ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

Published : Oct 05, 2022, 06:19 AM IST

ನಮ್ಮ ನಾಡಹಬ್ಬ ದಸರಾದ ಕಡೆಯ ದಿನವಾದ ಇಂದು ವಿಜಯದಶಮಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಈ ದಿನ ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್ ಮೂಲಕ ಸಂದೇಶ ಕಳುಹಿಸಲು, ಶುಭಾಶಯ ತಿಳಿಸಲು ಇಲ್ಲಿವೆ ವಿಭಿನ್ನ ಮಾದರಿಗಳು.   

PREV
110
ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

ದುಷ್ಟರ ಮೇಲೆ ವಿಜಯ ಸಾಧಿಸಿದ ಭಗವಾನ್ ರಾಮ ಮತ್ತು ದುರ್ಗಾ ದೇವಿಯ ಸ್ಪೂರ್ತಿದಾಯಕ ಶೌರ್ಯಕ್ಕೆ ಗೌರವಾರ್ಥವಾಗಿ ದಸರಾವನ್ನು ಆಚರಿಸಲಾಗುತ್ತದೆ. ದ್ರೋಹ ಮತ್ತು ವಿನಾಶಕ್ಕೆ ಹೆಸರುವಾಸಿಯಾದ ರಾಕ್ಷಸರಾದ ರಾವಣ ಮತ್ತು ಮಹಿಷಾಸುರರನ್ನು ಕ್ರಮವಾಗಿ ರಾಮ ಮತ್ತು ದುರ್ಗೆಯರು ನಾಶಪಡಿಸಿದರು. ಭೂಮಿಯ ಮೇಲೆ ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ಮನುಕುಲಕ್ಕೆ ನೆನಪಿಸುವ ದಿನ ಈ ವಿಜಯದಶಮಿ. ಈ ಹಬ್ಬದ ಶುಭಾಶಯಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ವಾಟ್ಸಾಪ್, ಫೇಸ್ಬುಕ್, ಮತ್ತಿತರೆ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲು ಸಂದೇಶಗಳು ಇಲ್ಲಿವೆ.

210

ಈ ಹಬ್ಬವು ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷವನ್ನು ತರಲಿ. ಧನಾತ್ಮಕವಾಗಿರಿ ಮತ್ತು ನಿಮ್ಮ ಮೇಲೆ ನಂಬಿಕೆ ಇಡಿ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು!

310

ಈ ದಸರಾ ದಿನದಂದು ಶತ್ರುಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ಜಯಿಸುವ ಶಕ್ತಿ ದೊರೆಯಲಿ. ನಿಮ್ಮ ಜೀವನದ ಹೊಸ ಶುಭ ಅಧ್ಯಾಯ ಪ್ರಾರಂಭವಾಗಲಿ. ದಸರಾ ಶುಭಾಶಯಗಳು!

 

410

ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಾನ್ ರಾಮನ ಆಶೀರ್ವಾದದಿಂದ ನಮ್ಮ ಜೀವನದಲ್ಲಿ ಸಕಾರಾತ್ಮಕತೆ, ಸಂತೋಷ ಮತ್ತು ಸಮೃದ್ಧಿಯು ತುಂಬಲಿ. 

510

ವಿಜಯದಶಮಿಯ ಈ ಶುಭ ದಿನದಂದು ಉತ್ತಮ ಆರೋಗ್ಯ, ಸಂಪತ್ತು, ಯಶಸ್ಸು ಮತ್ತು ಸಮೃದ್ಧಿ ನಿಮ್ಮ ಬಾಳಿನಲ್ಲಿ ತುಂಬಲಿ ಎಂದು ಶ್ರೀರಾಮನಲ್ಲಿ ಬೇಡುತ್ತೇನೆ. ದಸರಾ ಶುಭಾಶಯಗಳು!
 

610

ಶ್ರೀ ರಾಮನು ನಿಮ್ಮ ಕುಟುಂಬಕ್ಕೆ ಎಲ್ಲ ಸಂತೋಷ ಮತ್ತು ಪ್ರೀತಿಯನ್ನು ನೀಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ವಿಜಯದಶಮಿ ಹಬ್ಬದ ಶುಭಾಶಯಗಳು.

710

ಕಾಮ, ಲೋಭ, ಕ್ರೋಧ, ಮೋಹ, ಅಹಂಕಾರ, ಮತ್ಸರ ಎಂಬ  ಆರು ಶಾಶ್ವತ ಅನಿಷ್ಟಗಳನ್ನು ಜಯಿಸುವ ಮೂಲಕ ನಾವು ಹೊಸ ಜೀವನವನ್ನು ಕಂಡುಕೊಳ್ಳೋಣ. ದಸರಾ ಶುಭಾಶಯಗಳು!

 

810

ನಿಮ್ಮ ಮಾರ್ಗವು ಬೆಳಕು, ಶಕ್ತಿ ಮತ್ತು ಅದೃಷ್ಟದಿಂದ ಬೆಳಗಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!

910

ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಎಂದು ದಸರಾ ನಮಗೆ ಕಲಿಸುತ್ತದೆ. ಆದ್ದರಿಂದ, ನಾವು ಯಾವಾಗಲೂ ಇತರರಿಗೆ ಒಳ್ಳೆಯವರಾಗಿರಲು ಪ್ರಯತ್ನಿಸಬೇಕು. ದಸರಾ ಶುಭಾಶಯಗಳು!


 

1010

ದಸರಾವು ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ಜಯವನ್ನು ಸೂಚಿಸುತ್ತದೆ. ಜಗತ್ತು ಒಳ್ಳೆಯತನದಿಂದ ತುಂಬಲಿ, ಸುತ್ತಮುತ್ತಲಿನ ಎಲ್ಲಾ ಕೆಡುಕುಗಳು ಮಾಯವಾಗಲಿ. ನಿಮಗೆ ದಸರಾ ಹಬ್ಬದ ಶುಭಾಶಯಗಳು!

click me!

Recommended Stories