ಕೆಲವೊಮ್ಮೆ ನಾವು ಏನೇನೋ ತಪ್ಪು ಅಥವಾ ಕೆಟ್ಟದ್ದನ್ನು ಮಾತನಾಡಿದಾಗ, ಹಿರಿಯರು ನಮಗೆ ಬುದ್ಧಿ ಹೇಳುತ್ತಾರೆ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಿ, ಸರಸ್ವತಿ ದೇವಿ (Saraswathi Devi) ಯಾವ ಸಮಯದಲ್ಲಿ ಬೇಕಾದರೂ ನಿಮ್ಮ ನಾಲಿಗೆ ಮೇಲೆ ಕುಳಿತುಕೊಳ್ಳುತ್ತಾಳೆ. ಆವಾಗ ನೀವು ಮಾತನಾಡಿದ ವಿಷ್ಯ ನಿಜವಾಗುತ್ತೆ. ಹಾಗಾಗಿ ಯೋಚನೆ ಮಾಡಿ ಮಾತನಾಡಿ ಎನ್ನುತ್ತಾರೆ.
ಪ್ರತಿಯೊಬ್ಬರ ಹೃದಯ ಮತ್ತು ಮನಸ್ಸಿನಲ್ಲಿ, ತಾಯಿ ಸರಸ್ವತಿ ಇದ್ದೇ ಇರುತ್ತಾಳೆ. ಆದರೆ ಆಕೆ ತನ್ನ ನಾಲಿಗೆ ಮೇಲೆ ಯಾವಾಗ ಕುಳಿತುಕೊಳ್ಳುತ್ತಾಳೆ ಅನ್ನೋದು ನಮಗೆ ತಿಳಿಯೋದಿಲ್ಲ. ತಾಯಿ ಸರಸ್ವತಿ ನಾಲಿಗೆ ಮೇಲೆ ಕುಳಿತರೆ ಆವಾಗ ನೀವು ಹೇಳುವ ಮಾತುಗಳು ನಿಮಗೆ ವರವಾಗಿ ಅಥವಾ ಶಾಪವಾಗಿ ಬಾಧಿಸಬಹುದು. ಹಾಗಿದ್ರೆ ಅವಳು ಯಾವ ಸಮಯದಲ್ಲಿ ನಾಲಿಗೆಯಲ್ಲಿರುತ್ತಾಳೆ.
ಸರಸ್ವತಿ ದೇವಿಯನ್ನು ಸಂಗೀತ ಮತ್ತು ಕಲಿಕೆಯ (Goddess of Wisdom) ದೇವತೆ ಎಂದು ಕರೆಯಲಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ನೀಡುವ ಮೊದಲು ಪ್ರತಿಯೊಬ್ಬರೂ ಅವರನ್ನು ಪೂಜಿಸುತ್ತಾರೆ. ಇದಲ್ಲದೆ, ಸರಸ್ವತಿ ದಿನಕ್ಕೆ ಒಮ್ಮೆ ನಾಲಿಗೆಯ ಮೇಲೆ ಕುಳಿತುಕೊಳ್ಳುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.
ಸರಸ್ವತಿ ದೇವಿ ಯಾವಾಗ ನಾಲಗೆಯಲ್ಲಿ ಕುಳಿತುಕೊಳ್ಳುತ್ತಾಳೆ?
ನಂಬಿಕೆಯ ಪ್ರಕಾರ, ಸರಸ್ವತಿ ದೇವಿಯು ಮುಂಜಾನೆ 3.20 ರಿಂದ 3.40 ರವರೆಗೆ ನಾಲಿಗೆಯ ಮೇಲೆ ಕುಳಿತುಕೊಳ್ಳುತ್ತಾಳೆ. ಆದ್ದರಿಂದ ಈ ಸಮಯದಲ್ಲಿ ಏನನ್ನಾದರೂ ಮಾತನಾಡುವಾಗ ಯೋಚಿಸಿ (Think before you talk) ಮಾತನಾಡಬೇಕು.
ಮುಂಜಾನೆ 3 ರಿಂದ 4:30 ರ ನಡುವಿನ ಸಮಯವು ದೇವತೆಗಳಿಗೆ ಸೇರಿದೆ ಎಂದು ಹೇಳಲಾಗುತ್ತದೆ. ಇದನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಮನೆಯ ಹಿರಿಯರು ಬ್ರಹ್ಮ ಮುಹೂರ್ತದಲ್ಲಿ (Brahmi Muhurat) ಎದ್ದೇಳಬೇಕು ಎಂದು ಸಲಹೆ ನೀಡುತ್ತಾರೆ.
ಈ ಸಮಯವನ್ನು ಧರ್ಮಗ್ರಂಥಗಳಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಸರಸ್ವತಿ ದೇವಿಯನ್ನು ಮೆಚ್ಚಿಸಲು, ನೀವು ನಿಯಮಿತವಾಗಿ ಸರಸ್ವತಿ ದೇವಿಯ ಮಂತ್ರ ಪಠಣ ಮಾಡಬೇಕು. ಇದರಿಂದ ನಿಮಗೆ ಶ್ರೇಯಸ್ಸು ಉಂಟಾಗುತ್ತದೆ.