅಕ್ಕಿ ಸಿಕ್ಕರೆ, ಅಂದರೆ ಅಕ್ಕಿಯನ್ನು ಎಲ್ಲೋ ಇಟ್ಟು ನೀವು ಮರೆತಿದ್ದರೆ ಮತ್ತು ಮನೆಯನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮಗೆ ಅಕ್ಕಿ ಸಿಕ್ಕರೆ ಅದು ಜೀವನದಲ್ಲಿ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತದೆ. 

77
cleaning products

ಖಾಲಿ ಕೆಂಪು ಬಟ್ಟೆಯನ್ನು (red cloth) ಪಡೆಯುವುದು: ಸ್ವಚ್ಛಗೊಳಿಸುವ ಸಮಯದಲ್ಲಿ ಕೆಂಪು ಖಾಲಿ ಬಟ್ಟೆ ಕಂಡು ಬಂದರೆ, ಅದು ನಿಮ್ಮ ಜೀವನದಲ್ಲಿ ಸುವರ್ಣ ಸಮಯದ ಆರಂಭದ ಸಂಕೇತ. ಒಟ್ಟಲ್ಲಿ ಈ ಎಲ್ಲಾ ವಸ್ತುಗಳು ಜೀವನದಲ್ಲಿ ಶುಭ ಫಲ ನೀಡುತ್ತದೆ. ಮತ್ತೇಕೆ ತಡ ಈಗಲೇ ನಿಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿ. 

Read more Photos on
click me!

Recommended Stories