ಹೋಳಿ ಹಬ್ಬದಂದು ಈ 4 ಮಂಗಳಕರ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ಕಟಾಕ್ಷ..

First Published | Mar 7, 2023, 4:10 PM IST

ಬೆಳ್ಳಿ ನಾಣ್ಯವನ್ನು ಹೋಳಿಗೆ ಖರೀದಿಸಿ ತರಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಅಂತೆಯೇ ಹೋಳಿಗೆ ಯಾವ ವಸ್ತುವನ್ನು ಖರೀದಿ ಮಾಡಿದರೆ ಮನೆಯಲ್ಲಿ ಧನಲಕ್ಷ್ಮೀ ನೆಲೆಸುತ್ತಾಳೆ ಎಂಬುದನ್ನು ನಾವಿಂದು ತಿಳಿಸುತ್ತೇವೆ. 

ಹಿಂದೂ ಧರ್ಮದಲ್ಲಿ, ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನದಂದು ಜನರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಾರೆ. ಕ್ಯಾಲೆಂಡರ್ ಪ್ರಕಾರ, ಹೋಲಿಕಾ ದಹನವನ್ನು ಪ್ರದೋಷ ಅವಧಿಯಲ್ಲಿ ಫಾಲ್ಗುಣ ಪೂರ್ಣಿಮೆಯಂದು ಮಾಡಲಾಗುತ್ತದೆ. ಹಾಗೆಯೇ ಮರುದಿನ ಹೋಳಿಯನ್ನು ಆಡಲಾಗುತ್ತದೆ. 
 

ಈ ವರ್ಷ ಹೋಳಿಕಾ ದಹನವನ್ನು ಮಾರ್ಚ್ 7ರಂದು ಸಂಜೆ ಮಾಡಲಾಗುತ್ತದೆ ಮತ್ತು ಹೋಳಿಯನ್ನು ಮಾರ್ಚ್ 8 ರಂದು ಆಡಲಾಗುತ್ತದೆ. ಹೋಳಿ ದಿನದಂದು ತೆಗೆದುಕೊಳ್ಳುವ ಈ ಕ್ರಮಗಳು ಮನೆಯಲ್ಲಿ ಲಕ್ಷ್ಮೀ ನೆಲೆಸುವಂತೆ ಮಾಡುತ್ತವೆ.

Tap to resize

ಹೋಳಿ ದಿನದಂದು ಮನೆಗೆ ಈ 4 ವಸ್ತುಗಳನ್ನು ತಂದರೆ ನಿಮ್ಮ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಈ ವಸ್ತುಗಳು ಯಾವುವು ಎಂದು ತಿಳಿಯೋಣ.

ಬೆಳ್ಳಿ ನಾಣ್ಯ(Silver Coin)
ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಹೋಳಿ ದಿನದಂದು ಬೆಳ್ಳಿ ನಾಣ್ಯವನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ನಾಣ್ಯವನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಅರಿಶಿನದೊಂದಿಗೆ ಕಟ್ಟಿಕೊಳ್ಳಿ. ಹಾಗೆಯೇ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಬಹುದು.

ಮಾವು ಅಥವಾ ಅಶೋಕ ಎಲೆಗಳ ಪೂಜೆ(Mango leaves or Ashoka leaves Puja)
ಹೋಳಿಕಾ ದಹನದ ದಿನ ಬೆಳಗ್ಗೆ ಮನೆಯ ಮುಖ್ಯ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿಕೊಳ್ಳಿ. ಏಕೆಂದರೆ ಲಕ್ಷ್ಮಿಯು ಮುಖ್ಯ ಬಾಗಿಲಿನಿಂದ ಮಾತ್ರ ಪ್ರವೇಶಿಸುತ್ತಾಳೆ. ಅಲ್ಲದೆ, ಮುಖ್ಯ ಬಾಗಿಲನ್ನು ಸರಿಯಾಗಿ ಸ್ವಚ್ಛಗೊಳಿಸಿ. ಮನೆಯ ಮುಖ್ಯ ಬಾಗಿಲಿಗೆ ಅಶೋಕ ಎಲೆಗಳನ್ನು ಸಹ ನೇತು ಹಾಕಬಹುದು.

ಲೋಹದ ಆಮೆ(Metal Tortoise)
ವಾಸ್ತು ಪ್ರಕಾರ ಹೋಳಿಯಂದು ಐದು ಲೋಹಗಳಿಂದ ಮಾಡಿದ ಆಮೆಯನ್ನು ಖರೀದಿಸಿ ತರಬಹುದು. ಈ ಆಮೆಯ ಹಿಂಭಾಗದಲ್ಲಿ ಶ್ರೀ ಯಂತ್ರ ಮತ್ತು ಕುಬೇರ ಯಂತ್ರ ಇರಬೇಕು. ಮತ್ತೊಂದೆಡೆ, ಆಮೆ ಉತ್ತರಕ್ಕೆ ಎದುರಾಗಿ ಸ್ಥಾಪಿಸಬೇಕು. ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ವಿಷ್ಣುವು ಎಲ್ಲಿ ನೆಲೆಸಿರುವನೋ ಅಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ.
 

ಬಿದಿರಿನ ಸಸ್ಯ(Bamboo Plant)
ಹೋಳಿಗೆ ಬಿದಿರಿನ ಗಿಡ ಖರೀದಿಸಿ ತಂದಿರಿ. ಬಿದಿರಿನ ಸಸ್ಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಡ್ರಾಯಿಂಗ್ ರೂಮ್ ಅಥವಾ ಹಾಲ್‌ನಲ್ಲಿಯೂ ಇರಿಸಿ. ಆದರೆ ಅದರಲ್ಲಿ ಏಳು ಅಥವಾ ಹನ್ನೊಂದು ಕೋಲುಗಳು ಮಾತ್ರ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಸಸ್ಯವು ವಾಸಿಸುವ ಮನೆಯಲ್ಲಿ ಯಾವಾಗಲೂ ಹಣ ಮತ್ತು ಧಾನ್ಯಗಳ ಕೊರತೆಯಿಲ್ಲ ಎಂದು ನಂಬಲಾಗಿದೆ.

Latest Videos

click me!