ಎಲ್ಲೆಲ್ಲೂ ರಂಗು ತುಂಬೋ ಬಣ್ಣದೋಕುಳಿ.. ಮಕ್ಕಳ ಹೋಳಿ ಮಜಾ ನೋಡಿ..

Published : Mar 07, 2023, 04:56 PM IST

ಹೋಳಿ ಹಬ್ಬದ ಉತ್ಸಾಹವೇ ಅಂಥದು- ಅದು ಮಕ್ಕಳಿಂದ ಹಿಡಿದು ಮುದುಕರವರೆಗೆ ಬಣ್ಣಗಳ ಎರಚಾಟದ ಸಂಭ್ರಮ ತರುತ್ತದೆ. ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಮಕ್ಕಳು ಹೋಳಿಯಾಡುತ್ತಿರುವ ದೃಶ್ಯಗಳು ಕನ್ನಡಪ್ರಭದ ಕ್ಯಾಮೆರಾ ಮ್ಯಾನ್ ರವಿ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ..

PREV
110
ಎಲ್ಲೆಲ್ಲೂ ರಂಗು ತುಂಬೋ ಬಣ್ಣದೋಕುಳಿ.. ಮಕ್ಕಳ ಹೋಳಿ ಮಜಾ ನೋಡಿ..

ಹೋಳಿ ಎಂದರೆ ಸಂಭ್ರಮ, ಸಡಗರ, ಆಟ, ಉತ್ಸಾಹ, ಮನರಂಜನೆ.. ಮನಸ್ಸಿನಲ್ಲಿ ರಂಗುರಂಗಿನ ಭಾವದೋಕುಳಿ ಹೊಮ್ಮಿಸುವ ವರ್ಣದೋಕುಳಿ.. 

210

ಮಕ್ಕಳಿಗಂತೂ ಈ ಹಬ್ಬವೆಂದರೆ ಅಚ್ಚುಮೆಚ್ಚು. ಉಳಿದೆಲ್ಲ ಹಬ್ಬಗಳಲ್ಲಿ ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಓಡಾಡುತ್ತಾರೆ. ಆದರೆ ಬಟ್ಟೆ ಕಲೆಯಾಗುವಂತಿಲ್ಲ, ಕೊಳೆಯಾಗುವಂತಿಲ್ಲ ಎಂಬ ಕಂಡಿಶನ್ ಇರುತ್ತದೆ..

310

ಆದರೆ, ಹೋಳಿ ಹಾಗಲ್ಲ.. ಉಳಿದಂತೆ ಬಟ್ಟೆ ಕೊಳೆ ಮಾಡಿಕೊಳ್ಳಬೇಡ ಎನ್ನುವ ಹಿರಿಯರೇ ಇಂದು ಮಕ್ಕಳ ಮುಖ ಮೈಗೆ ಬಣ್ಣ ಮೆತ್ತಿ ಸಂಭ್ರಮಿಸುತ್ತಾರೆ.

410

ದೊಡ್ಡವರೂ ಪುಟ್ಟವರಾಗುವ, ಮಕ್ಕಳ ಜೊತೆ ಮಕ್ಕಳಾಗಿ ಆಟವಾಡುವಂತೆ ಮಾಡುವ ತಾಕತ್ತು ಹೋಳಿಯ ಆಟಕ್ಕಿದೆ.. ಹಾಗಾಗೇ, ಮಕ್ಕಳು ಹೋಳಿ ಎಂದರೆ ಮತ್ತೂ ಸಡಗರ ಅನುಭವಿಸುತ್ತಾರೆ.

510

ಅದರಲ್ಲೂ ಮಕ್ಕಳಿಗೆ ಬಣ್ಣಗಳೆಂದರೆ ಅಚ್ಚುಮೆಚ್ಚು. ಕೇವಲ ಪೇಪರ್ ಮೇಲೆ ಪೇಂಟಿಂಗ್ ಮಾಡುತ್ತಿದ್ದ ಮಕ್ಕಳಿಗೆ ಹೋಳಿಯಲ್ಲಿ ಬಣ್ಣವನ್ನು ಅಣ್ಣತಮ್ಮಂದಿರು, ಅಕ್ಕತಂಗಿಯರು, ಗೆಳೆಯರು ಎಲ್ಲರ ಮೇಲೆರಚುವ ಅವಕಾಶ..

610

ಬರೀ ಬಣ್ಣವಲ್ಲ, ಬಣ್ಣದ ನೀರನ್ನು ಕಲೆಸಿಕೊಂಡು ಪಿಚಕಾರಿ ಹಾರಿಸುವ ಸಂಭ್ರಮ.. ನೀರಾಟ ಕೂಡಾ ಬಣ್ಣದಾಟದಷ್ಟೇ ಖುಷಿ ತರುವ ಕೆಲಸ ಮಕ್ಕಳಿಗೆ..

710

ಈ ಎಲ್ಲ ಸಡಗರ, ಸಂಭ್ರಮವನ್ನೂ ಈ ಹೋಳಿ ಹಬ್ಬ ಮಕ್ಕಳ ಪಾಲಿಗೆ ತಂದು ಕೊಡುತ್ತದೆ. ಮೊದಲೇ ಕಲರ್‌ಫುಲ್ ಆದ ಪ್ರಪಂಚ ಅವರ ಕಣ್ಣಿನಲ್ಲಿ ಅಕ್ಷರಶಃ ಮತ್ತಷ್ಟು ಕಲರ್‌ಫುಲ್ ಆಗಿ ತುಂಬಿಕೊಳ್ಳುತ್ತದೆ..

810

ಮೈ ಎಲ್ಲ ಬಣ್ಣದಲ್ಲಿ ಮಿಂದೇಳುವಾಗ ಮನಸಿನ ತುಂಬಾ ಕಾಮನಬಿಲ್ಲು.. ಕಣ್ಣುಗಳಲ್ಲಿ ಹೊಳಪು, ಬಾಯಿ ತುಂಬಾ ನಗು.. ಈ ಸಂತೋಷದ ದಿನ ಜೀವನಪೂರ್ತಿ ನೆನಪಿನ ಬುತ್ತಿಯೊಳಗೆ ಕೂರುವಂಥದ್ದು..

910

ಬಾಲ್ಯದ ಮಾಯಾಲೋಕಕ್ಕೆ ಮತ್ತಷ್ಟು ಬಣ್ಣ ಹಚ್ಚಿದಂಥ ಬೆರಗು ತರುವ ಹಬ್ಬ ಹೋಳಿ.. ಮಕ್ಕಳ ಪಾಲಿನ ಮಾಯಾಬಜಾರ್ ನಿರ್ಮಿಸುವ ಹೋಳಿ..

1010

ಈ ಹೋಳಿಯ ಸಂಭ್ರಮ, ಬಣ್ಣಗಳ ಬೆರಗು, ವರ್ಣರಂಜಿತ ಕನಸುಗಳು, ನಗುವಿನ ತೋರಣ ಎಲ್ಲವೂ ಮಕ್ಕಳ ಭವಿಷ್ಯದ ಬತ್ತಳಿಕೆಯಲ್ಲೂ ತುಂಬಿ ಮೆರೆಯಲಿ.. ಬಾಲ್ಯದಂತೆ ಭವಿಷ್ಯವೂ ಭವಿತವ್ಯವಾಗಲಿ..

Read more Photos on
click me!

Recommended Stories