ಎಂಥ ಅಂದ ಎಂಥ ಚೆಂದ ಬಂಧಮ್ಮ.. ನಿಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮಾ

Published : Oct 04, 2022, 11:11 AM ISTUpdated : Oct 04, 2022, 11:13 AM IST

ಲಗ್ಗೆರೆಯ ಕೆಂಪೇಗೌಡ ಲೇಔಟ್‌ನ ರಿಂಗ್ ರೋಡ್‌ನಲ್ಲಿರುವ ಬಂಧಮ್ಮ ದೇವಿ ದೇವಾಲಯದಲ್ಲಿ ನವರಾತ್ರಿ ಅಲಂಕಾರ ವಿಶೇಷವಾಗಿ ಭಕ್ತರ ಮನಸೂರೆಗೊಳ್ಳುತ್ತಿದೆ.. ತಾಯಿಯ ಈ ವೈವಿಧ್ಯಮಯ ಅಲಂಕಾರವನ್ನು ನೀವೂ ಕಣ್ತುಂಬಿಕೊಳ್ಳಿ..

PREV
19
ಎಂಥ ಅಂದ ಎಂಥ ಚೆಂದ ಬಂಧಮ್ಮ.. ನಿಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮಾ
bhandamma devi

ನವರಾತ್ರಿಗೆ ಎಲ್ಲ ದೇವಿ ದೇವಾಲಯಗಳಲ್ಲೂ ದಿನಕ್ಕೊಂದು ಅವತಾರದಲ್ಲಿ ತಾಯಿ ಕಂಗೊಳಿಸುತ್ತಿದ್ದಾಳೆ. ಒಂದು ದಿನಕ್ಕಿಂತ ಮತ್ತೊಂದು ದಿನದಲ್ಲಿ ಹೆಚ್ಚು ಹೆಚ್ಚು ವಿಜೃಂಭಿಸುತ್ತಿರುವ ತಾಯಿಯನ್ನು ಭಕ್ತರು ಕಣ್ತುಂಬಿಕೊಂಡು ಸಂತೋಷ ಪಡುತ್ತಿದ್ದಾರೆ. 
ಲಗ್ಗೆರೆಯ ಕೆಂಪೇಗೌಡ ಲೇಔಟ್‌ನ ರಿಂಗ್ ರೋಡ್‌ನಲ್ಲಿರುವ ಬಂಧಮ್ಮ ದೇವಿ ದೇವಾಲಯದಲ್ಲಿ ನವರಾತ್ರಿ ಅಲಂಕಾರ ವಿಶೇಷವಾಗಿ ಭಕ್ತರ ಮನಸೂರೆಗೊಂಡಿತು.. ಬಂಧಮ್ಮ ದೇವಿಯ ಈ ಅಲಂಕಾರವನ್ನು ನೀವೂ ಕಣ್ತುಂಬಿಕೊಳ್ಳಿ..

29
ವಾಮನ ಅಲಂಕಾರದಲ್ಲಿ ತಾಯಿ ಬಂಧಮ್ಮ ದೇವಿ.

ಈ ದೇವಿಯ ಬಳಿ ಕೇಳಿದ ಯಾವುದಕ್ಕೂ ಆಕೆ ಇಲ್ಲವೆನ್ನುವವಳಲ್ಲ..ಭವಬಂಧನಗಳನ್ನು ಭದ್ರಪಡಿಸುವ ದೇವಿ ಈಕೆ. 

39

ಮಾಟ, ಮಂತ್ರ, ಆಸ್ತಿ ಪಾಸ್ತಿ ಕಲಹ, ಸಂತಾನ, ಮದುವೆ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳಿಗೆ ಮುಕ್ತಿ ನೀಡುವವಳೇ ಬಂಧಮ್ಮ ದೇವಿ. 

49

ಅಮ್ಮನ ಮೂಲಸ್ಥಾನ ನಾಗಮಂಗಲ ಜಿಲ್ಲೆಯ ಬಳಪದಮಟ್ಟಿಕೊಪ್ಪಲು. ತಾಯಿ ಅಲ್ಲಿ ಉದ್ಭವವಾದವಳು. ಅಲ್ಲಿಂದ ಬೆಂಗಳೂರಿಗೆ ಬಂದ ಹಿಂದೆ ಕತೆಯೊಂದಿದೆ.

59

ಬಳಪದಮಟ್ಟಿಕೊಪ್ಪಲಿನಲ್ಲಿ 100 ವರ್ಷಗಳ ಹಿಂದೆ ಪ್ಲೇಗ್ ಬಂದಾಗ ಜನರೆಲ್ಲ ವಲಸೆ ಹೋಗುವುದನ್ನು ನೋಡಿದ ತಾಯಿ ವರ್ಷಕ್ಕೊಮ್ಮೆ ಜಾತ್ರೆ ಮಾಡಿದರೆ ಸಾಕು, ರಕ್ಷಿಸುವುದಾಗಿ ಹೇಳುತ್ತಾಳೆ. 

69

ಬಳಪದಮಟ್ಟಿಕೊಪ್ಪಲಿನಲ್ಲಿ ಭಕ್ತಾದಿಗಳು ಜಾಸ್ತಿಯಾದ ನಂತರ ಆಕೆಯ ಪ್ರೇರೇಪಣೆಯ ಮೇರೆಗೆ ಬೆಂಗಳೂರಿನ ಲಗ್ಗೆರೆಯಲ್ಲಿ ದೇವಸ್ಥಾನ ಕಟ್ಟಲಾಗಿದೆ. ಆಕೆಯಲ್ಲಿ ಬೇಡಿದ್ದೆಲ್ಲ ಆಗೇ ಆಗುತ್ತೆ ಎಂಬ ನಂಬಿಕೆ ಇದೆ.

79

ಮಕ್ಕಳಾಗದೆ ಹಲವಾರು ವರ್ಷವಾದ ದಂಪತಿ ಇಲ್ಲಿಗೆ ಭೇಟಿ ನೀಡುತ್ತಿದ್ದಂತೆ ಮಕ್ಕಳನ್ನು ಪಡೆದಿದ್ದು, ಮದುವೆಯಾಗದವರಿಗೆ ಕೂಡಲೇ ಉತ್ತಮ ಸಂಬಂಧ ಒದಗಿಸಿದ್ದು ಸೇರಿದಂತೆ ಸಾಕಷ್ಟು ಪವಾಡಗಳಿಗೆ ಸಾಕ್ಷಿಯಾಗಿದೆ ಈ ದೇವಾಲಯ.

89

ಈ ದೇವಾಲಯದಲ್ಲಿ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ಇರುತ್ತದೆ. ತಾಯಿಯ ಮುಖದ ಕಳೆಯೇ ಭಕ್ತರಿಗೆ ಬೇಡಿದ್ದನ್ನು ಈಡೇರಿಸುವ ಭರವಸೆ ನೀಡುತ್ತದೆ.

99

ತಾಯಿಯನ್ನು ನಂಬಿದವರೆಲ್ಲರೂ ಆಕೆಯ ಪವಾಡಗಳಿಗೆ ಸಾಕ್ಷಿಯಾಗಿದ್ದಾರೆ. ಬಹಳಷ್ಟು ಬೆಟ್ಟದಂತ ಸಮಸ್ಯೆಗಳು ಬಂಧಮ್ಮ ತಾಯಿಯನ್ನು ನಂಬಿದಾಗ ಬೆಣ್ಣೆಯಂತೆ ಕರಗಿದ ಉದಾಹರಣೆಗಳಿವೆ..

Read more Photos on
click me!

Recommended Stories