ಸರ್ವರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

First Published Aug 18, 2022, 6:51 AM IST

ಕೃಷ್ಣ ಜನ್ಮಾಷ್ಟಮಿಯು ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಅತಿ ದೊಡ್ಡ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ ಕೃಷ್ಣ ಭಕ್ತರಿಗೆ ದೊಡ್ಡ ದಿನ. ಈ ದಿನ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು, ವಾಟ್ಸಾಪ್, ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಹಾಕಲು ಅತ್ಯುತ್ತಮ ಸಂದೇಶಗಳು, ಉಲ್ಲೇಖಗಳು, ಶುಭಾಶಯಗಳು, ಚಿತ್ರಗಳು ಮತ್ತು ಭಗವದ್ಗೀತೆಯಲ್ಲಿ ಸ್ವತಃ ಶ್ರೀಕೃಷ್ಣನ ಉಲ್ಲೇಖಗಳು ಇಲ್ಲಿವೆ..

'ಬೇರೊಬ್ಬರ ಜೀವನವನ್ನು ಪರಿಪೂರ್ಣತೆಯಿಂದ ಅನುಕರಿಸಿ ಬದುಕುವುದಕ್ಕಿಂತ ನಿಮ್ಮ ಸ್ವಂತ ಹಣೆಬರಹವನ್ನು ಅಪೂರ್ಣವಾಗಿ ಬದುಕುವುದು ಉತ್ತಮ.'

'ಯಾರ ಮನಸ್ಸು ಮತ್ತು ಆತ್ಮವು ಸಾಮರಸ್ಯದಿಂದ ಕೂಡಿದೆಯೋ, ಯಾರು ಆಸೆ ಮತ್ತು ಕ್ರೋಧದಿಂದ ಮುಕ್ತರಾಗಿರುತ್ತಾರೋ, ಹಾಗೆ ತಮ್ಮ ಆತ್ಮವನ್ನು ತಿಳಿದಿರುವವರೊಂದಿಗೆ ದೇವರ ಶಾಂತಿ ಇರುತ್ತದೆ.'

'ಚಳಿಗಾಲ ಮತ್ತು ಬೇಸಿಗೆಯ ಋತುಗಳ ಗೋಚರಿಸುವಿಕೆ ಮತ್ತು ಕಣ್ಮರೆಯಂತೆ ಸಂತೋಷ ಮತ್ತು ಸಂಕಟ ಶಾಶ್ವತವಲ್ಲ. ಕಾಲಾನಂತರದಲ್ಲಿ ಅವು ಕಣ್ಮರೆಯಾಗುವುವು. ಈ ಭಾವಗಳು ನಮ್ಮ ಇಂದ್ರಿಯ ಗ್ರಹಿಕೆಯಿಂದ ಉದ್ಭವಿಸುತ್ತವೆ. ಹಾಗಾಗಿ, ಪ್ರತಿ ಸನ್ನಿವೇಶವನ್ನೂ ಸಕಾರಾತ್ಮಕವಾಗಿ ಗ್ರಹಿಸಲು ಅಭ್ಯಸಿಸಬೇಕು.'

'ಸಾಕಾರಗೊಂಡ ಆತ್ಮವು ಅಸ್ತಿತ್ವದಲ್ಲಿ ಶಾಶ್ವತವಾಗಿದೆ, ಅವಿನಾಶಿ ಮತ್ತು ಅನಂತವಾಗಿದೆ, ಕೇವಲ ಭೌತಿಕ ದೇಹವು ವಾಸ್ತವಿಕವಾಗಿ ನಾಶವಾಗುತ್ತದೆ, ಆದ್ದರಿಂದ ಹೋರಾಡುತ್ತಲೇ ಇರಬೇಕು.'

'ಮಹಾಪಾಪಿಯಾದವನು ಕೂಡಾ ತನ್ನ ಸಂಪೂರ್ಣ ಆತ್ಮದಿಂದ ನನ್ನನ್ನು ಆರಾಧಿಸಿದರೆ, ಅವನ ನೀತಿಯ ಇಚ್ಛೆಯಿಂದಾಗಿ ಅವನನ್ನು ನೀತಿವಂತನೆಂದು ಪರಿಗಣಿಸಲ್ಪಡಬೇಕು. ಮತ್ತು ಅವನು ಶೀಘ್ರದಲ್ಲೇ ಶುದ್ಧನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ತಲುಪುತ್ತಾನೆ. ಯಾಕಂದರೆ ನನ್ನನ್ನು ಪ್ರೀತಿಸುವವನು ನಾಶವಾಗುವುದಿಲ್ಲ ಎಂಬುದು ನನ್ನ ವಾಗ್ದಾನವಾಗಿದೆ.'

'ನಿಮ್ಮ ಎಲ್ಲಾ ಕ್ರಿಯೆಗಳನ್ನು ದೈವಿಕತೆಯ ಮೇಲೆ ಕೇಂದ್ರೀಕರಿಸಿ, ಬಾಂಧವ್ಯವನ್ನು ತ್ಯಜಿಸಿ ಮತ್ತು ಯಶಸ್ಸು ಮತ್ತು ವೈಫಲ್ಯವನ್ನು ಸಮಾನ ದೃಷ್ಟಿಯಲ್ಲಿ ನೋಡಿ. ಆಧ್ಯಾತ್ಮಿಕತೆಯು ಸಮಚಿತ್ತತೆಯನ್ನು ಸೂಚಿಸುತ್ತದೆ.'

'ಒಳ್ಳೆಯ ಕೆಲಸವನ್ನು ಮಾಡುವ ಯಾರೂ ಇಲ್ಲಿ ಅಥವಾ ಮುಂದಿನ ಜಗತ್ತಿನಲ್ಲಿ ಕೆಟ್ಟ ಅಂತ್ಯಕ್ಕೆ ಬರುವುದಿಲ್ಲ. ಸದಾ ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ಸದುದ್ದೇಶ ಇರಬೇಕು.'
 

'ಒಂದು ಉಡುಗೊರೆಯನ್ನು ಹೃದಯದಿಂದ ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೀಡಿದಾಗ ಮತ್ತು ನಾವು ಪ್ರತಿಯಾಗಿ ಏನನ್ನೂ ನಿರೀಕ್ಷಿಸದಿದ್ದಾಗ ಅದು ಶುದ್ಧವಾಗಿರುತ್ತದೆ'
 

'ನಾವು ಏನಾಗಿದ್ದೇವೆಯೋ ಅದೆಲ್ಲವೂ ನಾವು ಅಂದುಕೊಂಡಿದ್ದರ ಫಲ. ನಾವು ನಮ್ಮ ಆಲೋಚನೆಗಳಿಂದ ಮಾಡಲ್ಪಟ್ಟಿದ್ದೇವೆ; ನಾವು ನಮ್ಮ ಆಲೋಚನೆಗಳಿಂದ ರೂಪಿಸಲ್ಪಟ್ಟಿದ್ದೇವೆ.'

'ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತನಗೆ ತಾನೇ ಮಿತ್ರನಾಗಿರುತ್ತಾನೆ. ಅಂತೆಯೇ ತನಗೆ ತಾನೇ ಶತ್ರುವೂ ಆಗಿರುತ್ತಾನೆ. ಯೋಚನೆಗಳೇ ವ್ಯಕ್ತಿಗೆ ಮಿತ್ರನಾಗಿಯೂ, ಶತ್ರುವಾಗಿಯೂ ಕೆಲಸ ಮಾಡುತ್ತವೆ.'

click me!